Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2025: ಬೆಂಗಳೂರಿನಲ್ಲಿ ಮತ್ತೊಮ್ಮೆ ಅಬ್ಬರಿಸಿದ ಎಲ್ಲಿಸ್ ಪೆರ್ರಿ; ಶತಕ ಜಸ್ಟ್ ಮಿಸ್

Ellyse Perry: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಿಸ್ ಪೆರ್ರಿ ಅವರು ಯುಪಿ ವಾರಿಯರ್ಸ್ ವಿರುದ್ಧದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅಜೇಯ 90 ರನ್‌ಗಳ ಇನ್ನಿಂಗ್ಸ್‌ ಆಡಿದರು. ಡ್ಯಾನಿ ವ್ಯಾಟ್-ಹಾಡ್ಜ್ ಅವರ 57 ರನ್‌ಗಳ ಕೊಡುಗೆಯೊಂದಿಗೆ, ಆರ್‌ಸಿಬಿ 180 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿದೆ.

ಪೃಥ್ವಿಶಂಕರ
|

Updated on: Feb 24, 2025 | 9:24 PM

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ 9ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟರ್ ಎಲ್ಲಿಸ್ ಪೆರ್ರಿ ಯುಪಿ ವಾರಿಯರ್ಸ್​ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

1 / 5
ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ ತಂಡವನ್ನು ಸಂಕಷ್ಟದಿಂದ ಹೊರತಂದಿದಲ್ಲದೆ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ 56 ಎಸೆತಗಳನ್ನು ಎದುರಿಸದ ಪೆರ್ರಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ ಅಜೇಯ 90 ರನ್ ಬಾರಿಸಿದರು.

2 / 5
ಕೊನೆಯ ಓವರ್​ನಲ್ಲಿ ಪೆರ್ರಿ ಶತಕ ಬಾರಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಎದುರಾಳಿ ತಂಡದ ಅನುಭವಿ ಬೌಲರ್ ಸೋಫಿ ಎಕ್ಲೆಸ್ಟೋನ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪೆರ್ರಿ ಕೇವಲ 10 ರನ್​ಗಳಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಶತಕದಿಂದ ವಂಚಿತರಾದರು.

3 / 5
ಎಲ್ಲಿಸ್ ಪೆರ್ರಿ ಅವರ ಸ್ಫೋಟಕ 90 ರನ್ ಹಾಗೂ ಡ್ಯಾನಿ ವ್ಯಾಟ್-ಹಾಡ್ಜ್ ಅವರ 57 ರನ್​​ಗಳ ಕಾಣಿಕೆಯಿಂದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 180 ರನ್​ಗಳನ್ನು ಕಲೆಹಾಕಿದೆ. ಪೆರ್ರಿ ಹೊರತಾಗಿ ಡ್ಯಾನಿ ವ್ಯಾಟ್ ಕೂಡ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 57 ರನ್ ಬಾರಿಸಿದರು.

4 / 5
ಈ ಇಬ್ಬರನ್ನು ಬ್ಯಾಟರ್​ಗಳನ್ನು ಹೊರತುಪಡಿಸಿ ಆರ್​ಸಿಬಿ ಪಾಳಯದಿಂದ ಮತ್ತ್ಯಾರು ಮಿಂಚಲಿಲ್ಲ. ನಾಯಕಿ ಸ್ಮೃತಿ ಮಂಧಾನ 6 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಕೂಡ ಸತತ ಎರಡನೇ ಪಂದ್ಯದಲ್ಲೂ ವಿಫಲರಾಗಿ 8 ರನ್​ಗಳಿಗೆ ಸುಸ್ತಾದರು. ಕನಿಕಾ ಅವರ ಇನ್ನಿಂಗ್ಸ್ ಕೂಡ 5 ರನ್​ಗಳಿಗೆ ಅಂತ್ಯವಾಯಿತು.

5 / 5
Follow us
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ

ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ

ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ

Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ

ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ

ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ

ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್

33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್

ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ