ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದಿದ್ದ ಹಿಂದಿ ಪ್ರೇಕ್ಷಕರೇ ಈಗ ತಿರುಗಿ ಬಿದ್ರು; ಟ್ರೋಲ್ ಶುರು
‘ಸಿಕಂದರ್’ ಟ್ರೇಲರ್ನಲ್ಲಿ ರಶ್ಮಿಕಾ ಮಂದಣ್ಣ ನಟನೆ ನೋಡಿ ಅನೇಕರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಸರಿಯಾಗಿ ಲಿಪ್ ಸಿಂಕ್ ಕೂಡ ಮಾಡಲು ಬಂದಿಲ್ಲ ಎಂದು ಟ್ರೋಲ್ ಮಾಡಲಾಗುತ್ತಿದೆ. ಇನ್ನು, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ತಂದೆ-ಮಗಳ ರೀತಿ ಕಾಣುತ್ತಿದೆ ಎಂದು ನೆಟ್ಟಿಗರು ಜರಿದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಅವರು ಖ್ಯಾತಿ ಪಡೆದಿದ್ದಾರೆ. ಅವರು ಮಾಡಿದ ಪ್ಯಾನ್ ಇಂಡಿಯಾ ಸಿನಿಮಾಗಳೆಲ್ಲ ಸೂಪರ್ ಹಿಟ್ ಆಗಿವೆ. ‘ಅನಿಮಲ್’, ‘ಛಾವ’, ‘ಪುಷ್ಪ 2’ ಮುಂತಾದ ಸಿನಿಮಾಗಳ ಯಶಸ್ಸಿನಿಂದ ರಶ್ಮಿಕಾ ಅವರು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಉತ್ತರ ಭಾರತದ ಪ್ರೇಕ್ಷಕರಿಗೂ ರಶ್ಮಿಕಾ ಅಚ್ಚುಮೆಚ್ಚು. ಅವರನ್ನು ನ್ಯಾಷನಲ್ ಕ್ರಶ್ ಎಂದು ಹೊಗಳಿದರು. ಆದರೆ ಈಗ ಯಾಕೋ ಟೈಮ್ ಬದಲಾದಂತೆ ಕಾಣುತ್ತಿದೆ. ಹಿಂದಿ ಪ್ರೇಕ್ಷಕರೇ ರಶ್ಮಿಕಾ ಅವರನ್ನು ಟ್ರೋಲ್ (Troll) ಮಾಡಲು ಆರಂಭಿಸಿದ್ದಾರೆ. ಅದಕ್ಕೆ ಕಾರಣ ಆಗಿರುವುದು ‘ಸಿಕಂದರ್’ (Sikandar) ಸಿನಿಮಾ.
ಬಹುನಿರೀಕ್ಷಿತ ‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿ ಆಗಿದ್ದಾರೆ. ಎ.ಆರ್. ಮುರುಗದಾಸ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 30ರಂದು ‘ಸಿಕಂದರ್’ ಬಿಡುಗಡೆ ಆಗಲಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಅಪ್ಪಟ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನಲ್ಲಿ ‘ಅನಿಮಲ್’ ಮತ್ತು ‘ಛಾವ’ ಸಿನಿಮಾಗಳ ಮೂಲಕ ಭರ್ಜರಿ ಹೆಸರು ಮಾಡಿದರು. ಆಗೆಲ್ಲ ಜನರು ನ್ಯಾಷನಲ್ ಕ್ರಶ್ ಎಂದು ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದರು. ಆದರೆ ಈಗ ‘ಸಿಕಂದರ್’ ಟ್ರೇಲರ್ನಲ್ಲಿ ರಶ್ಮಿಕಾ ಅವರ ಹಾವಭಾವ ಮತ್ತು ಲಿಪ್ ಸಿಂಕ್ ಕೆಟ್ಟದಾಗಿದೆ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ. ಇದು ಸಿನಿಮಾಗೆ ನೆಗೆಟಿವ್ ಆಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಇಷ್ಟೇ ಅಲ್ಲದೇ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವಿನ ವಯಸ್ಸಿನ ಅಂತರದ ಬಗ್ಗೆಯೂ ಜನರು ಟೀಕೆ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರಿಗೆ 59 ವರ್ಷ ವಯಸ್ಸು. ರಶ್ಮಿಕಾ ಅವರಿಗೆ ಈಗ 29ರ ಪ್ರಾಯ. ಇಬ್ಬರ ನಡುವೆ ಬರೋಬ್ಬರಿ 31 ವರ್ಷಗಳ ಗ್ಯಾಪ್ ಇದೆ. ಹಾಗಿದ್ದರೂ ಕೂಡ ಅವರಿಬ್ಬರು ಪ್ರೇಮಿಗಳಾಗಿ ನಟಿಸಿದ್ದಾರೆ. ಇದನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ. ‘ಈ ಜೋಡಿ ತಂದೆ-ಮಗಳ ರೀತಿ ಇದೆ’ ಎಂದು ನೆಟ್ಟಿಗರು ಹೇಳಿದ್ದಾರೆ.
‘ಸಿಕಂದರ್’ ಸಿನಿಮಾ ಟ್ರೇಲರ್:
31 ವರ್ಷ ಕಿರಿಯ ನಟಿಯ ಜೊತೆ ರೊಮ್ಯಾನ್ಸ್ ಮಾಡಿದ್ದಕ್ಕೆ ಸಲ್ಮಾನ್ ಖಾನ್ ತಲೆ ಕೆಡಿಸಿಕೊಂಡಿಲ್ಲ. ‘ಇದರಿಂದ ನಿಮಗೇನು ತೊಂದರೆ’ ಎಂದು ಅವರು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಈದ್ ಪ್ರಯುಕ್ತ ‘ಸಿಕಂದರ್’ ಬಿಡುಗಡೆ ಆಗುತ್ತಿದ್ದು, ಮೊದಲ ದಿನ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.