AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2.40 ಕೋಟಿ ವಂಚನೆ ಪ್ರಕರಣ: ತಮನ್ನಾ ಭಾಟಿಯಾ, ಕಾಜಲ್​ಗೆ ಪೊಲೀಸರ ನೊಟೀಸ್

Tamannah Bhatia: ನಟಿ ತಮನ್ನಾ ಭಾಟಿಯಾ ಹಾಗೂ ಕಾಜಲ್ ಅಗರ್ವಾಲ್ ಇಬ್ಬರೂ ಸಹ ತಾವಾಯಿತು, ತಮ್ಮ ಸಿನಿಮಾಗಳಾಯಿತು, ಇನ್​ಸ್ಟಾಗ್ರಾಂ ಆಯಿತು ಎಂದು ಆರಾಮವಾಗಿದ್ದಾರೆ. ಆದರೆ ಇದೀಗ ಈ ಇಬ್ಬರು ನಟಿಯರಿಗೆ ಪೊಲೀಸರು ನೊಟೀಸ್ ನೀಡಿದ್ದು, ಶೀಘ್ರವೇ ಈ ಇಬ್ಬರು ನಟಿಯನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

2.40 ಕೋಟಿ ವಂಚನೆ ಪ್ರಕರಣ: ತಮನ್ನಾ ಭಾಟಿಯಾ, ಕಾಜಲ್​ಗೆ ಪೊಲೀಸರ ನೊಟೀಸ್
Tamanna Bhatia
Follow us
ಮಂಜುನಾಥ ಸಿ.
|

Updated on: Feb 28, 2025 | 3:07 PM

ಇನ್ನೊಬ್ಬರು ಮಾಡಿದ ತಪ್ಪಿಗೆ, ಮೋಸಕ್ಕೆ ಕೆಲವೊಮ್ಮೆ ಸಿನಿಮಾ ನಟ, ನಟಿಯರು ಸಮಸ್ಯೆಗೆ ಸಿಕ್ಕಿಕೊಳ್ಳುವುದುಂಟು. ಕೆಲ ತಿಂಗಳ ಹಿಂದೆ ದೇಶದಾದ್ಯಂತ ಸುದ್ದಿಯಾಗಿದ್ದ ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ವಿಷಯದಲ್ಲಿ ಬಾಲಿವುಡ್​ನ ಹಲವು ಸ್ಟಾರ್ ನಟರಿಗೆ ಪೊಲೀಸರು ನೊಟೀಸ್ ನೀಡಿ ವಿಚಾರಣೆ ನಡೆಸಿದ್ದರು. ಇದೀಗ ನಟಿಯರಾದ ತಮನ್ನಾ ಭಾಟಿಯಾ ಮತ್ತು ನಟಿ ಕಾಜಲ್ ಅಗರ್ವಾಲ್ ಅವರುಗಳು ಇಂಥಹುದೇ ಒಂದು ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

2.40 ಕೋಟಿ ವಂಚನೆ ಪ್ರಕರಣದಲ್ಲಿ ನೀಡಲಾಗಿರುವ ದೂರಿನಲ್ಲಿ ತಮನ್ನಾ ಭಾಟಿಯಾ ಮತ್ತು ಕಾಜಲ್ ಅಗರ್ವಾಲ್ ಅವರನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ. ಪದುಚೆರಿ ಪೊಲೀಸ್ ಠಾಣೆಯಲ್ಲಿ ವಂಚಕರ ಜೊತೆಗೆ ತಮನ್ನಾ ಹಾಗೂ ಕಾಜಲ್ ವಿರುದ್ಧವೂ ಸಂತ್ರಸ್ತರು ದೂರು ನೀಡಿದ್ದು, ಇಬ್ಬರು ಮುಖ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇದೀಗ ತಮನ್ನಾ ಭಾಟಿಯಾ ಮತ್ತು ಕಾಜಲ್ ಅಗರ್ವಾಲ್ ಅವರುಗಳ ವಿಚಾರಣೆಗೆ ಮುಂದಾಗಿದ್ದಾರೆ.

2020 ರಲ್ಲಿ ಕ್ರಿಸ್ಟೊ ಕರೆನ್ಸಿ ಕಂಪೆನಿ ಹೆಸರಿನ ಕಂಪೆನಿಯನ್ನು ಕೊಯಂಬತ್ತೂರಿನಲ್ಲಿ ಸ್ಥಾಪಿಸಲಾಯ್ತು. ಅದ್ಧೂರಿಯಾಗಿ ನಡೆದ ಈ ಕಂಪೆನಿಯ ಉದ್ಘಾಟನೆಗೆ ನಟಿ ತಮನ್ನಾ ಭಾಟಿಯಾ ಅತಿಥಿಯಾಗಿ ಆಗಮಿಸಿದ್ದರು. ಆ ನಂತರ ಕಂಪೆನಿಯ ವಾರ್ಷಿಕ ಮಹೋತ್ಸವವನ್ನು ಮಹಬಲಿಪುರಂನ ಐಶಾರಾಮಿ ಹೋಟೆಲ್​ನಲ್ಲಿ ಮಾಡಲಾಗಿದೆ ಆ ಕಾರ್ಯಕ್ರಮಕ್ಕೆ ನಟಿ ಕಾಜಲ್ ಅಗರ್ವಾಲ್ ಆಗಮಿಸಿದ್ದರು. ಆದರೆ ಇದೀಗ ಈ ಕಂಪೆನಿ ವಿರುದ್ಧ, ಹೂಡಿಕೆದಾರರು ದೂರು ದಾಖಲಿಸಿದ್ದು, ಕಂಪೆನಿಯು ತಮಗೆ 2.40 ಕೋಟಿ ವಂಚನೆ ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ:ಮಹಾಕುಂಭಮೇಳದಲ್ಲಿ ನಟಿ ತಮನ್ನಾ ಭಾಟಿಯಾ ಪುಣ್ಯ ಸ್ನಾನ

ನಿವೃತ್ತಿ ಸರ್ಕಾರಿ ನೌಕರ ಅಶೋಕ್ ಎಂಬುವರು ಪುದುಚೆರಿ ಪೊಲೀಸರಿಗೆ ನೀಡಿರುವ ದೂರಿನನ್ವಯ ಕ್ರಿಸ್ಟೊ ಕರೆನ್ಸಿ ಕಂಪೆನಿ ತಮ್ಮ ಹಾಗೂ ತಮ್ಮ ಹತ್ತಿರದ ಸುಮಾರು 10 ಜನರಿಂದ ಭಾರಿ ಮೊತ್ತದ ಹಣ ಹೂಡಿಕೆ ಮಾಡಿಕೊಂಡಿದ್ದು, ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಇದೀಗ ವಂಚನೆ ಎಸಗಿದೆ. ಸುಮಾರು 2.40 ಕೋಟಿ ರೂಪಾಯಿ ಹಣವನ್ನು ಕಂಪೆನಿ ತಮಗೆ ಮೋಸ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ಮುಖ್ಯ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಈ ಹಿಂದೆಯೂ ಸಹ ಇಂಥಹಾ ಹಲವು ಪ್ರಕರಣಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು ಸಿಲುಕಿಕೊಂಡಿದ್ದಿದೆ. ಯಾವುದೋ ಕಂಪೆನಿಯನ್ನು ಸೆಲೆಬ್ರಿಟಿಗಳು ಹಣದ ಆಸೆಗೆ ಪ್ರಚಾರ ಮಾಡುತ್ತಾರೆ ಆ ಬಳಿಕ ಆ ಕಂಪೆನಿ ಜನರಿಗೆ ಮೋಸ ಮಾಡಿ, ಕೇಸು ದಾಖಲಾದಾಗ ಸೆಲೆಬ್ರಿಟಿಗಳು ಸಹ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ