AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಟ್ರೈಲರ್ ಬಿಡುಗಡೆ ಆದರೆ ಟ್ರೆಂಡ್ ಆಗುತ್ತಿರುವುದು ಪ್ರಭಾಸ್, ಏಕೆ?

Ramayana movie: ‘ರಾಮಾಯಣ’ ಟ್ರೈಲರ್ ನೋಡಿದವರು ಭಾರತದ ಈ ವರೆಗಿನ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಸಿನಿಮಾ ಇದೆಂದು ಕೊಂಡಾಡುತ್ತಿದ್ದಾರೆ. ವಿಎಫ್​​ಎಕ್ಸ್, ಗ್ರಾಫಿಕ್ಸ್ ಅಂತೂ ಅದ್ಭುತವಾಗಿವೆ. ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರು ಟ್ರೈಲರ್​​ನ ಕೇಂದ್ರವಾಗಿದ್ದರು ಮೂವರೂ ಸಹ ಸಖತ್ ಗಮನ ಸೆಳೆದಿದ್ದಾರೆ. ಅದರಲ್ಲೂ ಯಶ್ ಅಂತೂ ಟ್ರೈಲರ್​​ ನಲ್ಲಿ ಅಬ್ಬರಿಸಿಬಿಟ್ಟಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಸಹ ಪ್ರಭಾಸ್ ಟ್ರೆಂಡಿಂಗ್​​ನಲ್ಲಿದ್ದಾರೆ.

‘ರಾಮಾಯಣ’ ಟ್ರೈಲರ್ ಬಿಡುಗಡೆ ಆದರೆ ಟ್ರೆಂಡ್ ಆಗುತ್ತಿರುವುದು ಪ್ರಭಾಸ್, ಏಕೆ?
Prabhas Ramayana
ಮಂಜುನಾಥ ಸಿ.
|

Updated on: Jul 30, 2026 | 12:21 PM

Share

‘ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇಂದು (ಜುಲೈ 30) ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಟ್ರೈಲರ್ ನೋಡಿದವರೆಲ್ಲ, ಭಾರತದ ಈ ವರೆಗಿನ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಸಿನಿಮಾ ಇದೆಂದು ಕೊಂಡಾಡುತ್ತಿದ್ದಾರೆ. ವಿಎಫ್​​ಎಕ್ಸ್, ಗ್ರಾಫಿಕ್ಸ್ ಅಂತೂ ಅದ್ಭುತವಾಗಿವೆ. ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರು ಟ್ರೈಲರ್​​ನ ಕೇಂದ್ರವಾಗಿದ್ದರು ಮೂವರೂ ಸಹ ಸಖತ್ ಗಮನ ಸೆಳೆದಿದ್ದಾರೆ. ಅದರಲ್ಲೂ ಯಶ್ ಅಂತೂ ಟ್ರೈಲರ್​​ ನಲ್ಲಿ ಅಬ್ಬರಿಸಿಬಿಟ್ಟಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಸಹ ಪ್ರಭಾಸ್ ಟ್ರೆಂಡಿಂಗ್​​ನಲ್ಲಿದ್ದಾರೆ.

‘ರಾಮಾಯಣ’ ಸಿನಿಮಾ ಟ್ರೈಲರ್ ಬಿಡುಗಡೆ ಆದ ಬಳಿಕ ಅಚಾನಕ್ಕಾಗಿ ಪ್ರಭಾಸ್ ಟ್ರೆಂಡಿಂಗ್​​ಗೆ ಬಂದಿದ್ದಾರೆ. ಇದಕ್ಕೆ ಕಾರಣ ‘ಆದಿಪುರಷ್’ ಸಿನಿಮಾ. ಪ್ರಭಾಸ್ ನಟಿಸಿದ್ದ ‘ಆದಿಪುರುಷ್’ ಸಿನಿಮಾ ಸಹ ರಾಮಾಯಣ ಕತೆಯನ್ನೇ ಆಧರಿಸಿತ್ತು. ಆ ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದರು. ಸಿನಿಮಾ 2023 ರಲ್ಲಿ ರಿಲೀಸ್ ಆಗಿತ್ತು. ಆದರೆ ಬಾಕ್ಸ್ ಆಫೀಸ್​​​ನಲ್ಲಿ ಹೀನಾಯವಾಗಿ ಸೋತಿತು. ಮಾತ್ರವಲ್ಲದೆ ತೀವ್ರ ಟೀಕೆ, ವಿಮರ್ಶೆಗೆ ಮತ್ತು ವಿವಾದಕ್ಕೆ ಸಹ ಗುರಿ ಆಗಿತ್ತು. ಈಗ ‘ರಾಮಾಯಣ’ ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ‘ಆದಿಪುರುಷ್’ ಸಹ ಟ್ರೆಂಡಿಂಗ್​​ಗೆ ಬಂದಿದೆ. ಆದರೆ ನೆಗಟಿವ್ ಕಾರಣಕ್ಕೆ.

‘ಆದಿಪುರುಷ್’ ಸಿನಿಮಾದ ಟ್ರೈಲರ್ ರಿಲೀಸ್ ಆದಾಗ ಕಳಪೆ ಗುಣಮಟ್ಟದ ವಿಎಫ್​​ಎಕ್ಸ್, ಗ್ರಾಫಿಕ್ಸ್​​ನಿಂದ ತೀವ್ರ ಟೀಕೆಗೆ ಗುರಿ ಆಗಿತ್ತು. ರಾವಣ ಬಾವುಲಿಯ ಮೇಲೆ ಬರುವ ದೃಶ್ಯವೊಂದನ್ನು ಟ್ರೈಲರ್​​ನಲ್ಲಿ ಸೇರಿಸಲಾಗಿತ್ತು. ಅದಂತೂ ಭಾರಿ ಟಿಕೆಗೆ ಗುರಿ ಆಗಿತ್ತು. ಜೊತೆಗೆ ರಾವಣನ ಹತ್ತು ತಲೆಯ ಗ್ರಾಫಿಕ್ಸ್ ಸಹ ಬಹಳ ಕೆಟ್ಟದಾಗಿತ್ತು. ಪ್ರಭಾಸ ಲುಕ್ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು. ಈಗ ‘ರಾಮಾಯಣ’ ಸಿನಿಮಾದ ಟ್ರೈಲರ್​​ನ ಗುಣಮಟ್ಟದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ‘ಆದಿಪುರುಷ್’ ಅನ್ನು ಟೀಕೆ ಮಾಡುತ್ತಿದ್ದಾರೆ. ಕೆಲವರಂತೂ ‘ಆದಿಪುರುಷ್’ ಸಿನಿಮಾ ಅಷ್ಟು ಕೆಟ್ಟ ವಿಎಫ್​​ಎಕ್ಸ್​ ಹೊಂದಿ, ಬಿಡುಗಡೆ ಆಗಿದ್ದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್​​ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ

ಇನ್ನು ಕೆಲವರು ‘ರಾಮಾಯಣ’ ಟ್ರೈಲರ್ ಅನ್ನು ನೋಡಿ, ‘ಆದಿಪುರುಷ್’ ಸಿನಿಮಾದ ಟ್ರೈಲರ್​​ಗಿಂತಲೂ 1000 ಪಟ್ಟು ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಓಂ ರಾವತ್, ಇದನ್ನು ನೋಡಿ ಕಲಿಯಬೇಕು ಎಂದಿದ್ದಾರೆ. ಹಲವಾರು ಮಂದಿ ‘ರಾಮಾಯಣ’ ಟ್ರೈಲರ್ ಅನ್ನು ಮೆಚ್ಚಿಕೊಂಡು, ‘ಆದಿಪುರುಷ್’ ಅನ್ನು ಟ್ರೋಲ್ ಮಾಡಿದ್ದಾರೆ.

‘ರಾಮಾಯಣ’ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತಾದೇವಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದು, ಇವರು ಹಾಲಿವುಡ್​​ನ ಪ್ರಖ್ಯಾತ ವಿಎಫ್​​ಎಕ್ಸ್ ಸಂಸ್ಥೆ ಡಿಎನ್​​ಜಿಯ ಮಾಲೀಕರು ಸಹ. ಹಾಗಾಗಿ ಸಿನಿಮಾಕ್ಕೆ ವಿಶ್ವದರ್ಜೆಯ ಗುಣಮಟ್ಟದ ವಿಎಫ್​​ಎಕ್ಸ್ ಅಳವಡಿಸಲಾಗಿದೆ. ಸಿನಿಮಾ ಇದೇ ನವೆಂಬರ್​​ನಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್