AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಶೂಟಿಂಗ್ ನಡೆಯುವಾಗಲೇ ಪ್ರೆಗ್ನೆನ್ಸಿ ಘೋಷಿಸಿದ ಕಿಯಾರಾ; ಮುಂದೇನು?  

‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ವಿಳಂಬವಾಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳು ಹುಸಿಯಾಗಿದೆ. ಈ ನಡುವೆ ನಾಯಕಿ ಕಿಯಾರಾ ಅಡ್ವಾಣಿ ಅವರು ಗರ್ಭಿಣಿಯಾಗಿರುವುದಾಗಿ ಘೋಷಿಸಿದ್ದು, ಚಿತ್ರದ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆಯೇ ಎನ್ನುವ ಪ್ರಶ್ನೆ ಮೂಡಿದೆ. ಕಿಯಾರಾ ಅವರ ಪಾತ್ರದ ಚಿತ್ರೀಕರಣ ಮುಗಿದಿರಬಹುದು ಎಂದು ಹೇಳಲಾಗುತ್ತಿದೆ.

‘ಟಾಕ್ಸಿಕ್’ ಶೂಟಿಂಗ್ ನಡೆಯುವಾಗಲೇ ಪ್ರೆಗ್ನೆನ್ಸಿ ಘೋಷಿಸಿದ ಕಿಯಾರಾ; ಮುಂದೇನು?  
ಕಿಯಾರಾ-ಯಶ್
ರಾಜೇಶ್ ದುಗ್ಗುಮನೆ
|

Updated on: Mar 01, 2025 | 7:32 AM

Share

‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಏಪ್ರಿಲ್​ನಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾದ ಶೂಟಿಂಗ್ ವಿಳಂಬ ಆದ ಕಾರಣ ಅಷ್ಟು ಬೇಗ ಸಿನಿಮಾ ರಿಲೀಸ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಈ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ಪ್ರೆಗ್ನೆನ್ಸಿ ಘೋಷಿಸಿದ್ದಾರೆ. ಈ ವಿಚಾರ ಸಾಕಷ್ಟು ಕುತೂಹಲ ಹಾಗೂ ಅನುಮಾನಗಳಿಗೆ ಕಾರಣ ಆಗಿದೆ.

‘ಟಾಕ್ಸಿಕ್’ ಹೈ ಬಜೆಟ್ ಚಿತ್ರ. ಹೀಗಾಗಿ, ಚಿತ್ರದ ನಿರ್ಮಾಪಕರಾದ ವೆಂಕಟ್ ನಾರಾಯಣ್ ಹಾಗೂ ಯಶ್ ಯಾವ ವಿಚಾರದಲ್ಲೂ ರಾಜಿ ಆಗುತ್ತಿಲ್ಲ. ಹೀಗಿರುವಾಗಲೇ ಚಿತ್ರದ ನಾಯಕಿ ಆಗಿರೋ ಕಿಯಾರಾ ಅವರು ಪ್ರೆಗ್ನೆನ್ಸಿ ಘೋಷಿಸಿದ್ದಾರೆ. ಅಂದರೆ ಇನ್ನು ಅವರು ಶೂಟಿಂಗ್​ಗೆ ಲಭ್ಯವಾಗೋದು ಅನುಮಾನ. ಸಿನಿಮಾ ಶೂಟಿಂಗ್ ಪ್ರಗತಿಯಲ್ಲಿರುವಾಗಲೇ ಕಿಯಾರಾ ಪ್ರೆಗ್ನೆನ್ಸಿ ಘೋಷಿಸಿದ್ದು ಹೇಗೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಕೆಲವರು ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಮಾತ್ರವಲ್ಲದೆ ನಯನತಾರಾ, ಹುಮಾ ಖುರೇಷಿ ಮೊದಲಾದವರೂ ಇದ್ದಾರೆ. ಈ ಕಾರಣಕ್ಕೆ ಕಿಯಾರಾ ಪಾತ್ರಕ್ಕೆ ಹೆಚ್ಚಿನ ಸ್ಕ್ರೀನ್​ಸ್ಪೇಸ್ ಇಲ್ಲದೆ ಇರಬಹುದು ಎಂದು ಕೆಲವರು ಊಹಿಸಿದ್ದಾರೆ. ಹೀಗಾಗಿ, ಅವರ ಭಾಗದ ಶೂಟಿಂಗ್ ಮುಗಿದಿರಬಹುದು ಎಂಬುದು ಕೆಲವರ ಲೆಕ್ಕಾಚಾರ. ಈ ಮೊದಲು ಅವರು ಸಿನಿಮಾ ಸೆಟ್​ಗೆ ತೆರಳುತ್ತಿರುವ ವಿಡಿಯೋಗಳು ವೈರಲ್ ಆಗಿತ್ತು. ಹೀಗಾಗಿ, ಅವರು ಸಿನಿಮಾ ಕೆಲಸ ಮುಗಿದಿರುವುದರಿಂದ ಮಗು ಹೊಂದುವ ನಿರ್ಧಾರಕ್ಕೆ ಬಂದರು ಎನ್ನಲಾಗುತ್ತಿದೆ.

ಇದನ್ನೂ ಓದಿ
Image
ತಾಯಿ ಆಗುತ್ತಿರುವ ‘ಟಾಕ್ಸಿಕ್’ ನಟಿ ಕಿಯಾರಾ ಅಡ್ವಾಣಿ; ಸಿಕ್ತು ಗುಡ್ ನ್ಯೂಸ್
Image
ಅವೆಂಜರ್ಸ್ ಸರಣಿಯಲ್ಲಿ ಶಾರುಖ್ ಖಾನ್? ದೊಡ್ಡ ಹಿಂಟ್ ಕೊಟ್ಟ ಹಾಲಿವುಡ್​ ನಟ
Image
ಕಿಯಾರಾ ಅಡ್ವಾಣಿ ಮೂಲ ಹೆಸರೇನು? ಸಲ್ಲು ಸೂಚನೆಯಿಂದ ಹೆಸರು ಬದಲಾವಣೆ

ಇನ್ನು, ಕಿಯಾರಾ ಅವರು ‘ವಾರ್ 2’ ಚಿತ್ರದ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್, ಜೂನಿಯರ್ ಎನ್​ಟಿಆರ್ ಮೊದಲಾದವರು ಇದ್ದಾರೆ. ಈ ಚಿತ್ರದ ಕೆಲಸಗಳನ್ನು ಕಿಯಾರಾ ಪೂರ್ಣಗೊಳಿಸಿದರೇ ಎನ್ನುವ ಪ್ರಶ್ನೆ ಮೂಡಿದೆ. ಇದರಲ್ಲೂ ಅವರ ಪಾತ್ರ ಏನು? ಅವರಿಗೆ ಸಿಕ್ಕ ಸ್ಕ್ರೀನ್ ಸ್ಪೇಸ್ ಎಷ್ಟು ಎಂಬಿತ್ಯಾದಿ ಪ್ರಶ್ನೆಗಳು ಮೂಡಿದೆ.

ಇದನ್ನೂ ಓದಿ: ತಾಯಿ ಆಗುತ್ತಿರುವ ‘ಟಾಕ್ಸಿಕ್’ ನಟಿ ಕಿಯಾರಾ ಅಡ್ವಾಣಿ; ಶುಭ ಶುಕ್ರವಾರ ಗುಡ್ ನ್ಯೂಸ್

ಕಿಯಾರಾ ಅಡ್ವಾಣಿ ಅವರು 2023ರ ಫೆಬ್ರವರಿಯಲ್ಲಿ ಸಿದ್ದಾರ್ಥ್ ಮಲ್ಹೋತ್ರ ಅವರನ್ನು ಮದುವೆ ಆದರು. ರಾಜಸ್ಥಾನದ ಜೈಸಲ್ಮೇರ್​ನಲ್ಲಿ ವಿವಾಹ ನಡೆಯಿತು. ವಿವಾಹ ಆಗಿ ಸರಿಯಾಗಿ ಎರಡು ವರ್ಷಕ್ಕೆ ಅವರು ತಾಯಿ ಆಗೋ ಬಗ್ಗೆ ಘೋಷಣೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?