Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ?

ಬಹುಬೇಡಿಕೆಯ ನಟಿಯಾಗಿ ಕಿಯಾರಾ ಅಡ್ವಾಣಿ ಅವರು ಗುರುತಿಸಿಕೊಂಡಿದ್ದಾರೆ. ‘ಟಾಕ್ಸಿಕ್’, ‘ವಾರ್ 2’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿ ಇವೆ. ಆದರೆ ಅವರು ಪ್ರೆಗ್ನೆಂಟ್ ಆದ್ದರಿಂದ ಕೆಲವು ಸಿನಿಮಾಗಳಿಂದ ಹೊರಗೆ ಬರುವುದು ಅನಿವಾರ್ಯ ಆಗಿದೆ ಎಂಬ ಮಾತು ಕೇಳಿಬಂದಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ?
Kiara Advani
Follow us
ಮದನ್​ ಕುಮಾರ್​
|

Updated on: Mar 05, 2025 | 7:28 PM

ಖ್ಯಾತ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಇತ್ತೀಚೆಗಷ್ಟೇ ಗುಡ್ ನ್ಯೂಸ್ ನೀಡಿದ್ದರು. ಮೊದಲ ಮಗುವಿನ ಆಗಮನದಲ್ಲಿ ತಾವು ಇರುವುದಾಗಿ ತಿಳಿಸಿದ್ದರು. ಕಿಯಾರಾ ಅಡ್ವಾಣಿ ಪ್ರೆಗ್ನೆಂಟ್ ಎಂಬ ವಿಷಯ ತಿಳಿಯುತ್ತಿದಂತೆಯೇ ಅಭಿಮಾನಿಗಳು ಸಂಭ್ರಮಿಸಿದರು. ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್​ ಮಲ್ಹೋತ್ರಾ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಈ ನಡುವೆ ಇನ್ನೊಂದು ಸುದ್ದಿ ಕೇಳಿಬರುತ್ತಿದೆ. ಪ್ರೆಗ್ನೆಂಟ್ ಆದ ನಂತರ ಕಿಯಾರಾ ಅಡ್ವಾಣಿ ಅವರಿಗೆ ‘ಡಾನ್ 3’ ಸಿನಿಮಾದ ಅವಕಾಶ ಕೈತಪ್ಪಿದೆ ಎನ್ನಲಾಗಿದೆ.

ಕಿಯಾರಾ ಅಡ್ವಾಣಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈಗಾಗಲೇ ಅವರು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಮಹತ್ವದ ಪ್ರಾಜೆಕ್ಟ್​ಗಳು ಇವೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೂ ಕಿಯಾರಾ ಅಡ್ವಾಣಿ ನಾಯಕಿ ಆಗಿದ್ದಾರೆ. ಹೃತಿಕ್ ರೋಷನ್, ಜೂನಿಯರ್​ ಎನ್​ಟಿಆರ್​ ನಟನೆಯ ‘ವಾರ್​ 2’ ಸಿನಿಮಾ ಕೂಡ ಕಿಯಾರಾ ಅಡ್ವಾಣಿ ಕೈಯಲ್ಲಿದೆ. ಆದರೆ ‘ಡಾನ್ 3’ ಚಿತ್ರ ಕೈತಪ್ಪುತ್ತಿದೆ ಎಂಬ ಸುದ್ದಿ ಹರಡಿದೆ.

ಫರ್ಹಾನ್ ಅಖ್ತರ್​ ಅವರು ‘ಡಾನ್ 3’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ರಣವೀರ್ ಸಿಂಗ್ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಪ್ರೆಗ್ನೆಂಟ್ ಆದ ಬಳಿಕ ಶೂಟಿಂಗ್​ನಲ್ಲಿ ಭಾಗಿಯಾಗುವುದು ಕಷ್ಟ ಎಂಬ ಕಾರಣಕ್ಕೆ ಕಿಯಾರಾ ಅಡ್ವಾಣಿ ಅವರು ‘ಡಾನ್ 3’ ಪಾತ್ರವರ್ಗದಿಂದ ಹೊರನಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ.

ಇದನ್ನೂ ಓದಿ
Image
ಟಾಕ್ಸಿಕ್ ಶೂಟಿಂಗ್ ನಡೆಯುವಾಗಲೇ ಪ್ರೆಗ್ನೆನ್ಸಿ ಘೋಷಿಸಿದ ಕಿಯಾರಾ; ಮುಂದೇನು?
Image
ತಾಯಿ ಆಗುತ್ತಿರುವ ‘ಟಾಕ್ಸಿಕ್’ ನಟಿ ಕಿಯಾರಾ ಅಡ್ವಾಣಿ; ಸಿಕ್ತು ಗುಡ್ ನ್ಯೂಸ್
Image
ಈ ಫೋಟೋದಲ್ಲಿರುವ ಸ್ಟಾರ್ ನಟಿ ಯಾರು? ಯಶ್ ಜೊತೆ ನಟಿಸುತ್ತಿದ್ದಾರೆ
Image
ಮದುವೆಯಲ್ಲಿ ಲೆಹೆಂಗಾ ತೊಟ್ಟ ಕಿಯಾರಾ ಅಡ್ವಾಣಿ ಎಷ್ಟೊಂದು ಕ್ಯೂಟ್​; ಇಲ್ಲಿವೆ ಫೋಟೋಸ್

ಇದನ್ನೂ ಓದಿ: ಸಿದ್ದಾರ್ಥ್-ಕಿಯಾರಾ ಕಡೆಯಿಂದ ಹೊಸ ಸುದ್ದಿ; ದಂಪತಿಯ ಒಟ್ಟೂ ಆಸ್ತಿ ಎಷ್ಟು?

ಕಿಯಾರಾ ಅಡ್ವಾನಿ ಅವರು ‘ಡಾನ್ 3’ ಸಿನಿಮಾ ತಂಡದಿಂದ ಹೊರಗೆ ನಡೆದಿದ್ದರಿಂದ ಈಗ ಬೇರೆ ನಟಿಯ ಆಯ್ಕೆ ಆಗಬೇಕಿದೆ. ಆದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚಿತ್ರತಂಡದವರಾಗಲಿ, ಕಿಯಾರಾ ಅಡ್ವಾಣಿ ಅವರಾಗಲಿ ಏನನ್ನೂ ಹೇಳಿಲ್ಲ. ಚಿತ್ರತಂಡದಿಂದ ಅಧಿಕೃತ ಹೇಳಿಕೆ ಬಂದರಷ್ಟೇ ಖಚಿತ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇದಲ್ಲದೇ ಇನ್ನೂ ಅನೇಕ ಸಿನಿಮಾಗಳಿಗೆ ಕಿಯಾರಾ ಅವರು ನಾಯಕಿ ಆಗಿದ್ದಾರೆ. ಆ ಸಿನಿಮಾಗಳ ಬಗ್ಗೆ ಎಲ್ಲ ಸುದ್ದಿಯೂ ಸದ್ಯಕ್ಕೆ ಅಂತೆ-ಕಂತೆಗಳ ಹಂತದಲ್ಲಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ