AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್: ಒಂದೇ ತಂಡದ ಹುಡುಗಿಯರ ನಡುವೆ ಕಿರಿಕ್, ಕಣ್ಣೀರು

ಸೌಂದರ್ಯಾ ಶೆಟ್ಟಿ ಅವರಿಗೆ ರಿಯಾಲಿಟಿ ಶೋ ಅನುಭವ ಹೊಸದಲ್ಲ. ಸರಿಯಾದ ಸಮಯಕ್ಕೆ ತಿರುಗಿಬೀಳುವುದು ಹೇಗೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಬಿಗ್ ಬಾಸ್ ಟಾಸ್ಕ್ ವೇಳೆ ತಮ್ಮದೇ ತಂಡದಲ್ಲಿ ಇರುವ ಆಸಿಯಾ ಜೊತೆ ಸೌಂದರ್ಯಾ ಅವರು ಜಗಳ ಮಾಡಿಕೊಂಡಿದ್ದಾರೆ. ಇದರಿಂದಾಗಿ ಆಸಿಯಾ ಕಣ್ಣೀರು ಹಾಕುವಂತಾಗಿದೆ.

ಬಿಗ್ ಬಾಸ್: ಒಂದೇ ತಂಡದ ಹುಡುಗಿಯರ ನಡುವೆ ಕಿರಿಕ್, ಕಣ್ಣೀರು
Asiya Firdose, Soundarya Shetty
ಮದನ್​ ಕುಮಾರ್​
|

Updated on: Sep 10, 2026 | 10:47 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮೊದಲ ವಾರವೇ ಹತ್ತಾರು ಡ್ರಾಮಾ ನಡೆದಿದೆ. ನೋಡನೋಡುತ್ತಿದ್ದಂತೆಯೇ ಜಗಳ ಶುರುವಾಗಿದೆ. ಬಲವಾದ ಕಾರಣ ಇಲ್ಲದಿದ್ದರೂ ಕೂಡ ಮಹಿಳಾ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಆಸಿಯಾ ಮತ್ತು ಸೌಂದರ್ಯಾ ಶೆಟ್ಟಿ ಅವರು ಕಾಲು ಕೆರೆದುಕೊಂಡು ಜಗಳ ಮಾಡಿದ್ದಾರೆ. ಟಾಸ್ಕ್ ಶುರುವಾಗುವುದಕ್ಕೂ ಮುನ್ನವೇ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಮೊದಲ ವಾರದಲ್ಲಿಯೇ ಈ ಪರಿ ಜಗಳ ಆದರೆ ಮುಂದಿನ ವಾರಗಳಲ್ಲಿ ಏನಾಗಬಹುದು ಎಂದು ವೀಕ್ಷಕರು ಯೋಚಿಸುವಂತಾಗಿದೆ.

4ನೇ ದಿನ ಬಿಗ್ ಬಾಸ್ ನೀಡಿದ ಒಂದು ಟಾಸ್ಕ್​ನಲ್ಲಿ ಯಾರು, ಯಾವ ಕೆಲಸ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತಿತ್ತು. ವೈಷ್ಣವಿ, ಪ್ರಥಮಾ ಪ್ರಸಾದ್, ಸೌಂದರ್ಯಾ ಶೆಟ್ಟಿ, ಆಸಿಯಾ ಅವರು ಒಂದು ತಂಡದಲ್ಲಿದ್ದರೂ ಕೂಡ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಸಣ್ಣ ಮಾತುಕಥೆಯಲ್ಲಿ ಮುಗಿಯಬಹುದಾಗಿದ್ದ ವಿಷಯವು ಜಗಳದಲ್ಲಿ ಅಂತ್ಯವಾಗಿದೆ.

ಸ್ವಿಮಿಂಗ್ ಪೂಲ್​ಗೆ ಇಳಿಯಲ್ಲ ಎಂದು ಆಸಿಯಾ ಅವರು ಹೇಳಿದರು. ಆದರೆ ಅದಕ್ಕೆ ಸೌಂದರ್ಯಾ ಶೆಟ್ಟಿ ಅವರು ವಿರೋಧ ವ್ಯಕ್ತಪಡಿಸಿದರು. ನೀವು ಯಾಕೆ ಸ್ವಿಮಿಂಗ್ ಪೂಲ್​ಗೆ ಇಳಿಯಲ್ಲ ಎಂದು ಸೌಂದರ್ಯಾ ಅವರು ಪ್ರಶ್ನೆ ಮಾಡಿದರು. ಅದಕ್ಕೆ ಆಸಿಯಾ ಕಡೆಯಿಂದ ಸೂಕ್ತ ಸಮರ್ಥನೆ ಬರಲಿಲ್ಲ. ಆಗ ಇಬ್ಬರ ನಡುವಿನ ಮಾತಿನ ಚಕಮಕಿ ಹೆಚ್ಚಾಯಿತು.

ಈ ಮನೆಯಲ್ಲಿ ತಮ್ಮನ್ನು ಎಲ್ಲರೂ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆಸಿಯಾ ಆರೋಪ ಮಾಡಿದರು. ಆ ಮಾತು ಕೇಳಿಸಿಕೊಂಡ ಸೌಂದರ್ಯಾ ಶೆಟ್ಟಿ ಅವರಿಗೆ ಕೋಪ ಬಂತು. ಕೂಡಲೇ ರೊಚ್ಚಿಗೆದ್ದ ಅವರು ಆಸಿಯಾರನ್ನು ಅಣಕಿಸುವ ರೀತಿಯಲ್ಲಿ ವರ್ತಿಸಿದರು. ಕ್ಯಾಮೆರಾ ಮುಂದೆ ಬಂದು ಅಳುವ ರೀತಿಯಲ್ಲಿ ಅಣಕಿಸಿದರು. ಇದರಿಂದಾಗಿ ಆಸಿಯಾಗೆ ಹೆಚ್ಚು ಬೇಸರ ಆಯಿತು.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹಲವು ಸ್ಪರ್ಧಿಗಳು ನಾಮಿನೇಟ್

ಸಣ್ಣ ವಿಚಾರಕ್ಕೆ ಆದ ಈ ಪರಿ ರಂಪಾಟದಿಂದಾಗಿ ಆಸಿಯಾಗೆ ನಿಜವಾಗಿಯೂ ಅಳು ಬಂತು. ಟಾಸ್ಕ್ ಆರಂಭ ಆಗುವುದಕ್ಕೂ ಮುನ್ನ ಅವರು ಕಣ್ಣೀರು ಹಾಕಿದರು. ಇನ್ನುಳಿದ ಸ್ಪರ್ಧಿಗಳು ಸಮಾಧಾನ ಮಾಡಲು ಬಂದರೂ ಕೂಡ ಆಸಿಯಾ ಅವರಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಆಸಿಯಾ ವರ್ಸಸ್ ಸೌಂದರ್ಯಾ ಜಗಳ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More