ಫಹಾದ್ ಫಾಸಿಲ್ ಹಾಗೂ ನಜ್ರಿಯಾ ವಯಸ್ಸಿನ ಅಂತರ ಇಷ್ಟೊಂದಾ?

Fahadh Faasil Birthday: ಫಹಾದ್ ಫಾಸಿಲ್​ಗೆ ಎಲ್ಲ ಹೀರೋಗಳಂತೆ ತಲೆಯ ತುಂಬ ಕೂದಲು ಇಲ್ಲ. ಅವರು ಬಾಡಿ ಬೆಳೆಸಿಕೊಂಡು, ಸಿಕ್ಸ್ ಪ್ಯಾಕ್ ಮಾಡಿ ಕೊಂಡಿಲ್ಲ. ಈ ಮೂಲಕ ಲುಕ್ ಮುಖ್ಯ ಅಲ್ಲ. ನಟನೆ ಮುಖ್ಯ ಎಂಬುದನ್ನು ಅವರು ತೋರಿಸಿಕೊಟ್ಟರು. ಅವರು ಮಾಲಿವುಡ್​ನ ಹಂಕ್ ಎನಿಸಿಕೊಂಡಿದ್ದಾರೆ. ಅವರು ಈ ನಜ್ರಿಯಾನ ಮದುವೆ ಆಗಿದ್ದಾರೆ.

ಫಹಾದ್ ಫಾಸಿಲ್ ಹಾಗೂ ನಜ್ರಿಯಾ ವಯಸ್ಸಿನ ಅಂತರ ಇಷ್ಟೊಂದಾ?
ನಜ್ರಿಯಾ-ಫಹಾದ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 08, 2024 | 7:48 AM

ಫಹಾದ್ ಫಾಸಿಲ್​ಗೆ ಇಂದು ಅಂದರೆ ಆಗಸ್ಟ್ 8 ಜನ್ಮದಿನ. ಅವರಿಗೆ ಸೆಲೆಬ್ರಿಟಿಗಳ ಕಡೆಯಿಂದ ಶುಭಾಶಯ ಬರುತ್ತಿದೆ. ಫಹಾದ್ ಅವರು ಖ್ಯಾತ ನಿರ್ದೇಶಕ ಫಾಜಿಲ್ ಅವರ ಮಗ. ಫಹಾದ್​​ಗೆ ಸಣ್ಣ ವಯಸ್ಸಿನಿಂದಲೂ ನಟನಾಗಬೇಕು ಎಂಬ ಕನಸು ಇತ್ತು. ಆ ಕನಸನ್ನು ಅವರು ಈಡೇರಿಸಿಕೊಂಡರು. ಎಲ್ಲಾ ಸೆಲೆಬ್ರಿಟಿಗಳ ಮಕ್ಕಳಂತೆ ಅವರಿಗೆ ಸುಲಭದಲ್ಲಿ ಅವಕಾಶ ಸಿಕ್ಕಿತು. ಆದರೆ, ಇದನ್ನು ಅವರು ಹಾಳು ಮಾಡಿಕೊಂಡಿಲ್ಲ. ಬದಲಿಗೆ ಉಪಯೋಗಿಸಿಕೊಂಡರು. ರಾಷ್ಟ್ರ ಪ್ರಶಸ್ತಿ, ಕೇರಳ ಸ್ಟೇಟ್ ಅವಾರ್ಡ್, ಫಿಲ್ಮ್​ಪೇರ್ ಅವಾರ್ಡ್​​ಗಳು ಅವರ ಬಳಿ ಇವೆ.

ಫಹಾದ್ ಫಾಸಿಲ್ ಅವರನ್ನು ತಂದೆಯೇ ಚಿತ್ರರಂಗಕ್ಕೆ ಪರಿಚಯಿಸಿದರು. 2002ರಲ್ಲಿ ಫಹಾದ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ಈ ಚಿತ್ರ ಗೆಲುವು ಕಾಣಲಿಲ್ಲ. ಆ ಬಳಿಕ ಫಹಾದ್ ಫಾಸಿಲ್ ಅವರು ಗ್ಯಾಪ್ ಕೊಟ್ಟು 2010ರ ಸಂದರ್ಭದಲ್ಲಿ ಚಿತ್ರರಂಗಕ್ಕೆ ಮತ್ತೆ ಕಾಲಿಟ್ಟರು. 2011ರಲ್ಲಿ ‘ಚಾಪ್ಪ ಕುರಿಷು’ ಸಿನಿಮಾದ ನಟನೆಗೆ ರಾಜ್ಯ ಪ್ರಶಸ್ತಿ ಬಂತು. ನಂತರ ಅವರು ತಿರುಗಿ ನೋಡಲೇ ಇಲ್ಲ. 2014ರಲ್ಲೇ ಅವರು ನಿರ್ಮಾಣಕ್ಕೆ ಇಳಿದರು. ‘ಜೋಜಿ’, ‘ಪ್ರೇಮಲು’ ರೀತಿಯ ಚಿತ್ರಗಳನ್ನು ಫಹಾದ್ ಅವರು ನಿರ್ಮಾಣ ಮಾಡಿದ್ದಾರೆ. ಅವರಿಗೆ ನಿರ್ಮಾಣದಿಂದ ಸಖತ್ ಲಾಭ ಆಗುತ್ತಿದೆ. ‘ಪ್ರೇಮಲು’ ಸಿನಿಮಾ ದೊಡ್ಡ ಲಾಭ ತಂದುಕೊಟ್ಟಿದೆ.

ಉಳಿದ ಹೀರೋಗಳಂತೆ ಫಹಾದ್ ಫಾಸಿಲ್ ತಲೆಯ ತುಂಬ ಕೂದಲಿಲ್ಲ. ಅವರು ಬಾಡಿ ಬೆಳೆಸಿಕೊಂಡು, ಸಿಕ್ಸ್ ಪ್ಯಾಕ್ ಮಾಡಿಲ್ಲ. ಈ ಮೂಲಕ ಲುಕ್ ಮುಖ್ಯವಲ್ಲ, ನಟನೆ ಮುಖ್ಯ ಎಂಬುದನ್ನು ಅವರು ತೋರಿಸಿಕೊಟ್ಟರು. ಅವರು ಮಾಲಿವುಡ್​ನ ಹಂಕ್ ಎನಿಸಿಕೊಂಡಿದ್ದಾರೆ.

ಫಹಾದ್ ಮಾಡಿದ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ‘22 ಫಿಮೇಲ್ ಕೊಟ್ಟಾಯಮ್, ‘ಡೈಮಂಡ್ ನೆಕ್ಲೇಸ್’, ಅಮೆನ್, ‘ಜೋಜಿ’, ‘ಮಲಿಕ್’, ‘ಟ್ರಾನ್ಸ್’, ‘ವಿಕ್ರಮ್’, ಪುಷ್ಪ’ ರೀತಿಯ ಸಿನಿಮಾಗಳಲ್ಲಿ ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದರು.

ಫಹಾದ್ ಫಾಸಿಲ್ ಅವರು ಮಾಲಿವುಡ್ ನಟಿ ನಜ್ರಿಯಾ ನಜೀಮ್ ಅವರನ್ನು ಮದುವೆ ಆಗಿದ್ದಾರೆ. ಇಬ್ಬರ ಮಧ್ಯೆ ದೊಡ್ಡ ವಯಸ್ಸಿನ ಅಂತರ ಇದೆ. ಫಹಾದ್​ ಅವರಿಗೆ 32 ವರ್ಷ ಇದ್ದಾಗ ಮದುವೆ ನಡೆಯಿತು. ಆಗ ನಜ್ರಿಯಾ ವಯಸ್ಸು 19. ಅಂದರೆ ಇವರ ಮಧ್ಯೆ ಸುಮಾರು 13 ವರ್ಷಗಳ ಅಂತರ ಇದೆ. ಇವರ ಮದುವೆ 2014ರಲ್ಲಿ ಮದುವೆ ಆದರು. ‘ಬೆಂಗಳೂರು ಡೇಸ್’ ಚಿತ್ರದಲ್ಲಿ ಇವರು ಒಟ್ಟಾಗಿ ನಟಿಸಿದ್ದರು.

ಇದನ್ನೂ ಓದಿ: ಚಿತ್ರೀಕರಣದ ವೇಳೆ ಪ್ರಮಾದ, ನಟ ಫಹಾದ್ ಫಾಸಿಲ್ ಸೇರಿ ಹಲವರ ವಿರುದ್ಧ ದೂರು

ಫಹಾದ್ ಫಾಸಿಲ್ ಬಳಿಕ ಹಲವು ಲಕ್ಷುರಿ ಕಾರುಗಳು ಇವೆ. ಪೋರ್ಷಾ 911 ಕ್ಯಾರೆರಾ ಎಸ್​ ಅವರ ಬಳಿ ಇದೆ. ಭಾರತದಲ್ಲಿ ಇರುವ ಈ ಮಾಡೆಲ್​ನ ಏಕೈಕ ಕಾರಿದು. ಈ ಕಾರಿನ ಬೆಲೆ 1.84 ಕೋಟಿ ರೂಪಾಯಿ. ಇದನ್ನು ಕಸ್ಟಮೈಸ್ಡ್ ಮಾಡಲು ಅವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಮರ್ಸಿಡೀಸ್ ಬೆಂಜ್ ಇ ಕ್ಲಾಸ್, ರೇಂಜ್ ರೋವರ್ ವೋಗ್ ಕಾರು ಇವರ ಬಳಿ ಇದೆ.

2019ರಲ್ಲಿ ಫಹಾದ್ ಅವರು ಕೊಚ್ಚಿಯಲ್ಲಿ ಲಕ್ಷುರಿ ಮನೆ ಖರೀದಿ ಮಾಡಿದರು. ಈ ಮನೆ ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ. ಫಹಾದ್ ಅವರ ಆಸ್ತಿ 35 ಕೋಟಿ ರೂಪಾಯಿ. ಅವರು ಪ್ರತಿ ಚಿತ್ರಕ್ಕೆ 3.5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು