GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್ ಯೋಜನೆಯನ್ನು ನಮ್ಮ ಸರ್ಕಾರ ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಉತ್ತಮ ರಸ್ತೆಗಳು, ಮೆಟ್ರೋ ಸೌಲಭ್ಯ, ಕ್ರೀಡಾಂಗಣ, ವಸತಿ ಮತ್ತು ಉದ್ಯಾನವನಗಳನ್ನು ಒಳಗೊಂಡ ಒಂದು ಸಮಗ್ರ AI ಸಿಟಿಯಾಗಿ ರೂಪುಗೊಳ್ಳಲಿದೆ.
ಬೆಂಗಳೂರು, ಆಗಸ್ಟ್ 09: ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್ ಯೋಜನೆಯನ್ನು ನಮ್ಮ ಸರ್ಕಾರ ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಉತ್ತಮ ರಸ್ತೆಗಳು, ಮೆಟ್ರೋ ಸೌಲಭ್ಯ, ಕ್ರೀಡಾಂಗಣ, ವಸತಿ ಮತ್ತು ಉದ್ಯಾನವನಗಳನ್ನು ಒಳಗೊಂಡ ಒಂದು ಸಮಗ್ರ AI ಸಿಟಿಯಾಗಿ ರೂಪುಗೊಳ್ಳಲಿದೆ.
ಈ ಗ್ರೇಟರ್ ಬೆಂಗಳೂರು ಅಥಾರಿಟಿ (GBDA) ಯೋಜನೆಯ ಮುಖ್ಯ ಉದ್ದೇಶಗಳು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ರೈತಾಪಿ ಜನರಿಗೆ ಉತ್ತಮ ಬದುಕು ಕಲ್ಪಿಸುವುದು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ನೀಡುವುದು. ಜಮೀನು ನೀಡುವ ರೈತರಿಗೆ ನಮ್ಮ ಸರ್ಕಾರ ಉತ್ತಮ ಬೆಲೆ ನೀಡಲು ಬದ್ಧವಾಗಿದೆ ಎಂದು ಸಿಎಂ ಶಿವಕುಮಾರ್ ಹೇಳಿದ್ದಾರೆ. ಹಿಂದಿನ ಸರ್ಕಾರವು ಎಕರೆಗೆ ಕೇವಲ 25 ಲಕ್ಷ ರೂಪಾಯಿ ಮಾತ್ರ ನಿಗದಿಪಡಿಸಿತ್ತು. ಆದರೆ, ಪ್ರಸ್ತುತ ನಮ್ಮ ಸರ್ಕಾರ ಪ್ರತಿ ಎಕರೆಗೆ ಮೂರಕ್ಕೂ ಹೆಚ್ಚು ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧಾರ ಮಾಡಿದೆ.
ಹಣ ಬೇಡ ಎನ್ನುವಂತಹ ರೈತರಿಗೆ ಶೇಕಡಾ 50 ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲು ಸಹ ನಮ್ಮ ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಗೆ ಜಮೀನು ನೀಡಲು ಇಚ್ಛೆ ಇಲ್ಲದ ರೈತರಿಗೆ ಯಾವುದೇ ಒತ್ತಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ರೆಡ್ ಜೋನ್ ಆದೇಶವನ್ನೇ ಮುಂದುವರಿಸಲಾಗುವುದು. ಅಭಿವೃದ್ಧಿ ಬಯಸುವವರು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್ಡಿಕೆ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ

