AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಟ್ರೇಲರ್​​ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ

ರಾಮಾಯಣ ಟ್ರೇಲರ್: ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಭವ್ಯ ಟ್ರೇಲರ್ ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ರಣಬೀರ್ ಕಪೂರ್ ಹಾಗೂ ಯಶ್ ಅಬ್ಬರದ ದೃಶ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದರೆ, ಟ್ರೇಲರ್‌ನಲ್ಲಿ ಹನುಮಂತನ ಪಾತ್ರಧಾರಿ ಸನ್ನಿ ಡಿಯೋಲ್ ಅವರ ದರ್ಶನವಾಗದಿರುವುದು ಸಿನಿಪ್ರಿಯರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

‘ರಾಮಾಯಣ’ ಟ್ರೇಲರ್​​ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ
ರಾಮಾಯಣ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on:Jul 30, 2026 | 10:01 AM

Share

ಮುಖ್ಯಾಂಶಗಳು

  • ರಾಮಾಯಣ ಭವ್ಯ ಟ್ರೇಲರ್‌ನಲ್ಲಿ ಹನುಮಂತನ ಲುಕ್ ಮಿಸ್
  • ಸನ್ನಿ ಡಿಯೋಲ್ ಝಲಕ್ ಇಲ್ಲದ್ದಕ್ಕೆ ಬೇಸರ
  • ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪ್ರಶ್ನೆ

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ (Ramayana) ಭವ್ಯ ಟ್ರೇಲರ್ ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ವಿಶ್ಯುಯಲ್ ವೈಭವ ಹಾಗೂ ಪಾತ್ರಧಾರಿಗಳ ಲುಕ್ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ. ಟ್ರೇಲರ್‌ನಲ್ಲಿ ಒಂದು ಪ್ರಮುಖ ಪಾತ್ರದ ಅನುಪಸ್ಥಿತಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ರಾಮಾಯಣ ಮಹಾಕಾವ್ಯದ ಅತಿ ದೊಡ್ಡ ಶಕ್ತಿಯಾಗಿರುವ ಆಂಜನೇಯನ ದರ್ಶನ ಮೊದಲ ಝಲಕ್‌ನಲ್ಲಿ ಸಿಗದಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಟ್ರೇಲರ್‌ನಲ್ಲಿ ಮಿಸ್ ಆದ ಹನುಮಂತ

ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಈಗಾಗಲೇ ಅಧಿಕೃತವಾಗಿದೆ. ಆದರೆ, ಇಂದು ಬಿಡುಗಡೆಯಾದ ಟ್ರೇಲರ್‌ನಲ್ಲಿ ಎಲ್ಲೂ ಅವರ ಪಾತ್ರದ ಝಲಕ್ ಕಾಣಿಸಿಕೊಂಡಿಲ್ಲ. ರಾಮ, ಸೀತೆ, ಲಕ್ಷ್ಮಣ ಹಾಗೂ ರಾವಣನ ಅಬ್ಬರಕ್ಕೆ ಆದ್ಯತೆ ನೀಡಿರುವ ಚಿತ್ರತಂಡ, ಬಜರಂಗಬಲಿಯ ಲುಕ್ ಅನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಟ್ಟಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

ಅಭಿಮಾನಿಗಳ ಬೇಸರ ಹಾಗೂ ಪ್ರಶ್ನೆ

ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಹನುಮಂತ ಎಲ್ಲಿದ್ದಾನೆ?’ಎಂದು ಪ್ರಶ್ನಿಸಲು ಶುರು ಮಾಡಿದ್ದಾರೆ. ರಾಮಾಯಣದ ಕಥೆಯಲ್ಲಿ ಹನುಮಂತನ ಪಾತ್ರ ಅತ್ಯಂತ ಹೈಲೈಟ್ ಆಗಿರುತ್ತದೆ. ಅಂತಹದ್ದರಲ್ಲಿ ಟ್ರೇಲರ್‌ನಲ್ಲಿ ಒಂದು ಪುಟ್ಟ ದೃಶ್ಯದಲ್ಲೂ ಆಂಜನೇಯನನ್ನು ತೋರಿಸದೇ ಇರುವುದು ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟುಮಾಡಿದೆ.

ಬ್ರಹ್ಮೀ ಮುಹೂರ್ತದಲ್ಲಿ ಬಿಡುಗಡೆ

ಭಾರತೀಯ ಕಾಲಮಾನ ಮುಂಜಾನೆ 4:15ರ ಬ್ರಾಹ್ಮೀ ಮುಹೂರ್ತದಲ್ಲಿ ಈ ಟ್ರೇಲರ್ ಅನ್ನು ಡಿಜಿಟಲ್ ಪರದೆಯ ಮೇಲೆ ಅನಾವರಣಗೊಳಿಸಲಾಗಿದೆ. ಚಿತ್ರಮಂದಿರಗಳಲ್ಲಿ ಇದು ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಜೊತೆಗೆ ಪ್ರದರ್ಶನಗೊಳ್ಳಲಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ವೇದಿಕೆಯಲ್ಲಿ ಜಾಗತಿಕ ಪ್ರೇಕ್ಷಕರ ಮುಂದೆ ಈ ಟ್ರೇಲರ್ ಅನ್ನು ಮೊದಲು ಪರಿಚಯಿಸಲಾಗಿತ್ತು.

ದೃಶ್ಯ ವೈಭವದ ಹೈಲೈಟ್ಸ್

ಹಾಲಿವುಡ್‌ನ ಡಿಎನ್‌ಇಜಿ ಸ್ಟುಡಿಯೋಸ್ ರೂಪಿಸಿರುವ ಈ ಚಿತ್ರದ ವಿಶ್ಯುಯಲ್ಸ್ ಕಣ್ಣು ಕೋರೈಸುವಂತಿವೆ. ರಾಮನ ಅಯೋಧ್ಯೆ, ಸೀತೆಯ ಸ್ವಯಂವರ, ಲಕ್ಷ್ಮಣನಿಂದ ಶೂರ್ಪನಖಿಯ ಮೂಗು ಕೊಯ್ಯುವ ದೃಶ್ಯ ಹಾಗೂ ಲಕ್ಷ್ಮಣ ರೇಖೆ ಎಳೆಯುವ ದೃಶ್ಯ ಮೂಡಿಬಂದಿವೆ. ರಾಮನಾಗಿ ರಣಬೀರ್ ಕಪೂರ್ ಶಾಂತ ಸ್ವಭಾವದಲ್ಲಿ ಮಿಂಚಿದ್ದರೆ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ರೌದ್ರಾವತಾರದಿಂದ ಇಡೀ ಟ್ರೇಲರ್ ಅನ್ನು ಆವರಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಮಾಯಣ ಟ್ರೇಲರ್​ನಲ್ಲಿ ರಾವಣನ ಪಾತ್ರದ ಮೂಲಕ ಅಬ್ಬರಿಸಿ ಬೊಬ್ಬಿರಿದ ಯಶ್

ಅತಿ ದೊಡ್ಡ ಬಜೆಟ್‌ನ ಸಿನಿಮಾ

ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯವನ್ನು ಸುಮಾರು 4,000 ಕೋಟಿ ರೂಪಾಯಿ ಭಾರಿ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಿಸಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತರಾದ ಹನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಮೊದಲ ಬಾರಿಗೆ ಜೊತೆಯಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಹನುಮಂತನ ಪಾತ್ರವನ್ನು ಸಸ್ಪೆನ್ಸ್ ಆಗಿ ಇಟ್ಟಿರುವ ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ವಿಶ್ವಾದ್ಯಂತ ಐಮ್ಯಾಕ್ಸ್ ಪರದೆಯ ಮೇಲೆ ಅಪ್ಪಳಿಸಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?  ಉತ್ತರ: ದೀಪಾವಳಿ

ಪ್ರಶ್ನೆ: ರಾಮಾಯಣದಲ್ಲಿ ಹನುಮಂತನ ಪಾತ್ರಧಾರಿ ಯಾರು? ಉತ್ತರ: ಸನ್ನಿ ಡಿಯೋಲ್

ಪ್ರಶ್ನೆ: ರಾಮಾಯಣ ಸಿನಿಮಾ ನಿರ್ದೇಶನ ಯಾರದ್ದು? ಉತ್ತರ: ನಿತೇಶ್ ತಿವಾರಿ

Published On - 9:38 am, Thu, 30 July 26

Follow Us
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ