ಸಲ್ಮಾನ್-ಅಟ್ಲಿ ಚಿತ್ರಕ್ಕೆ ಬ್ರೇಕ್; ಆ ನಟನಿಂದ ಅರ್ಧಕ್ಕೆ ನಿಂತೋಯ್ತು ಬಿಗ್ ಬಜೆಟ್ ಸಿನಿಮಾ
ಸಲ್ಮಾನ್ ಖಾನ್ ಮತ್ತು ಅಟ್ಲಿ ಅವರ ಚಿತ್ರದ ಭವಿಷ್ಯ ಅನಿಶ್ಚಿತವಾಗಿದೆ. ಆರಂಭದಲ್ಲಿ ರಜನಿಕಾಂತ್ ಅವರನ್ನು ನಟಿಸಲು ಯೋಜಿಸಲಾಗಿತ್ತು, ಆದರೆ ಚಿತ್ರ ನಿರ್ಮಾಣದಲ್ಲಿ ಸಮಸ್ಯೆಗಳು ಉಂಟಾಗಿವೆ. ಸನ್ ಪಿಕ್ಚರ್ಸ್‌ನ ನಿರ್ಧಾರದಿಂದಾಗಿ ಚಿತ್ರದ ಸ್ಕ್ರಿಪ್ಟ್ ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿಲ್ ಸ್ಮಿತ್ ಅವರನ್ನು ಸಂಪರ್ಕಿಸುವ ಪ್ರಯತ್ನಗಳು ನಡೆದಿವೆ.

ಸಲ್ಮಾನ್ ಖಾನ್ ಹಾಗೂ ಅಟ್ಲಿ ಅವರ ಸಿನಿಮಾ ಸದ್ಯ ಚರ್ಚೆಯಲ್ಲಿದೆ. ಈ ಸಿನಿಮಾ ಅಧಿಕೃತ ಘೋಷಣೆ ಕೂಡ ಆಗಿತ್ತು. ಈ ಚಿತ್ರದಲ್ಲಿ ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಕೂಡ ಇದ್ದಾರೆ ಎಂದು ಹೇಳಲಾಗಿತ್ತು. ಕೆಲವು ವರದಿಗಳ ಪ್ರಕಾರ ಈ ಸಿನಿಮಾ ಕ್ಯಾನ್ಸಲ್ ಆಗಿದೆ ಎಂದು ವರದಿ ಆಗಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಶಾಕ್ ತಂದಿದೆ. ಈ ಘಟನೆಯ ಹಿಂದೆ ದೊಡ್ಡ ಬೆಳವಣಿಗೆಯೇ ನಡೆದು ಹೋಗಿದೆ.
ಸನ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಕಮಲ್ ಹಾಸನ್ ಅಥವಾ ರಜನಿಕಾಂತ್ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಲು ಪ್ಲ್ಯಾನ್ ನಡೆದಿತ್ತು. ಆದರೆ, ಇವರಲ್ಲಿ ಒಬ್ಬರನ್ನು ಒಪ್ಪಿಸಲು ಅಟ್ಲಿ ವಿಫಲರಾಗಿದ್ದಾರೆ. ಈ ಕಾರಣಕ್ಕೆ ಸಿನಿಮಾ ಸ್ಕ್ರಿಪ್ಟ್ ಬದಲಾಯಿಸಲು ಸೂಚಿಸಲಾಗಿದೆ.
ರಜನಿಕಾಂತ್ ಹಾಗೂ ಕಮಲ್ ಹಾಸನ್ ಈ ಪಾತ್ರ ಮಾಡಲು ರೆಡಿ ಇಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಹಾಲಿವುಡ್ ನಟ ವಿಲ್ ಸ್ಮಿತ್ ಅವರನ್ನು ಕಾಂಟ್ಯಾಕ್ಟ್ ಮಾಡಲು ಅಟ್ಲಿ ಪ್ರಯತ್ನಿಸಿದರು. ಇಬ್ಬರ ಮಧ್ಯೆ ಕಾಂಟ್ಯಾಕ್ಟ್ ಮಾಡಿ ಕೊಡೋ ಕೆಲಸವನ್ನು ಸಲ್ಮಾನ್ ಖಾನ್ ಮಾಡಿದರು. ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗ ಸನ್ ಪಿಕ್ಚರ್ಸ್ ದಕ್ಷಿಣದ ಹೀರೋಗಳೇ ಬೇಕು ಎನ್ನುವ ಹಠ ಹಿಡಿದಿದೆ ಎನ್ನಲಾಗಿದೆ.
ಸದ್ಯದ ಪ್ರಕಾರ ಸಿನಿಮಾ ಅರ್ಧಕ್ಕೆ ನಿಂತಿದೆ. ಸಲ್ಮಾನ್ ಖಾನ್ ಈ ಸಮಸ್ಯೆನ ಬಗೆಹರಿಸುವ ಪ್ರಯತ್ನದಲ್ಲಿ ಇದ್ದಾರೆ. ಅವರು ನೇರವಾಗಿ ಸನ್ ಪಿಕ್ಚರ್ಸ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಮಾರ್ಚ್ ವೇಳೆಗೆ ಈ ಚಿತ್ರದ ಬಗ್ಗೆ ಕ್ಲಿಯರ್ ಅಪ್ಡೇಟ್ ಸಿಗೋ ಸಾಧ್ಯತೆ ಇದೆ.
ಇದನ್ನೂ ಓದಿ: ಹಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್; ಸಿಕ್ತು ಬಿಗ್ ನ್ಯೂಸ್
ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಹೀಗಾಗಿ, ದಕ್ಷಿಣದ ನಿರ್ದೇಶಕರ ಜೊತೆ ಅವರು ಕೈ ಜೋಡಿಸುತ್ತಿದ್ದಾರೆ. ಅವರ ನಟನೆಯ ‘ಸಿಖಂದರ್’ ಚಿತ್ರಕ್ಕೆ ತಮಿಳಿನ ಎಆರ್ ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆ ಬಳಿಕ ಅವರು ಅಟ್ಲಿ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ, ಯಾಕೋ ಅದು ಸೆಟ್ಟೇರುವ ಸೂಚನೆ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.