ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ಭಾಯಿಜಾನ್?
ಅಟ್ಲಿ ನಿರ್ದೇಶನದಲ್ಲಿ ಸಲ್ಮಾನ್ ಖಾನ್ ನಟಿಸಲಿರುವ ಚಿತ್ರ ರದ್ದಾಗಿದೆ. ಸನ್ ಪಿಕ್ಚರ್ಸ್ ಬೃಹತ್ ಬಜೆಟ್ ಚಿತ್ರಕ್ಕೆ ಅಲ್ಲು ಅರ್ಜುನ್ ಅವರನ್ನು ಆಯ್ಕೆ ಮಾಡಿದೆ. ಚಿತ್ರದ ಕಥಾವಸ್ತು ದಕ್ಷಿಣ ಭಾರತೀಯ ಪ್ರೇಕ್ಷಕರಿಗೆ ಹತ್ತಿರವಾಗುವಂತೆ ಬದಲಾಗುತ್ತಿದೆ. ಈ ಬೆಳವಣಿಗೆಯಿಂದ ಬೇಸರಗೊಂಡ ಸಲ್ಮಾನ್ ಖಾನ್ ಅವರಿಗೆ ಅಟ್ಲಿ ಕ್ಷಮೆ ಕೇಳಿದ್ದಾರೆ.

ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾ ಮಾಡಿ ಅಟ್ಲಿ ಅವರು ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದರು. ಆ ಬಳಿಕ ಸಲ್ಮಾನ್ ಖಾನ್ (Salman Khan) ಜೊತೆ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು. ದಕ್ಷಿಣದ ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಲು ಉತ್ಸುಕತೆ ತೋರಿಸಿತ್ತು. ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಮೀರಲಿದೆ ಎನ್ನಲಾಗಿದೆ. ರಜನಿಕಾಂತ್ ಅಥವಾ ಕಮಲ್ ಹಾಸನ್ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ, ಈಗ ಎಲ್ಲಾ ಪ್ಲ್ಯಾನ್ ಫ್ಲಾಪ್ ಆಗಿದೆ. ಸಿನಿಮಾ ಅರ್ಧಕ್ಕೆ ನಿಂತಿದೆ. ಈ ಬೆನ್ನಲ್ಲೇ ಅಟ್ಲಿ ಅವರು ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿದ್ದಾರೆ.
ಅಟ್ಲಿ ಅವರು ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಇದು ಚಿತ್ರರಂಗದ ದೊಡ್ಡ ಸಿನಿಮಾಗಳಲ್ಲಿ ಒಂದಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಸಿನಿಮಾ ಸೆಟ್ಟೇರುವ ಮೊದಲೇ ಸಲ್ಮಾನ್ ಹಾಗೂ ಅಟ್ಲಿ ಅಭಿಮಾನಿ ವಲಯದಲ್ಲಿ ಸಂಭ್ರಮಾಚರಣೆ ಆರಂಭ ಆಗಿತ್ತು. ಆದರೆ, ಇದಕ್ಕೆ ಬ್ರೇಕ್ ಬಿದ್ದಿದೆ. ಈಗ ಸಂಭ್ರಮಿಸುತ್ತಿದ್ದವರೆಲ್ಲರೂ ಗಪ್ ಚುಪ್ ಆಗಿದ್ದಾರೆ. ಈ ನಿರ್ಧಾರದ ಬಗ್ಗೆ ಅಚ್ಚರಿ ಆಗಿದೆ.
ಸದ್ಯದ ಅಪ್ಡೇಟ್ ಪ್ರಕಾರ ಸಲ್ಮಾನ್ ಖಾನ್ ಬದಲು ಅಲ್ಲು ಅರ್ಜುನ್ಗೆ ಸನ್ ಪಿಕ್ಚರ್ಸ್ ಮಣೆ ಹಾಕಿದೆ. ಚಿತ್ರದ ಕಥೆಯನ್ನು ದಕ್ಷಿಣಕ್ಕೆ ತಕ್ಕಂತೆ ಬದಲಿಸಲು ಸಿದ್ಧತೆ ನಡೆದಿದೆ. ಈ ಬೆಳವಣಿಗೆ ಬಗ್ಗೆ ಸಲ್ಲುಗೆ ಬೇಸರ ಆಗಿದೆ. ಇದನ್ನು ಗಮನಿಸಿರೋ ಅಟ್ಲಿ ಅವರು ಕ್ಷಮೆ ಕೇಳುವ ಕೆಲಸ ಮಾಡಿದ್ದಾರೆ.
ಅಟ್ಲಿ ಅವರು ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿದ್ದಾರೆ. 2026ರಲ್ಲಿ ಸಲ್ಲುಗಾಗಿ ಒಂದು ಸಿನಿಮಾ ಮಾಡೋದಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಈ ರೀತಿ ಮಾಡಿದಾಗ ಸಲ್ಲು ಸಿಟ್ಟಾಗುತ್ತಾರೆ. ಅಂಥ ನಿರ್ದೇಶಕರ ಜೊತೆ ಮತ್ತೆ ಕೆಲಸ ಮಾಡೋಕೆ ಬಯಸುವುದಿಲ್ಲ. ಆದರೆ, ಸಲ್ಮಾನ್ ಖಾನ್ ಅವರು ಅಟ್ಲಿ ವಿಚಾರದಲ್ಲಿ ಪಾಸಿಟಿವ್ ಆಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದಕ್ಷಿಣದ ನಿರ್ದೇಶಕನ ಮೇಲೆ ಉರಿದು ಬಿದ್ದ ಸಲ್ಮಾನ್ ಖಾನ್ ಅಭಿಮಾನಿಗಳು, ಕಾರಣ?
ಸಲ್ಮಾನ್ ಖಾನ್ಗೆ ಮೊದಲಿನಷ್ಟು ಬೇಡಿಕೆ ಇಲ್ಲ. ಅವರು ಗೆಲುವು ಕಾಣಲು ಒದ್ದಾಡುತ್ತಿದ್ದಾರೆ. ಹೀಗಿರುವಾಗ ಅವರ ನಂಬಿ 600 ಕೋಟಿ ರೂಪಾಯಿ ಹೂಡಿಕೆ ಮಾಡೋದು ಎಂದರೆ ಅದು ದೊಡ್ಡ ರಿಸ್ಕ್. ಈ ಕಾರಣಕ್ಕೆ ಸನ್ ಪಿಕ್ಚರ್ಸ್ ಈ ರೀತಿಯ ನಿರ್ಧಾರ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:33 am, Fri, 7 March 25