- Kannada News Photo gallery Keerthy Suresh Goa Party: Post-Wedding Celebrations with Husband Antony cinema News in Kannada
ಗೋವಾದಲ್ಲಿ ಪತಿಯ ಜೊತೆ ಭರ್ಜರಿ ಪಾರ್ಟಿ ಮಾಡಿದ ಕೀರ್ತಿ ಸುರೇಶ್
ಕೀರ್ತಿ ಸುರೇಶ್ ಅವರು ಗೋವಾದಲ್ಲಿ ತಮ್ಮ ಪತಿ ಆಂಟನಿಯೊಂದಿಗೆ ಪಾರ್ಟಿಯನ್ನು ಆಚರಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿವಾಹದ ನಂತರ ಅವರು 'ಬೇಬಿ ಜಾನ್' ಚಿತ್ರದ ಪ್ರಚಾರದಲ್ಲಿ ತೊಡಗಿದ್ದರು. ಈಗ ಅವರು ಕುಟುಂಬ ಮತ್ತು ಚಲನಚಿತ್ರ ಕೆಲಸಗಳಲ್ಲಿ ನಿರತರಾಗಿದ್ದಾರೆ.
Updated on:Feb 24, 2025 | 2:20 PM

ಗೋವಾದಲ್ಲಿ ಕೀರ್ತಿ ಸುರೇಶ್ ಅವರು ಪತಿ ಆ್ಯಂಟೋನಿ ಜೊತೆ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಲಕ್ಷಾಂತರ ಲೈಕ್ಸ್ ಸಿಕ್ಕಿದೆ.

ಕೀರ್ತಿ ಸುರೇಶ್ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ಅವರ ಬಾಲ್ಯದ ಗೆಳೆಯ ಆ್ಯಂಟೊನಿ ಅವರನ್ನು ಕುಟುಂಬದವರ ಜೊತೆ ಮದುವೆ ಆದರು. ವಿವಾಹದ ಬಳಿಕ ಅವರು ಪತಿಯ ಜೊತೆ ಹಾಯಾಗಿ ಸಮಯ ಕಳೆಯುತ್ತಾ ಇದ್ದಾರೆ.

ಕೀರ್ತಿ ಸುರೇಶ್ ಗೋವಾದಲ್ಲಿ ಪತಿಯ ಜೊತೆ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿ ಸಾಕಷ್ಟು ಕಲರ್ಫುಲ್ ಆಗಿತ್ತು. ಕೀರ್ತಿ ಸುರೇಶ್ ಅವರು ಸಖತ್ ಗ್ಲಾಮರಸ್ ಆಗಿ ಮಿಂಚಿದ್ದಾರೆ. ಈ ಫೋಟೋನ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಕೀರ್ತಿ ಸುರೇಶ್ ಅವರು ವಿವಾಹದ ಬಳಿಕ ‘ಬೇಬಿ ಜಾನ್’ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡರು. ಈಗ ಅವರು ಹಾಯಾಗಿ ಕುಟುಂಬದ ಜೊತೆ ಸಮಯ ಕಳೆಯುತ್ತಾ ಇದ್ದಾರೆ. ಇದರ ಜೊತೆಗೆ ಸಿನಿಮಾ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ.

ಕೀರ್ತಿ ಸುರೇಶ್ ನಟನೆಯ ‘ಬೇಬಿ ಜಾನ್’ ಸಿನಿಮಾ ಅಂದುಕೊಂಡ ರೀತಿಯಲ್ಲಿ ಗೆಲುವು ಕಂಡಿಲ್ಲ. ಈ ವಿಚಾರದಲ್ಲಿ ಅವರ ಅಭಿಮಾನಿಗಳಿಗೆ ಬೇಸರ ಇದೆ. ಅವರು ಸದ್ಯ ಎರಡು ತಮಿಳು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
Published On - 2:18 pm, Mon, 24 February 25



















