AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರೀಕರಣದ ವೇಳೆ ಪ್ರಮಾದ, ನಟ ಫಹಾದ್ ಫಾಸಿಲ್ ಸೇರಿ ಹಲವರ ವಿರುದ್ಧ ದೂರು

ಮಲಯಾಳಂನ ಫಹಾದ್ ಫಾಸಿಲ್​ ನಟನೆಗೆ ಮಾರು ಹೋಗದ ಸಿನಿಮಾ ಪ್ರೇಮಿಗಳಿಲ್ಲ. ಆದರೆ ಇದೀಗ ಫಹಾದ್ ಫಾಸಿಲ್​ ವಿರುದ್ಧ ಮಾನವ ಹಕ್ಕು ಆಯೋಗವು ದೂರು ದಾಖಲಿಸಿಕೊಂಡಿದೆ. ನೋಟೀಸ್ ನೀಡಿ ವಿಚಾರಣೆಗೆ ಕರೆಯಲಿದೆ.

ಚಿತ್ರೀಕರಣದ ವೇಳೆ ಪ್ರಮಾದ, ನಟ ಫಹಾದ್ ಫಾಸಿಲ್ ಸೇರಿ ಹಲವರ ವಿರುದ್ಧ ದೂರು
ಮಂಜುನಾಥ ಸಿ.
|

Updated on: Jun 29, 2024 | 3:21 PM

Share

ಮಲಯಾಳಂ ನಟ ಫಹಾದ್ ಫಾಸಿಲ್, ಭಾರತೀಯ ಚಿತ್ರರಂಗದ ಪ್ರಸ್ತುತ ನಟರಲ್ಲಿ ಅತ್ಯುತ್ತಮ ನಟ ಎಂದು ಗುರುತಿಸಿಕೊಂಡಿದ್ದಾರೆ. ಫಹಾದ್ ಅವರ ನಟನಾ ಪ್ರತಿಭೆಯನ್ನು ಹೊಗಳದ ಚಿತ್ರರಂಗದವರಿಲ್ಲ, ಸಿನಿಮಾ ಪ್ರೇಕ್ಷಕರಿಲ್ಲ. ಇತ್ತೀಚೆಗೆ ತೆರೆಕಂಡ ಫಹಾದ್​ರ ‘ಅವೇಶಂ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವೂ ಸಹ ಚಿತ್ರಮಂದಿರಗಳಲ್ಲಿ ಹೌಸ್ ಪ್ರದರ್ಶನ ಕಂಡಿತ್ತು ಆ ಸಿನಿಮಾ. ಫಹಾದ್ ಪ್ರತಿಭೆಯನ್ನು ದೇಶವೇ ಕೊಂಡಾಡುತ್ತಿದೆ. ಆದರೆ ಇದೀಗ ಕೇರಳದಲ್ಲಿ ಫಹಾದ್ ಮೇಲೆ ಪ್ರಕರಣವೊಂದು ದಾಖಲಾಗಿದೆ.

ಫಹಾದ್ ಫಾಸಿಲ್ ಪ್ರಸ್ತುತ ‘ಪೇಯಿನ್ ಕಿಲ್ಲಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಅವರೇ ಬಂಡವಾಳ ಸಹ ಹೂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಕೇರಳದ ಎರ್ನಾಕುಲಂನ ಅಂಗಮಲೈ ಸರ್ಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಆದರೆ ಈ ವೇಳೆ ಕೆಲ ನಿಯಮಗಳ ಉಲ್ಲಂಘನೆ ಆಗಿದೆ ಎಂದು ವರದಿಗಳು ಪ್ರಕಟವಾಗಿದ್ದವು, ವರದಿಗಳನ್ನು ಆಧರಿಸಿ ಕೇರಳದ ಮಾನವ ಹಕ್ಕು ಆಯೋಗವು ಫಹಾದ್ ಫಾಸಿಲ್ ಹಾಗೂ ಚಿತ್ರತಂಡದ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಅಂಗಮಲೈ ತಾಲ್ಲೂಕು ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದಲ್ಲಿ ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿತ್ತು, ಚಿತ್ರೀಕರಣದಲ್ಲಿ ನಟ ಫಹಾದ್ ಫಾಸಿಲ್ ಸಹ ಭಾಗಿಯಾಗಿದ್ದರು. ಸುಮಾರು 50 ಮಂದಿ ಚಿತ್ರತಂಡದವರಿದ್ದರೆ ಫಹಾದ್ ಅಲ್ಲಿ ಕಾಣಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು ಎನ್ನಲಾಗುತ್ತಿದೆ. ಇದರಿಂದಾಗಿ ಎಮರ್ಜೆನ್ಸಿ ಘಟಕದಲ್ಲಿರುವ ರೋಗಿಗಳಿಗೆ ಸಮಸ್ಯೆ ಆಗಿದೆ ಎಂದು ವರದಿಗಳು ಪ್ರಕಟವಾಗಿದ್ದವು. ಅದರ ಆಧಾರದಲ್ಲಿ ಈಗ ದೂರು ದಾಖಲಾಗಿದೆ.

ಇದನ್ನೂ ಓದಿ:ಒಂದೇ ಒಂದು ಕಾರಣಕ್ಕೆ ‘ಆವೇಶಂ 2’ ಮಾಡಲು ಒಪ್ಪುತ್ತಾರಂತೆ ಫಹಾದ್ ಫಾಸಿಲ್

ಆದರೆ ಚಿತ್ರತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ರೋಗಿಗಳಿಗೆ ತೊಂದರೆ ಆಗದ ರೀತಿಯಲ್ಲಿ ನಾವು ಚಿತ್ರೀಕರಣ ಮಾಡಿದ್ದೇವೆ ಎಂದಿದೆ. ಚಿತ್ರೀಕರಣದ ಸಮಯದಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ಇದ್ದರು, ರೋಗಿಗಳ ಚಿಕಿತ್ಸೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ ಎಂದು ಸಹ ಚಿತ್ರತಂಡ ಸ್ಪಷ್ಟನೆ ನೀಡಿದೆ. ಆದರೆ ಮಾನವ ಹಕ್ಕು ಆಯೋಗವು ದೂರು ದಾಖಲಿಸಿಕೊಂಡಿದ್ದು, ನಿರ್ಮಾಪಕ, ನಟ ಫಹಾದ್ ಫಾಸಿಲ್ ಹಾಗೂ ಚಿತ್ರತಂಡದ ಇತರೆ ಕೆಲವು ಪ್ರಮುಖ ವ್ಯಕ್ತಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಕೇರಳ ಆರೋಗ್ಯ ಮಂತ್ರಿಗಳು ಸಹ ಈ ಬಗ್ಗೆ ಮಾತನಾಡಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ವರದಿ ಕೇಳಿದ್ದಾರೆ.

ಫಹಾದ್ ಫಾಸಿಲ್ ಪ್ರಸ್ತುತ ಏಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ 2’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗಿನಲ್ಲಿಯೇ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ರಜನೀಕಾಂತ್ ಜೊತೆಗೆ ‘ವೇಟ್ಟೆಯನ್’ ಹಾಗೂ ‘ಮಾರೇಸನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ‘ಬೋಗೇನ್​ವಿಲಿಯಾ’, ‘ಒದುಮ್ ಕುತಿರಾ ಚದುಮ್ ಕುತಿರಾ’ ಹಾಗೂ ಅವರೇ ನಿರ್ಮಾಣ ಮಾಡಿರುವ ‘ಪೇಯಿನ್ ಕಿಲ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ