AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

25 ದಿನದೊಳಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡುವಂತಿಲ್ಲ; ಸರ್ಕಾರದಿಂದ ಹೊಸ ನಿಯಮ ಜಾರಿ

ನೀವು ಎಲ್​ಪಿಜಿ ಸಿಲಿಂಡರ್ ಗ್ರಾಹಕರಾಗಿದ್ದರೆ ಒಂದು ಸಿಲಿಂಡರ್ ತೆಗೆದುಕೊಂಡ ದಿನದಿಂದ 26 ದಿವಸದ ಒಳಗೆ ಮತ್ತೊಂದು ಸಿಲಿಂಡರ್ ಬುಕಿಂಗ್ ಆಗುವುದಿಲ್ಲ. 25 ದಿನ ಕಳೆದ ನಂತರ ಅಂದರೆ 26ನೇ ದಿನದ ಬಳಿಕ ಮತ್ತೆ ಗ್ಯಾಸ್ ಬುಕ್ ಮಾಡಬಹುದು. ಹಳ್ಳಿ ಆಗಲಿ ಪಟ್ಟಣ ಆಗಲಿ ಬುಕಿಂಗ್ ಆದಮೇಲೆ ಡೆಲಿವರಿ ಬಾಯ್ಸ್ ಸಿಲಿಂಡರ್ ನಿಮ್ಮ ಊರಿಗೆ ತಂದಾಗ DAC ಕೋಡ್ ನಂಬರ್ ಕೊಟ್ಟರೆ ಮಾತ್ರ ಸಿಲಿಂಡರ್ ವಿತರಣೆ ಮಾಡಲು ಸಾಧ್ಯ. DAC ನಂಬರ್ ಕೊಟ್ಟಿಲ್ಲವೆಂದರೆ ಸಿಲಿಂಡರ್ ನೀಡಲಾಗುವುದಿಲ್ಲ.

25 ದಿನದೊಳಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡುವಂತಿಲ್ಲ; ಸರ್ಕಾರದಿಂದ ಹೊಸ ನಿಯಮ ಜಾರಿ
Indane Lpg
ಸುಷ್ಮಾ ಚಕ್ರೆ
|

Updated on: Mar 11, 2026 | 5:59 PM

Share

ನವದೆಹಲಿ, ಮಾರ್ಚ್ 11: ದೇಶೀಯ LPG ಸಿಲಿಂಡರ್ (LPG cylinder) ರೀಫಿಲ್ಲಿಂಗ್ ಕಾಯ್ದಿರಿಸಲು ಕನಿಷ್ಠ ಕಾಯುವ ಅವಧಿಯನ್ನು ಸರ್ಕಾರ 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿದೆ. ಹೀಗಾಗಿ, ನೀವು ಒಮ್ಮೆ ಸಿಲಿಂಡರ್ ಬುಕ್ ಮಾಡಿದರೆ 25 ದಿನಗಳು ಕಳೆಯುವವರೆಗೆ ಇನ್ನೊಂದು ಸಿಲಿಂಡರ್ ಬುಕ್ ಮಾಡುವಂತಿಲ್ಲ. ಅಡುಗೆ ಅನಿಲ ಕೊರತೆಯ ಬಗ್ಗೆ ದೇಶಾದ್ಯಂತ ಭಯ ಆವರಿಸಿದೆ. ಆತಂಕಗೊಂಡ ಗ್ರಾಹಕರಿಂದ ಗ್ಯಾಸ್ ಏಜೆನ್ಸಿಗಳಿಗೆ ಕರೆಗಳು ಮತ್ತು ಸಿಲಿಂಡರ್‌ಗಳಿಗಾಗಿ ಬಹು ವಿನಂತಿಗಳು ಬರುತ್ತಿವೆ.

ಜನರು ಮುಗಿಬಿದ್ದು ಗ್ಯಾಸ್ ಬುಕ್ ಮಾಡಲು ಕರೆ ಮಾಡುತ್ತಾ ಇರುವುದರಿಂದ ಸರ್ವರ್ ಬ್ಯುಸಿ ಆಗಿದೆ. ಗ್ರಾಹಕರು ಸಾವಧಾನವಾಗಿ ನಿಮ್ಮ ಸಿಲಿಂಡರ್ ಬುಕ್ ಮಾಡಿಕೊಳ್ಳಿ. ಗೃಹಬಳಕೆ ಸಿಲಿಂಡರ್ ಬಗ್ಗೆ ಸದ್ಯಕ್ಕೆ ಆತಂಕ ಬೇಡ. ಬೇಕಾದಷ್ಟು ಸ್ಟಾಕ್ ಬರುತ್ತಿದೆ. ಆದರೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶೀಯ ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ಗಳ ನಡುವೆ ಕನಿಷ್ಠ 25 ದಿನಗಳ ಅಂತರವನ್ನು ಕಡ್ಡಾಯಗೊಳಿಸಿದೆ ಎಂದು ದೃಢಪಡಿಸಿದೆ. ಇರಾನ್‌ನಲ್ಲಿನ ಯುದ್ಧದಿಂದಾಗಿ ಇಂಧನ ಬಿಕ್ಕಟ್ಟಿನ ಸಾಧ್ಯತೆ ಇರುವುದರಿಂದ ದೇಶೀಯ ಬಳಕೆಗಾಗಿ ಎಲ್‌ಪಿಜಿ ರೀಫಿಲ್ಲಿಂಗ್ ಪಡೆಯಲು ಕಾಯುವ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಎಲ್​ಪಿಜಿ ಪೂರೈಕೆ ಬಿಕ್ಕಟ್ಟು ಬಗೆಹರಿಸಲು ಸರ್ಕಾರದಿಂದ ಸಮಿತಿ ರಚನೆ

ಇರಾನ್ ಹರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ತೈಲ ಬೆಲೆಗಳಲ್ಲಿ ಏರಿಕೆಯಾಗುವ ಬಗ್ಗೆ ಕಳವಳ ಹೆಚ್ಚಾಗಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಯುಎಸ್, ಇಸ್ರೇಲ್, ಯುರೋಪ್ ಮತ್ತು ಅವರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಹಡಗುಗಳಿಗೆ ಮಾತ್ರ ಜಲಸಂಧಿಯನ್ನು ಮುಚ್ಚಲಾಗುತ್ತದೆ ಎಂದು ಹೇಳಿದ್ದರೂ ಸಹ ಆತಂಕವಿನ್ನೂ ಕಡಿಮೆಯಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂ.?
LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂ.?
ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದವರಿಗೆ ವಿದ್ಯುತ್ ತಗುಲಿ 2 ಸಾವು
ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದವರಿಗೆ ವಿದ್ಯುತ್ ತಗುಲಿ 2 ಸಾವು
ಕುಡಿದು ವಾಹನ ಓಡಿಸಿದ್ದಕ್ಕೆ ಕ್ಯಾಂಟರ್ ಚಾಲಕನಿಗೆ ಥಳಿಸಿದ ಗ್ರಾಮಸ್ಥರು
ಕುಡಿದು ವಾಹನ ಓಡಿಸಿದ್ದಕ್ಕೆ ಕ್ಯಾಂಟರ್ ಚಾಲಕನಿಗೆ ಥಳಿಸಿದ ಗ್ರಾಮಸ್ಥರು