AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಲ್ಲಿ ಮರಾಠಿಗರ ವಿಶಿಷ್ಟ ಹೋಳಿ ಸಂಭ್ರಮ: ಚೆರ್ಕಾಡಿ ಮೈದಾನದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭಾಗಿ!

ಉಡುಪಿಯಲ್ಲಿ ಮರಾಠಿ ಸಮುದಾಯ ತಮ್ಮ ಮೂಲ ಸಂಪ್ರದಾಯಗಳನ್ನು ಉಳಿಸಿಕೊಂಡು ವೈಭವದ ಹೋಳಿ ಆಚರಿಸಿದೆ. ಕೇವಲ ಬಣ್ಣ ಎರಚಾಟವಲ್ಲದೆ, ದುರ್ಗೆ-ತುಳಜಾ ಭವಾನಿ ಆರಾಧನೆ, ಕಾಮದಹನ ಹಾಗೂ ಜಾನಪದ ನೃತ್ಯಗಳೊಂದಿಗೆ ಸಾಂಸ್ಕೃತಿಕ ಶ್ರೀಮಂತಿಕೆ ಸಾರಿದೆ. ಚೆರ್ಕಾಡಿ ಮೈದಾನದಲ್ಲಿ ನಡೆದ ಈ ಆಚರಣೆ ತುಳುನಾಡಿನ ಸಂಸ್ಕೃತಿಗೆ ಹೊಸ ಮೆರುಗು ನೀಡಿದೆ, ನೂರಾರು ವರ್ಷಗಳ ಇತಿಹಾಸ ಹೊಂದಿದೆ.

ಉಡುಪಿಯಲ್ಲಿ ಮರಾಠಿಗರ ವಿಶಿಷ್ಟ ಹೋಳಿ ಸಂಭ್ರಮ: ಚೆರ್ಕಾಡಿ ಮೈದಾನದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭಾಗಿ!
ಸಾಂದರ್ಭಿಕ ಚಿತ್ರ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Mar 04, 2026 | 7:09 PM

Share

ಉಡುಪಿ, ಮಾ.4: ಬಣ್ಣಗಳ ಹಬ್ಬ ಹೋಳಿ ಅಂದ್ರೆ ಕೇವಲ ಬಣ್ಣ ಎರಚಾಟವಲ್ಲ, ಅದರಾಚೆಗಿನ ಸಾಂಸ್ಕೃತಿಕ ಶ್ರೀಮಂತಿಕೆ. ಇದೀಗ ಕರಾವಳಿ ಭಾಗವಾದ ಉಡುಪಿ ಜಿಲ್ಲೆಯ ನೆಲೆಸಿರುವ ಮರಾಠಿ ಸಮುದಾಯದವರು ತಮ್ಮ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಈ ಬಾರಿ ಅತ್ಯಂತ ವೈಭವದಿಂದ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಉಡುಪಿಯ ಚೆರ್ಕಾಡಿ ಮೈದಾನದಲ್ಲಿ ನಡೆದ ಈ ಸಂಭ್ರಮವು ತುಳುನಾಡಿನ ಜಾನಪದ ಸೊಗಡಿಗೆ ಹೊಸ ಕಲೆ ನೀಡಿದೆ. ಸುಮಾರು ಮೂರ್ನಾಲ್ಕು ಶತಮಾನಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಮಹಾರಾಷ್ಟ್ರದಿಂದ ವಲಸೆ ಬಂದು ಕರ್ನಾಟಕದ ಕಾಡು-ಮೇಡುಗಳಲ್ಲಿ ನೆಲೆಸಿದ ಮರಾಠಿ ಸಮುದಾಯದವರು ತಮ್ಮ ಮೂಲ ಆಚರಣೆಗಳನ್ನು ಇಂದಿಗೂ ಜೀವಂತವಾಗಿರಿಸಿದ್ದಾರೆ.

ತಮ್ಮ ಆರಾಧ್ಯ ದೇವತೆಗಳಾದ ದುರ್ಗೆ ಮಹಾಮ್ಮಾಯಿ ಮತ್ತು ತುಳಜಾ ಭವಾನಿಯ ಹೆಸರಿನಲ್ಲಿ ಗದ್ದುಗೆ ಆರಾಧನೆ ಮಾಡಿ, ವ್ರತನಿಷ್ಠೆಯಿಂದ ಹೋಳಿ ಆಚರಿಸುತ್ತಾರೆ. ಹುಣ್ಣಿಮೆಯ ಹಿಂದಿನ ದಿನ ರಾತ್ರಿ ಕಾಮದಹನ ಮಾಡುವ ಮೂಲಕ ದುಷ್ಟ ಶಕ್ತಿಗಳ ನಾಶ ಮತ್ತು ಸದ್ಗುಣಗಳ ವಿಜಯವನ್ನು ಸಾರುತ್ತಾರೆ.

ಇದನ್ನೂ ಓದಿ: ಇರಾನ್- ಇಸ್ರೇಲ್ ಯುದ್ಧದಿಂದ ತೈಲ ಬೆಲೆ ಏರಿಕೆ ಸುದ್ದಿ: ಭಟ್ಕಳದಲ್ಲಿ ಡೀಸೆಲ್, ಪೆಟ್ರೋಲ್​​ಗೆ ಮುಗಿಬಿದ್ದ ಜನ

ಕಣ್ಣಿಗೆ ಮುದ ನೀಡುವ ವರ್ಣಮಯ ಸಾಂಪ್ರದಾಯಿಕ ವೇಷಭೂಷಣಗಳೇ ಈ ಹಬ್ಬದ ಅಸಲಿ ಬಣ್ಣವಾಗಿದೆ. ಮರಾಠಿ ಮತ್ತು ಕುಡ್ಬಿ ಜನಾಂಗದವರ ಜಾನಪದ ವಾದ್ಯವಾದ ‘ಗುಮ್ಟೆ’ಯ (ಚರ್ಮವಾದ್ಯ) ಝೇಂಕಾರಕ್ಕೆ ಹೆಜ್ಜೆ ಹಾಕುತ್ತಾ ಸಮುದಾಯದವರು ಸಂಭ್ರಮಿಸುತ್ತಾರೆ. ಚೆರ್ಕಾಡಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಕೂಡುಕಟ್ಟುಗಳು ಮತ್ತು 5 ಸಾವಿರಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ ಜಾನಪದ ನೃತ್ಯ ಪ್ರದರ್ಶಿಸಿದರು. ಮರಾಠಿಗರ ಮೂಲ ಮಠವೆಂದೇ ನಂಬಲಾದ ಶೃಂಗೇರಿ ಮಠದ ಶ್ರೀಗಳು ಈ ವೈಭವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಶುಭಹಾರೈಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ಎರಡೂ ಪಂಚಮಸಾಲಿ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ
ಎರಡೂ ಪಂಚಮಸಾಲಿ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ