ಮಧ್ಯಪ್ರದೇಶ: ವಿವಾಹ ನೋಂದಣಿ ಮಾಡಿಸಲು ಹೋದ ದಂಪತಿ ಮೇಲೆ ವಕೀಲರಿಂದ ದಾಳಿ
ಮದುವೆ ನೋಂದಣಿ ಮಾಡಿಸಲು ಹೋದ ದಂಪತಿಗೆ ವಕೀಲರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಅವರಿಬ್ಬರಲ್ಲಿ ಪುರುಷ ಮುಸ್ಲಿಂ ಧರ್ಮಕ್ಕೆ ಸೇರಿದ್ದು, ಮಹಿಳೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಅವರಿಬ್ಬರೂ ಪ್ರೀತಿ ಮಾಡಿ ಮದುವೆಯಾಗಿದ್ದಷ್ಟೇ ಅಲ್ಲದೆ ಆಕೆ ಈಗ ಗರ್ಭಿಣಿ. ಮದುವೆಯನ್ನು ನೋಂದಣಿ ಮಾಡಿಸಲು ಹೋದಾಗ ವಕೀಲರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಂಪತಿ ದೂರಿದ್ದಾರೆ.

ವಿವಾಹ ನೋಂದಣಿ ಮಾಡಿಸಲು ಹೋದ ದಂಪತಿ ಮೇಲೆ ನ್ಯಾಯಾಲಯದ ಆವರಣದಲ್ಲಿ ವಕೀಲರ ಗುಂಪು ದಾಳಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮಧ್ಯಪ್ರದೇಶದ ರೇವಾದಲ್ಲಿ ಘಟನೆ ನಡೆದಿದ್ದು, ಅವರಿಬ್ಬರಲ್ಲಿ ಪತಿ ಮುಸ್ಲಿಂ ಧರ್ಮಕ್ಕೆ ಸೇರಿದ್ದು, ಮಹಿಳೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಅವರಿಬ್ಬರೂ ಪ್ರೀತಿ ಮಾಡಿ ಮದುವೆಯಾಗಿದ್ದಷ್ಟೇ ಅಲ್ಲದೆ ಆಕೆ ಈಗ ಗರ್ಭಿಣಿ. ಮದುವೆಯನ್ನು ನೋಂದಣಿ ಮಾಡಿಸಲು ಹೋದಾಗ ವಕೀಲರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಂಪತಿ ದೂರಿದ್ದಾರೆ.
ಶುಕ್ರವಾರ ವೈರಲ್ ಆದ ವಿಡಿಯೋದಲ್ಲಿ, ಲೀಸ್ ಅಧಿಕಾರಿಯೊಬ್ಬರು ದಂಪತಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವುದನ್ನು ಕಾಣಬಹುದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿಯ ಪ್ರಕಾರ, ಗುರುತಿಸಲಾಗದ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಆ ಮಹಿಳೆ 2023 ರ ಜೂನ್ 28 ರಂದು ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ರಾಜೀಬ್ ಖಾನ್ ಅವರನ್ನು ವಿವಾಹವಾದರು ಮತ್ತು ಈಗ ಮೂರು ತಿಂಗಳ ಗರ್ಭಿಣಿ. ನ್ಯಾಯಾಲಯದ ಆವರಣದಲ್ಲಿ ಗುಂಪೊಂದು ನನ್ನನ್ನು ಎರಡು ಬಾರಿ ನೆಲಕ್ಕೆ ತಳ್ಳಿತು. ಪಟ್ಟಣ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ವಾಹನದಲ್ಲಿ ನಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುವ ಮೂಲಕ ನಮ್ಮ ಜೀವಗಳನ್ನು ಉಳಿಸಿದರು ನನ್ನ ಹೆತ್ತವರಿಗೆ ನಮ್ಮ ಮದುವೆಗೆ ಯಾವುದೇ ಆಕ್ಷೇಪಣೆ ಇಲ್ಲದಿರುವಾಗ ಈ ಜನರು ನಮ್ಮ ಮೇಲೆ ಏಕೆ ದಾಳಿ ಮಾಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ ಎಂದಿದ್ದಾರೆ.
ಮತ್ತಷ್ಟು ಓದಿ: ಇನ್ನೇನು ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ತುಂಬು ಗರ್ಭಿಣಿಯ ದಾರುಣ ಹತ್ಯೆ!
2021 ರಲ್ಲಿ ಖಾನ್ ತಪ್ಪಾಗಿ ನನ್ನ ಮೊಬೈಲ್ಗೆ ಡಯಲ್ ಮಾಡಿದ ನಂತರ ಮತ್ತು ಇಬ್ಬರೂ ಮಾತನಾಡಲು ಶುರು ಮಾಡಿದ್ದವೆ, ಬಳಿಕ ಅದು ಪ್ರೀತಿಯಾಗಿ ಬದಲಾಗಿತ್ತು. ನಾವು ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೇರೆ ಬೇರೆ ಹಳ್ಳಿಗಳಿಂದ ಬಂದವರು. ತಮ್ಮ ವಿವಾಹವನ್ನು ನೋಂದಾಯಿಸಲು ಕೆಲವು ಕಾಗದಗಳಿಗೆ ಸಹಿ ಹಾಕುವಂತೆ ವಕೀಲರು ಬಯಸಿದ್ದರಿಂದ ತಾನು ಮತ್ತು ಮಹಿಳೆ ನ್ಯಾಯಾಲಯ ಸಂಕೀರ್ಣಕ್ಕೆ ಬಂದಿರುವುದಾಗಿ ಖಾನ್ ಹೇಳಿದ್ದಾರೆ. ತನ್ನ ವಕೀಲರ ಕೊಠಡಿಯೊಳಗೆ ಇದ್ದಾಗ ತನ್ನನ್ನು ಥಳಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಮಹಿಳಾ ವಕೀಲೆ ಶಾರದಾ ಸಿಂಗ್ ಮತ್ತು ಕೆಲವು ಸ್ನೇಹಿತರು ನಮ್ಮನ್ನು ರಕ್ಷಿಸಿದರು. ಕೆಲವು ವಕೀಲರು ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಖಾನ್ ಮತ್ತು ಅವರ ಸಹಚರರಿಗೆ ಸುರಕ್ಷತೆ ನೀಡುವಂತೆ ಕೋರಿದ ನಂತರ ದಂಪತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ