- Kannada News Photo gallery Rashmika Mandanna shares new photos after Chhaava movie success Entertainment News in Kannada
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋಗಳು ಇವು. ಅವರ ಎಕ್ಸ್ಪ್ರೆಷನ್ಗಳನ್ನು ನೋಡಿ ಅಭಿಮಾನಿಗಳು ಕ್ಯೂಟ್ ಎನ್ನುತ್ತಿದ್ದಾರೆ. ಹೊಸ ಫೋಟೋಗಳನ್ನು ರಶ್ಮಿಕಾ ಮಂದಣ್ಣ ಅವರು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳಿಂದ ಸಾವಿರಾರು ಮೆಚ್ಚುಗೆಯ ಕಮೆಂಟ್ಗಳು ಬಂದಿದೆ. ಇಲ್ಲಿದೆ ರಶ್ಮಿಕಾ ಅವರ ಫೋಟೋ ಗ್ಯಾಲರಿ.
Updated on: Feb 28, 2025 | 7:06 PM

ರಶ್ಮಿಕಾ ಮಂದಣ್ಣ ಅವರು ಸಖತ್ ಬ್ಯುಸಿ ನಟಿ. ಅಷ್ಟೆಲ್ಲಾ ಬ್ಯುಸಿಯಾಗಿ ಇದ್ದರೂ ಕೂಡ ಅವರು ಫೋಟೋಶೂಟ್ ಮಾಡುವುದು ಮರೆಯಲ್ಲ. ಬಗೆಬಗೆಯಲ್ಲಿ ಎಕ್ಸ್ಪ್ರೆಷನ್ ನೀಡುತ್ತಾ ಅವರು ಕ್ಯಾಮೆರಾ ಎದುರು ನಿಂತಿದ್ದಾರೆ.

ಅಭಿಮಾನಿಗಳಿಂದ ರಶ್ಮಿಕಾ ಮಂದಣ್ಣ ಅವರ ಫೋಟೋಗಳಿಗೆ ಸಾವಿರಾರು ಕಮೆಂಟ್ಸ್ ಬಂದಿದೆ. ‘ನೀವು ಬರೀ ನ್ಯಾಷನಲ್ ಕ್ರಶ್ ಅಲ್ಲ, ಇಂಟರ್ನ್ಯಾಷನಲ್ ಕ್ರಶ್’ ಎಂದು ಕೂಡ ಅಭಿಮಾನಿಗಳು ಹೊಗಳಿದ್ದಾರೆ.

ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರ ಅದೃಷ್ಟ ಕುದುರಿದೆ. ಅವರು ಮಾಡಿದ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದೆ. ‘ಅನಿಮಲ್’, ‘ಛಾವ’, ‘ಪುಷ್ಪ 2’ ಸಿನಿಮಾಗಳ ಮೂಲಕ ರಶ್ಮಿಕಾಗೆ ಬಹುದೊಡ್ಡ ಸಕ್ಸಸ್ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ಒಂದಕ್ಕಿಂದ ಒಂದು ದೊಡ್ಡ ಆಫರ್ ಬರುತ್ತಿವೆ. ಸಲ್ಮಾನ್ ಖಾನ್ ಜೊತೆ ‘ಸಿಕಂದರ್’ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ. ಈದ್ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಲಿದೆ.

ರಶ್ಮಿಕಾ ನಟಿಸಿದ ಸಿನಿಮಾಗಳು ಗೆದ್ದೇ ಗೆಲ್ಲುತ್ತವೆ ಎಂಬ ನಂಬಿಕೆ ನಿರ್ಮಾಪಕರಿಗೆ ಬಂದಿದೆ. ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದ ರಶ್ಮಿಕಾ ಅವರು ಈಗ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ.
























