AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಪಕರ ಜೊತೆ ಕಿರಿಕ್; ಸಲ್ಲುಗೆ ಮಾಡಬೇಕಿದ್ದ ಸಿನಿಮಾನ ಅಲ್ಲು ಅರ್ಜುನ್​ಗೆ ಶಿಫ್ಟ್ ಮಾಡಿದ ಅಟ್ಲಿ

ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಮೊದಲು ಸಲ್ಮಾನ್ ಖಾನ್ ನಟಿಸಬೇಕಿತ್ತು. ಆದರೆ, ನಿರ್ಮಾಪಕರ ಷರತ್ತಿನಿಂದಾಗಿ ಚಿತ್ರ ಕೈಬಿಡಲ್ಪಟ್ಟಿತು. ಈಗ ಅದೇ ಕಥೆಯೊಂದಿಗೆ ಅಲ್ಲು ಅರ್ಜುನ್ ನಟಿಸುವ ಸಾಧ್ಯತೆಯಿದೆ. ಜಾನ್ವಿ ಕಪೂರ್ ನಾಯಕಿಯಾಗಿ ಅಭಿನಯಿಸಬಹುದು. ಅಲ್ಲು ಅರ್ಜುನ್ ನಟಿಸುವುದರಿಂದ ನಿರ್ಮಾಪಕರಿಗೆ ಹೆಚ್ಚಿನ ಆಸಕ್ತಿ ಮೂಡಿದೆ.

ನಿರ್ಮಾಪಕರ ಜೊತೆ ಕಿರಿಕ್; ಸಲ್ಲುಗೆ ಮಾಡಬೇಕಿದ್ದ ಸಿನಿಮಾನ ಅಲ್ಲು ಅರ್ಜುನ್​ಗೆ ಶಿಫ್ಟ್ ಮಾಡಿದ ಅಟ್ಲಿ
ಅಲ್ಲು ಅರ್ಜುನ್-ಸಲ್ಮಾನ್
ರಾಜೇಶ್ ದುಗ್ಗುಮನೆ
|

Updated on: Mar 03, 2025 | 12:46 PM

Share

ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡೋಕೆ ಅಟ್ಲಿ ಉತ್ಸುಕರಾಗಿದ್ದರು. ಈ ಚಿತ್ರದ ಬಗ್ಗೆ ಘೋಷಣೆ ಕೂಡ ಆಯಿತು. ಆದರೆ, ನಿರ್ಮಾಪಕರ ಕೆಲವು ಷರತ್ತಿನಿಂದಾಗಿ ಸಿನಿಮಾ ಕೈ ಬಿಡಬೇಕಾದ ಪರಿಸ್ಥಿತಿ ಬಂದಿದೆ. ಈಗ ಇದೇ ಕಥೆಯನ್ನು ಅವರು ಅಲ್ಲು ಅರ್ಜುನ್​ಗೆ ನೀಡಲು ಪ್ಲ್ಯಾನ್ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರ ಜೊತೆ ಈ ಸಿನಿಮಾ ಮಾಡಿ ಅವರು ಗೆಲುವು ಕಾಣುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಮೊದಲು ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಲು ಅಟ್ಲಿ ರೆಡಿ ಆಗಿದ್ದರು. ಕಮಲ್ ಹಾಸನ್ ಅಥವಾ ರಜನಿಕಾಂತ್​ ಅವರನ್ನು ಪ್ರಮುಖ ಪಾತ್ರದಲ್ಲಿ ಹಾಕಿಕೊಳ್ಳಲು ಪ್ಲ್ಯಾನ್ ನಡೆದಿತ್ತು. ಆದರೆ, ಇವರಲ್ಲಿ ಒಬ್ಬರನ್ನು ಕರೆತರಲು ಅಟ್ಲಿ ವಿಫಲರಾದರು. ಹೀಗಾಗಿ, ಕಥೆ ಬದಲಿಸುವಂತೆ ಸನ್ ಪಿಕ್ಚರ್ಸ್ ಸಂಸ್ಥೆ ಅಟ್ಲಿಗೆ ಸೂಚಿಸಿತ್ತು. ಇದಕ್ಕೆ ಒಪ್ಪದೆ ಅಟ್ಲಿ ಹೊರ ಬಂದರು ಎನ್ನಲಾಗಿದೆ.

ಅಟ್ಲಿ ಅವರು ಅಲ್ಲು ಅರ್ಜುನ್ ಜೊತೆಯೂ ಸಿನಿಮಾ ಮಾಡಬೇಕಿದೆ. ಸಲ್ಮಾನ್ ಖಾನ್ ಜೊತೆ ಮಾಡಬೇಕಿದ್ದ ಸಿನಿಮಾದ ಕಥೆಯನ್ನೇ ಅಲ್ಲು ಅರ್ಜುನ್​ಗೆ ಅಟ್ಲಿ ಹೇಳಿದ್ದಾರೆ ಎನ್ನಲಾಗಿದೆ. ಕಥೆಯನ್ನು ಅಲ್ಲು ಅರ್ಜುನ್ ಕೂಡ ಒಪ್ಪಿದ್ದಾರೆ. ಎಲ್ಲವೂ ಫೈನಲ್ ಆದರೆ ಸಲ್ಮಾನ್ ನಟಿಸಬೇಕಿದ್ದ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸೋದು ಫಿಕ್ಸ್ ಆಗಲಿದೆ.

ಇದನ್ನೂ ಓದಿ
Image
ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್
Image
ಸಲ್ಮಾನ್-ಅಟ್ಲಿ ಚಿತ್ರಕ್ಕೆ ಬ್ರೇಕ್; ಆ ನಟನಿಂದ ಅರ್ಧಕ್ಕೆ ನಿಂತಿತು ಸಿನಿಮಾ
Image
ಹಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್; ಸಿಕ್ತು ಬಿಗ್ ನ್ಯೂಸ್

ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ ಎನ್ನಲಾಗಿದೆ. ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರು ಅಲ್ಲು ಅರ್ಜುನ್ ಜೊತೆ ನಟಿಸೋ ಅವಕಾಶ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್

ಹಾಗಾದರೆ ಸಿನಿಮಾಗೆ ಬಂಡವಾಳ ಹೂಡೋದು ಯಾರು? ಅದಕ್ಕೂ ಉತ್ತರ ಇದೆ. ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಈ ಕಾರಣದಿಂದಲೂ ಸನ್ ಪಿಕ್ಚರ್ಸ್ ತಂಡ ಸಲ್ಲು ಸಿನಿಮಾಗೆ ಇಷ್ಟು ದೊಡ್ಡ ಬಂಡವಾಳ ಹೂಡಲು ಭಯಗೊಂಡಿತ್ತು. ಈಗ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎನ್ನುವಾಗ ತಂಡ ಅವರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ