ಸಿನಿಮಾ ಸಹವಾಸವೇ ಬೇಡ ಎಂದಿದ್ದ ಫಹಾದ್, ಸ್ಟಾರ್ ನಟನಾಗಿದ್ದು ಹೇಗೆ?
ಭಾರತದಲ್ಲಿ ಮಾತ್ರವಲ್ಲ ಹಾಲಿವುಡ್ನಿಂದಲೂ ಫಹಾದ್ ಫಾಜಿಲ್ ಅವರಿಗೆ ಬುಲಾವ್ ಬಂದಿತ್ತು ಆದರೆ ಅವರೇ ಅದನ್ನು ನಿರಾಕರಿಸಿದ್ದರು ಸಹ. ಅಂದಹಾಗೆ ಫಹಾದ್ ಫಾಜಿಲ್ ಸಿನಿಮಾ ರಂಗವೇ ಬೇಡ ಎಂದುಕೊಂಡು ದೂರ ಹೋಗಿ ಬಿಟ್ಟಿದ್ದರು. ಅಂಥಹವರು ಮತ್ತೆ ಮರಳಿ ಬಂದಿದ್ದು ಏಕೆ? ಸಿನಿಮಾ ಮಾಡಿದ್ದು ಏಕೆ? ಅವರೇ ಹಂಚಿಕೊಂಡಿದ್ದ ಮಾಹಿತಿ ಇಲ್ಲಿದೆ...

ಫಹಾದ್ ಫಾಜಿಲ್, ಭಾರತೀಯ ಚಿತ್ರರಂಗದಲ್ಲಿರುವ ಅತ್ಯಂತ ಪ್ರತಿಭಾಶಾಲಿ ನಟರುಗಳಲ್ಲಿ ಒಬ್ಬರು. ಅವರ ನಟನೆಗೆ ದೊಡ್ಡ ದೊಡ್ಡ ಸ್ಟಾರ್ ನಟರೇ ಫಿದಾ ಆಗಿದ್ದಾರೆ. ಭಾರತದ ಹಲವು ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. ಭಾರತದಲ್ಲಿ ಮಾತ್ರವಲ್ಲ ಹಾಲಿವುಡ್ನಿಂದಲೂ ಅವರಿಗೆ ಬುಲಾವ್ ಬಂದಿತ್ತು ಆದರೆ ಅವರೇ ಅದನ್ನು ನಿರಾಕರಿಸಿದ್ದರು ಸಹ. ಅಂದಹಾಗೆ ಫಹಾದ್ ಫಾಜಿಲ್ ಸಿನಿಮಾ ರಂಗವೇ ಬೇಡ ಎಂದುಕೊಂಡು ದೂರ ಹೋಗಿ ಬಿಟ್ಟಿದ್ದರು. ಅಂಥಹವರು ಮತ್ತೆ ಮರಳಿ ಬಂದಿದ್ದು ಏಕೆ? ಸಿನಿಮಾ ಮಾಡಿದ್ದು ಏಕೆ? ಅವರೇ ಹಂಚಿಕೊಂಡಿದ್ದ ಮಾಹಿತಿ ಇಲ್ಲಿದೆ…
ಫಹಾದ್ ಫಾಜಿಲ್, ಖ್ಯಾತ ನಿರ್ದೇಶಕ ಅದ್ಬುಲ್ ಫಾಜಿಲ್ ಅವರ ಪುತ್ರ. ಮೋಹನ್ಲಾಲ್ ಅವರನ್ನು ನಟನೆಗೆ ಕರೆತಂದವರು ಅದ್ಬುಲ್ ಫಾಜಿಲ್. 31 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅದ್ಬುಲ್ ಫಾಜಿಲ್ ಕೆಲವು ಅದ್ಭುತ ಸಿನಿಮಾಗಳನ್ನು ಮಲಯಾಳಂ ಚಿತ್ರರಂಗಕ್ಕೆ ನೀಡಿದ್ದಾರೆ. 2000ರ ದಶಕದ ಆರಂಭದಲ್ಲಿ ಹಲವು ಹೊಸ ಹೀರೋಗಳು ಲಾಂಚ್ ಆಗುತ್ತಿದ್ದ ಸಮಯ, ನಿರ್ದೇಶಕ ರಾಕೇಶ್ ರೋಷನ್ ಅವರು ತಮ್ಮ ಪುತ್ರ ಹೃತಿಕ್ ರೋಷನ್ ಅನ್ನು ನಾಯಕನಾಗಿ ಲಾಂಚ್ ಮಾಡಿದ್ದನ್ನು ಗಮನಿಸಿ, ಅದ್ಬುಲ್ ಅವರು ಸಹ ತಮ್ಮ ಮಗ ಫಹಾದ್ ಅನ್ನು ಹೀರೋ ಆಗಿ ಲಾಂಚ್ ಮಾಡಲು ಮುಂದಾದರು.
2002 ರಲ್ಲಿ ಫಹಾದ್ ನಟನೆಯ ಮೊದಲ ಸಿನಿಮಾ ‘ಕೈಯೆತ್ತುಮ್ ದೂರತ್’ ಬಿಡುಗಡೆ ಆಯ್ತು. ಸಿನಿಮಾದ ನಿರ್ಮಾಣ ಮತ್ತು ನಿರ್ದೇಶನ ಎರಡೂ ಅದ್ಬುಲ್ ಫಾಜಿಲ್ ಅವರದ್ದೆ. ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಇದು ಫಹಾದ್ ಮೇಲೆ ದೊಡ್ಡ ಪರಿಣಾಮ ಬೀರಿತಂತೆ. ತಮಗೆ ಸಿನಿಮಾ ಸಹವಾಸವೇ ಬೇಡ ಎಂದು ಅವರು ಅಮೆರಿಕಕ್ಕೆ ತೆರಳಿ ಎಂಜಿನಿಯರ್ ಪದವಿ ಮೇಲೆ ಗಮನ ವಹಿಸಿದರಂತೆ. ಎಂದಿಗೂ ಸಿನಿಮಾನಲ್ಲಿ ನಟಿಸುವುದೇ ಬೇಡ ಎಂದುಕೊಂಡಿದ್ದರಂತೆ ಫಹಾದ್.
ಇದನ್ನೂ ಓದಿ:‘ಮನಸ್ಸು ಸರಿ ಇಲ್ಲ, ವೈಯಕ್ತಿಕ ಸಮಸ್ಯೆಗಳ ಜೊತೆ ಹೋರಾಡುತ್ತಿದ್ದೇನೆ’; ನಜ್ರಿಯಾ ನಜೀಮ್
ಆದರೆ ವಿಧಿ ಬೇರೆಯದ್ದೇ ನಿರ್ಣಯಿಸಿತ್ತು. ಅಮೆರಿಕದಲ್ಲಿದ್ದಾಗ ಫಹಾದ್ ಅವರು ಹಲವಾರು ವಿದೇಶಿ ಭಾಷೆ ಸಿನಿಮಾಗಳನ್ನು ನೋಡಲು ಆರಂಭಿಸಿದರಂತೆ. ಹಲವಾರು ಅದ್ಭುತ ಸಿನಿಮಾಗಳನ್ನು ಅವರು ಆ ಸಮಯದಲ್ಲಿ ನೋಡಿದರಂತೆ. ಅವರಿಗೆ ಸಿನಿಮಾ ಮೇಲೆ ವಿಶೇಷವಾಗಿ ನಟನೆ ಬಗ್ಗೆ ಸಾಕಷ್ಟು ಹೊಸ ವಿಷಯಗಳು ತಿಳಿದುವಂತೆ. ಮೊದಲ ಸಿನಿಮಾ ರಿಲೀಸ್ ಆದ ಏಳು ವರ್ಷಗಳ ಬಳಿಕ 2009 ರಲ್ಲಿ ಒಂದು ಪ್ರಯೋಗಾತ್ಮಕ ಸಿನಿಮಾನಲ್ಲಿ ನಟಿಸುವ ಮನಸ್ಸು ಮಾಡಿ ಬಂದ ಫಹಾದ್, ‘ಕೇರಳ ಕೆಫೆ’ ಸಿನಿಮಾನಲ್ಲಿ ನಟಿಸಿದ ಫಹಾದ್, ಆ ಬಳಿಕ ಹಿಂದೆ ತಿರುಗಿ ನೋಡಿದ್ದೇ ಇಲ್ಲ.
ನಾಯಕ, ವಿಲನ್, ಕಮಿಡಿಯನ್ ಹೀಗೆ ಹಲವಾರು ರೀತಿಯ ಪಾತ್ರಗಳಲ್ಲಿ ಫಹಾದ್ ನಟಿಸಿದ್ದಾರೆ. ನಟಿಸುವ ಪ್ರತಿ ಪಾತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಾರೆ. ಭಾರತೀಯ ಚಿತ್ರರಂಗದ ಅದ್ಭುತ ನಟರ ಸಾಲಿನಲ್ಲಿ ಫಹಾದ್ ಫಾಜಿಲ್ ಇದ್ದಾರೆ. ಇದೀಗ ಅವರ ನಟನೆಯ ತೆಲುಗು ಸಿನಿಮಾ ‘ಡೋಂಟ್ ಟ್ರಬಲ್ ದ ಟ್ರಬಲ್’ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ಕಳ್ಳನ ಪಾತ್ರದಲ್ಲಿ ಫಹಾದ್ ಫಾಜಿಲ್ ನಟಿಸಿದ್ದಾರೆ. ಸಿನಿಮಾ ಇದೇ ವಾರ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




