AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ-ಪ್ರಿಯಾಂಕಾ ಮಧ್ಯೆ ಯಾವುದೂ ಸರಿ ಇಲ್ಲ? ಇಲ್ಲಿದೆ ಅಸಲಿ ವಿಚಾರ

ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಅವರ ನಡುವಿನ ವಿವಾದದ ಬಗ್ಗೆ ಈ ಬಗ್ಗೆ ಹೇಳಲಾಗುತ್ತಿದೆ. ‘ರಾಮ್‌ಲೀಲಾ’ ಚಿತ್ರದಲ್ಲಿ ನಾಯಕಿಯ ಪಾತ್ರ ದೀಪಿಕಾಗೆ ಸಿಕ್ಕಿದ್ದು, ಪ್ರಿಯಾಂಕಾ ಒಂದು ಹಾಡಿಗೆ ಮಾತ್ರ ಕಾಣಿಸಿಕೊಂಡಿದ್ದರು. ಇದು ವಿವಾದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪ್ರಿಯಾಂಕಾ ಅವರ ತಾಯಿ ಈ ಬಗ್ಗೆ ಮಾತನಾಡಿ, ಈ ಘಟನೆಯನ್ನು ಸ್ಪಷ್ಟಪಡಿಸಿದ್ದಾರೆ ಮತ್ತು ಇಬ್ಬರ ನಡುವೆ ಯಾವುದೇ ದ್ವೇಷ ಇಲ್ಲ ಎಂದು ಹೇಳಿದ್ದಾರೆ.

ದೀಪಿಕಾ-ಪ್ರಿಯಾಂಕಾ ಮಧ್ಯೆ ಯಾವುದೂ ಸರಿ ಇಲ್ಲ? ಇಲ್ಲಿದೆ ಅಸಲಿ ವಿಚಾರ
ದೀಪಿಕಾ-ಪ್ರಿಯಾಂಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Mar 06, 2025 | 10:33 AM

Share

ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್​ನ ಶ್ರೇಷ್ಠ ನಟಿಯರಲ್ಲಿ ಒಬ್ಬರು. ಇಬ್ಬರೂ ಹಲವು ವರ್ಷಗಳ ಕಾಲ ಇಂಡಸ್ಟ್ರಿಯಲ್ಲಿ ಇದ್ದವರು. ಆದರೆ, ಇವರ ಮಧ್ಯೆ ಕಿರಿಕ್ ಆಗಿದೆ ಎಂಬ ಮಾತು ಕೇಳಿ ಬಂದಿತ್ತು. ಕೆಲವರು ಇದನ್ನು ಒಪ್ಪಿದರೆ ಇನ್ನೂ ಕೆಲವರು ಒಪ್ಪುವುದಿಲ್ಲ. ಈ ವಿವಾದ ಶುರುವಾಗಿದ್ದು ಹೇಗೆ? ಇದಕ್ಕೆ ಕಾರಣ ಆಗಿದ್ದು ‘ರಾಮ್​ಲೀಲಾ’ ಚಿತ್ರದಲ್ಲಿ ಆದ ಕಿರಿಕ್ ಎಂದು ಹೇಳಲಾಗುತ್ತದೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇಂದು ನಾವು ಚರ್ಚಿಸೋಣ.

ದೀಪಿಕಾ ಪಡುಕೋಣೆ ಅವರು ‘ರಾಮ್​ಲೀಲಾ’ ಚಿತ್ರದಲ್ಲಿ ನಟಿಸಿದರು. ರಣವೀರ್ ಸಿಂಗ್ ಹಾಗೂ ದೀಪಿಕಾ ಕೆಮಿಸ್ಟ್ರಿ ಗಮನ ಸೆಳೆಯಿತು. ಈ ಚಿತ್ರದಲ್ಲಿ ಪ್ರಿಯಾಂಕಾ ಅವರು ಒಂದು ಸಾಂಗ್​​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಸಲಿಗೆ ಹೇಳಬೇಕು ಎಂದರೆ ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲೇ ಪ್ರಿಯಾಂಕಾ ಕಾಣಿಸಿಕೊಳ್ಳಬೇಕಿತ್ತಂತೆ. ಆದರೆ, ಅಲ್ಲಿ ಆಗಿದ್ದೇ ಬೇರೆ. ಈ ಆಫರ್ ದೀಪಿಕಾ ಪಾಲಾಯಿತು. ಈ ಬಗ್ಗೆ ಪ್ರಿಯಾಂಕಾ ತಾಯಿ ಮಾತನಾಡಿದ್ದಾರೆ.

ಮಧು ಚೋಪ್ರಾ ಪ್ರಿಯಾಂಕಾ ಅವರ ತಾಯಿ. ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ಆ ಘಟನೆ ಬಗ್ಗೆ ಹೆಚ್ಚು ನೆನಪಿಲ್ಲ. ನಾನು ಆಗ ಕ್ಲಿನಿಕ್​ನಲ್ಲಿ ಇದ್ದೆ. ಅವಳು ಮರಳಿ ಬಂದಾಗ ನಾನು ಸಿನಿಮಾದಲ್ಲಿ ಸಾಂಗ್ ಒಂದನ್ನು ಮಾಡೋದು ಮಾತ್ರ ಉತ್ತಮ ಎಂದಳು. ಏನಾಯಿತು ಎಂದು ಕೇಳಿದೆ. ಅವಳು ಹೆಚ್ಚು ಮಾತನಾಡಲಿಲ್ಲ. ಅದೇ ಬೇಸ್ಟ್​ ಎಂದಳು’ ಎಂದಿದ್ದಾರೆ ಮಧು.

ಇದನ್ನೂ ಓದಿ
Image
ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಂದ ಟಾಕ್ಸಿಕ್ ನಟಿ ಕಿಯಾರಾ?
Image
ತಮನ್ನಾ ಭಾಟಿಯಾ, ವಿಜಯ್ ವರ್ಮಾ ಬ್ರೇಕಪ್; ಇನ್ಮುಂದೆ ಕೇವಲ ಫ್ರೆಂಡ್ಸ್
Image
ತೆಲುಗಿನಲ್ಲೂ ಧೂಳೆಬ್ಬಿಸಲಿದೆ ‘ಛಾವ’ ಸಿನಿಮಾ; ರಶ್ಮಿಕಾ ಅಭಿಮಾನಿಗಳಿಗೆ ಖುಷಿ
Image
ಸಿದ್ದಾರ್ಥ್-ಕಿಯಾರಾ ಕಡೆಯಿಂದ ಹೊಸ ಸುದ್ದಿ; ದಂಪತಿಯ ಒಟ್ಟೂ ಆಸ್ತಿ ಎಷ್ಟು?

‘ನನ್ನ ಮಗಳು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಳು ಅನಿಸುತ್ತದೆ. ಅವಳು ಕೇವಲ ಡ್ಯಾನ್ಸ್ ಮಾಡಲು ಒಪ್ಪಿದ್ದಾಳೆ ಎಂದರೆ ಅದಕ್ಕೆ ಕಾರಣ ಅವರಿನ್ನೂ ಒಳ್ಳೆಯ ಫ್ರೆಂಡ್ಸ್. ಅವಳಿಗೆ ರಿವೇಂಜ್ ಮನೋಭಾವ ಇಲ್ಲ’ ಎಂದಿದ್ದಾರೆ ಪ್ರಿಯಾಂಕಾ ತಾಯಿ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಕಮ್​ ಬ್ಯಾಕ್ ಯಾವಾಗ? ಯಾವ ಸಿನಿಮಾ ಮೂಲಕ ಎಂಟ್ರಿ

ಬಾಲಿವುಡ್​ನಲ್ಲಿ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಅವರು ಚಿತ್ರರಂಗದ ತೊರೆದರು ಎನ್ನಲಾಗಿತ್ತು. ಆದರೆ, ಇದರಲ್ಲಿ ಸತ್ಯ ಇಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ. ಮಹೇಶ್ ಬಾಬು ಹಾಗೂ ರಾಜಮೌಳಿ ಚಿತ್ರದಲ್ಲಿ ಅವರು ನಾಯಕಿ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Thu, 6 March 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್