ಡಿಕೆ ಶಿವಕುಮಾರ್ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಇಂದಿಗೆ 100 ದಿನಗಳು ಪೂರೈಸಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ನಂಬಿದ ನೊಣವಿನಕೆರೆ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕೈಯಲ್ಲಿ ಬೆಂಕಿ ಇಟ್ಟುಕೊಂಡು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ನುಂಗಲೂ ಆಗದ, ಉಗುಳಲೂ ಆಗದ ಸ್ಥಿತಿಯಲ್ಲಿ ಸಮಾಜ ಸಿಲುಕಿದೆ. ಎಲ್ಲರ ಭಾವನೆ ಗೌರವಿಸುವವರಿಗೆ ಶ್ರೀಮಠದ ಪೂರ್ಣ ಆಶೀರ್ವಾದ ಇರುತ್ತದೆ. ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ನಾಯಕನಿಗೆ ಬೆಂಬಲ.
ತುಮಕೂರು, (ಸೆಪ್ಟೆಂಬರ್ 10): ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಇಂದಿಗೆ 100 ದಿನಗಳು ಪೂರೈಸಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ನಂಬಿದ ನೊಣವಿನಕೆರೆ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಕೈಯಲ್ಲಿ ಬೆಂಕಿ ಇಟ್ಟುಕೊಂಡು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ನುಂಗಲೂ ಆಗದ, ಉಗುಳಲೂ ಆಗದ ಸ್ಥಿತಿಯಲ್ಲಿ ಸಮಾಜ ಸಿಲುಕಿದೆ. ಎಲ್ಲರ ಭಾವನೆ ಗೌರವಿಸುವವರಿಗೆ ಶ್ರೀಮಠದ ಪೂರ್ಣ ಆಶೀರ್ವಾದ ಇರುತ್ತದೆ. ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ನಾಯಕನಿಗೆ ಬೆಂಬಲ. ಧರ್ಮದ ದಂಡವು ನಿರ್ದಿಷ್ಟ ಸಮಯ ಅಥವಾ ಕಾಲಕ್ಕೆ ಸೀಮಿತವಾದುದಲ್ಲ. ಧರ್ಮವೆಂಬುದು ಕೆಲವರಲ್ಲಿ ಮಾತ್ರವೇ ಸೀಮಿತವಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನೂ ಒಳಗೊಳ್ಳುವ ಕಾಯಕ ತತ್ವವೇ ಧರ್ಮದ ತಳಹದಿ. ಎಲ್ಲ ವರ್ಗಗಳ ಜನರ ಪ್ರೀತಿ-ವಿಶ್ವಾಸ ಉಳಿಸಿಕೊಳ್ಳುವುದೇ ಧರ್ಮದ ಆಶಯ. ರಾಜಕೀಯದಲ್ಲಿ ಧರ್ಮದ ನೀತಿ-ನಿಯಮಗಳು ಸ್ಥಿರವಾಗಿ ಇರಬೇಕು. ರಾಜಕೀಯ ನಡೆಗೆ ಧರ್ಮದ ತತ್ವ ಸಿದ್ಧಾಂತ ಮಾರ್ಗದರ್ಶಕವಾಗಬೇಕು. ಧರ್ಮದ ಆಡಳಿತದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಇರಬಾರದು ಎಂದಿದ್ದಾರೆ.

