ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.
ನಾನಾ ಪಾಟೇಕರ್ ನಿಧನ: ಉಡುಪಿಯ ಮುಂಡ್ಕೂರಿನ ಪಾಲಿಗೆ ಕರ್ಣನಂತಿದ್ದ ನಟನ ನೆನಪು ಅಮರ
ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ನಿಧನಕ್ಕೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ಜನ ಸಂತಾಪ ಸೂಚಿಸಿದ್ದಾರೆ. ಈ ಊರಿನೊಂದಿಗೆ ನಟ ಹೊಂದಿದ್ದ ಆತ್ಮೀಯ ನಂಟು ಇದೀಗ ಮತ್ತೆ ನೆನಪಾಗಿದೆ. ಮುಂಡ್ಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದಿಂದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿವರೆಗೆ ಹಲವು ಕಾರ್ಯಗಳಿಗೆ ನಾನಾ ಪಾಟೇಕರ್ ನೆರವು ನೀಡಿದ್ದರು.
- Prajwal Amin
- Updated on: Oct 8, 2026
- 2:04 pm
ಪತ್ನಿಗೆ ವಿಷದ ಇಂಜೆಕ್ಷನ್ ಕೊಡಿಸಿ ಕೊಲೆ ಯತ್ನ: ಹೆಂಡ್ತಿ ಬದುಕುಳಿಯುತ್ತಿದ್ದಂತೆಯೇ ಪ್ರೇಯಸಿ ಜತೆ ಪತಿ ಆತ್ಮಹತ್ಯೆ
ಗರ್ಭಿಣಿ ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಪತಿ, ತನ್ನ ಪ್ರೇಯಸಿಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೈಂದೂರು ತಾಲೂಕಿನ ಗೋಳಿಹೊಳೆಯ ಸೌಪರ್ಣಿಕಾ ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ಜೋಡಿಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
- Prajwal Amin
- Updated on: Sep 30, 2026
- 4:19 pm
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು: ಹೆಲ್ಮೆಟ್ ಧರಿಸಿ ಬಂದು ಎಕ್ಸ್‌ಪ್ರೆಸ್ ಬಸ್ ಎಗರಿಸಿದ ಖತರ್ನಾಕ್ ಕಳ್ಳರು
ಉಡುಪಿ ನಗರದ ಚಿಟ್ಪಾಡಿಯಲ್ಲಿ ಪೆಟ್ರೋಲ್ ಬಂಕ್‌ನಿಂದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಕಳವಾಗಿ ಆತಂಕ ಮೂಡಿಸಿದೆ. ಸಮವಸ್ತ್ರ ಧರಿಸಿ ಬಂದ ಕಳ್ಳರು ಬಸ್ ಎಗರಿಸುವ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಬಸ್ ಮಾಲೀಕರ ದೂರಿನ ಮೇರೆಗೆ ಉಡುಪಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ಬಸ್ಸಿನಲ್ಲಿದ್ದ GPS ಟ್ರ್ಯಾಕಿಂಗ್ ವ್ಯವಸ್ಥೆಯ ನೆರವಿನಿಂದ ಕಾಪು ಬಳಿ ಕದ್ದ ಬಸ್ ಪತ್ತೆ ಹಚ್ಚಿ ವಶಪಡಿಸಿಕೊಂಡರು. ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ.
- Prajwal Amin
- Updated on: Sep 30, 2026
- 5:52 pm
ಉಡುಪಿ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾಣ ಗ್ರಾಮದ ಬಳಿ ಸುವರ್ಣ ನದಿಯಲ್ಲಿ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂಬ ಇಬ್ಬರು ಯುವಕರು ನೀರಿನ ಆಳ ತಿಳಿಯದೆ ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರೊಂದಿಗೆ ನದಿಯ ಸೌಂದರ್ಯ ಸವಿಯಲು ತೆರಳಿದ್ದ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಸುಸಜ್ಜಿತ ರಸ್ತೆ ಇಲ್ಲದಿದ್ದರೂ, ಅಗ್ನಿಶಾಮಕ ದಳ ಮತ್ತು ಪೊಲೀಸರು ಮೂರು ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಇಡೀ ಹಿರ್ಗಾಣ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
- Prajwal Amin
- Updated on: Sep 29, 2026
- 8:58 pm
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ಶಾರ್ಜಾದಲ್ಲಿ ಕೊಲೆಯಾದ ಉಡುಪಿ ಮೂಲದ ಪ್ರಕಾಶ್ ಕುಂದರ್ ಅವರ ಮೃತದೇಹ ಮೂರು ತಿಂಗಳ ಬಳಿಕ ತವರಿಗೆ ತಲುಪಿದೆ. ಮಂಗಳೂರಿನಿಂದ ಕುಂದಾಪುರಕ್ಕೆ ಬಂದ ಶವಪೆಟ್ಟಿಗೆಯನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೃತರ ಪತ್ನಿ ಟೀನಾ ಮತ್ತು ಪುತ್ರ ನಾಪತ್ತೆಯಾಗಿದ್ದು, ಇವರ ಪತ್ತೆ ಹಾಗೂ ಸಮಗ್ರ ತನಿಖೆಗೆ ಕುಟುಂಬಸ್ಥರು ಸರಕಾರ ಮತ್ತು ಪೊಲೀಸರನ್ನು ಒತ್ತಾಯಿಸಿದ್ದಾರೆ.
- Prajwal Amin
- Updated on: Sep 25, 2026
- 9:34 pm
ಪ್ರಕಾಶ್ ಕುಂದರ್ ಕೊಲೆ ಕೇಸ್: ಶಾರ್ಜಾ ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶ ಬಹಿರಂಗ
ಶಾರ್ಜಾದಲ್ಲಿ ಉಡುಪಿ ಮೂಲದ ಪ್ರಕಾಶ್ ಕುಂದರ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹವನ್ನು 9 ಭಾಗಗಳಾಗಿ ತುಂಡರಿಸಿರುವುದು ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಬಯಲಾಗಿದೆ. ಪತ್ನಿ ಮತ್ತು ಪುತ್ರ ಭಾರತಕ್ಕೆ ಮರಳಿದ ನಂತರ ನಾಪತ್ತೆಯಾಗಿದ್ದು, ಅವರ ಮೇಲೆ ಪ್ರಕಾಶ್ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯೂ ದೊರೆತಿದ್ದು, ಕುಟುಂಬಸ್ಥರು ಶವವನ್ನು ಆದಷ್ಟು ಬೇಗ ಊರಿಗೆ ತರಲು ಒತ್ತಾಯಿಸಿದ್ದಾರೆ.
- Prajwal Amin
- Updated on: Sep 23, 2026
- 7:19 pm
ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ದುಷ್ಕರ್ಮಿಗಳು
ದುಬೈ, ಶಾರ್ಜಾದಲ್ಲಿ ಉಡುಪಿ ಮೂಲದ ಪ್ರಕಾಶ್ ಕುಂದರ್ ಬರ್ಬರವಾಗಿ ಕೊಲೆಯಾಗಿದ್ದಾರೆ. ಅವರ ದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕಾರಿನಲ್ಲಿ ಪತ್ತೆಯಾಗಿದೆ. ಘಟನೆ ಬಳಿಕ ಪ್ರಕಾಶ್ ಪತ್ನಿ ಟೀನಾ ಕುಂದರ್ ಮತ್ತು ಪುತ್ರ ನಾಪತ್ತೆಯಾಗಿದ್ದು, ಪತ್ನಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ. ನ್ಯಾಯಕ್ಕಾಗಿ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.
- Prajwal Amin
- Updated on: Sep 22, 2026
- 7:04 pm
ಕರಾವಳಿಯ ಸಾಧಕನಿಗೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಗರಿ: ಅಗ್ಗದ ಬೆಲೆಯಲ್ಲಿ 20 ಕಿ.ಮೀ ದೂರ ವೀಕ್ಷಿಸುವ ಬೈನಾಕ್ಯುಲರ್ ಆವಿಷ್ಕರಿಸಿದ ಉಡುಪಿಯ ಆರ್. ಮನೋಹರ್
ಉಡುಪಿಯ ಸಂಶೋಧಕ ಆರ್. ಮನೋಹರ್ ಅವರು ಅಗ್ಗದ ವೆಚ್ಚದಲ್ಲಿ 200X ಮತ್ತು 240X ಸಾಮರ್ಥ್ಯದ ಶಕ್ತಿಶಾಲಿ ಬೈನಾಕ್ಯುಲರ್‌ಗಳನ್ನು ಅಭಿವೃದ್ಧಿಪಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 20 ಕಿ.ಮೀ ದೂರದ ವಸ್ತುಗಳನ್ನು ಸ್ಪಷ್ಟವಾಗಿ ವೀಕ್ಷಿಸಬಲ್ಲ ಈ ಉಪಕರಣವು, ದೂರದರ್ಶಕ ತಂತ್ರಜ್ಞಾನವನ್ನು ಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಿದೆ. ಈ ಅನನ್ಯ ಆವಿಷ್ಕಾರಕ್ಕಾಗಿ ಅವರಿಗೆ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್' ಪ್ರಶಸ್ತಿ ಲಭಿಸಿದೆ.
- Prajwal Amin
- Updated on: Sep 21, 2026
- 4:54 pm
ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಉಡುಪಿಯ ಕಾರ್ಕಳ ತಾಲೂಕಿನ ಸಾಣೂರು ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ರಮಾನಾಥ ರೈ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಮಾಜಿ ಸಚಿವರ ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದು, ರಮಾನಾಥ ರೈ ಮತ್ತು ಚಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
- Prajwal Amin
- Updated on: Sep 20, 2026
- 4:54 pm
ಕಸ್ತೂರಿರಂಗನ್ ವರದಿ: ಜನರ ಸಮಸ್ಯೆ ಆಲಿಸಿದ ಸಿಎಂ; ಪಕ್ಷಭೇದ ಮರೆತು ಬೆಂಬಲ ಎಂದ ವಿಪಕ್ಷ ನಾಯಕರು!
ಉಡುಪಿ ಜಿಲ್ಲೆಯ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಕಸ್ತೂರಿರಂಗನ್ ವರದಿಗೆ ಸಂಬಂಧಪಟ್ಟಂತೆ ಸಿಎಂ ಡಿಕೆ ಶಿವಕುಮಾರ್ ಸಾರ್ವಜನಿಕರೊಂದಿಗೆ ನೇರವಾಗಿ ಸಭೆ ಮಾಡಿದರು. ಈ ವೇಳೆ ಕಸ್ತೂರಿ ರಂಗನ್ ವರದಿಯ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದರು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Prajwal Amin
- Updated on: Sep 18, 2026
- 8:41 pm
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್: ಯತ್ನಾಳ್ ಕುಣಿತ ಹೇಗಿದೆ ನೋಡಿ
ಬ್ರಹ್ಮಾವರದ ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ನಡೆದ ಹುಲಿವೇಷದ ಊದು ಪೂಜೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿದ್ದಾರೆ. ಹುಲಿ ವೇಷಧಾರಿಗಳ ಕುಣಿತಕ್ಕೆ ಮನಸೋತ ಅವರು, ತಾಸೆಯ ಪೆಟ್ಟಿಗೆಗೆ ಭರ್ಜರಿ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ. ಯತ್ನಾಳ್ ಹುಲಿವೇಷ ಕುಣಿತದ ವಿಡಿಯೋ ಈಗ ವೈರಲ್ ಆಗುತ್ತಿದೆ.
- Prajwal Amin
- Updated on: Sep 18, 2026
- 8:50 am
ಮೂರುವರೆ ವರ್ಷ ಕಳೆದರೂ ಉಡುಪಿಗೆ ಸಿಗದ ಸುಸಜ್ಜಿತ ಜಿಲ್ಲಾ ಆಸ್ಪತ್ರೆ
ಉಡುಪಿ ಜಿಲ್ಲೆಯ ಬಹುನಿರೀಕ್ಷಿತ 250 ಹಾಸಿಗೆಗಳ ಸರ್ಕಾರಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿ ವರ್ಷಗಳೇ ಕಳೆದಿದ್ದರೂ ಇಂದಿಗೂ ಉದ್ಘಾಟನೆ ಭಾಗ್ಯ ದೊರೆತಿಲ್ಲ. ₹140 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಆಸ್ಪತ್ರೆಗೆ, ಅಗತ್ಯ ಸಿಬ್ಬಂದಿ ಹಾಗೂ ಉಪಕರಣಗಳಿಗೆ ಇನ್ನೂ ₹40 ಕೋಟಿ ಅನುದಾನದ ಅಗತ್ಯವಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವೈದ್ಯಕೀಯ ಸೇವೆ ದೊರೆಯದೆ ತೀವ್ರ ತೊಂದರೆಯಾಗುತ್ತಿದೆ.
- Prajwal Amin
- Updated on: Sep 11, 2026
- 5:33 pm