‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಬಿಗ್ ಬಾಸ್ ಮನೆಗೆ ಗಾನವಿ ಅವರು ಎಂಟ್ರಿ ಕೊಟ್ಟ ಕ್ಷಣದಿಂದ ಆಟದ ದಿಕ್ಕು ಬದಲಾಗಿದೆ. ಎಲ್ಲರೂ ತಮ್ಮ ಸಾಮರ್ಥ್ಯವನ್ನು ತೋರಿಸುವ ಪ್ರಯತ್ನದಲ್ಲಿ ಇದ್ದಾರೆ. ಆದರೆ, ಇದಕ್ಕೆ ಗಾನವಿ ಅವರು ಅವಕಾಶ ನೀಡುತ್ತಿಲ್ಲ. ಈಗ ಕಾವ್ಯಾ ಹಾಗೂ ಗಾನವಿ ಮಧ್ಯೆ ಕಿರಿಕ್ ಆಗಿದೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ.
ಗಾನವಿ ಗೌಡ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬಳಿಕ ಆಟದ ದಿಕ್ಕು ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಕಿರಿಕ್ ಹೆಚ್ಚಿದೆ. ಅದರಲ್ಲೂ ಮಹಿಳಾ ಸ್ಪರ್ಧಿಗಳು ಕಿತ್ತಾಡಿಕೊಳ್ಳದೆ ಹಾಯಾಗಿದ್ದರು. ಅವರ ಮಧ್ಯೆಯೇ ಕಿಚ್ಚು ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 30ರ ಎಪಿಸೋಡ್ನಲ್ಲಿ ಸೌಂದರ್ಯಾ ಹಾಗೂ ಗಾನವಿ ಅವರು ಕಿತ್ತಾಡಿಕೊಂಡಿದ್ದರು. ಈಗ ಗಾನವಿ vs ಕಾವ್ಯಾ ಗೌಡ ಎಂಬಂತಾಗಿದೆ. ಅಡುಗೆ ಮನೆಯಲ್ಲಿ ಹತ್ತಿದ ಕಾಡ್ಗಿಚ್ಚು ಇಡೀ ಮನೆಯನ್ನು ಆವರಿಸಿದೆ. ‘ಇಷ್ಟು ಗಲೀಜು ಆಟವನ್ನು ಆಡಬೇಡಿ’ ಎಂದು ಗಾನವಿ ಅವರು ಕಾವ್ಯಾಗೆ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

