ಒಂದೇ ಒಂದು ಕಾರಣಕ್ಕೆ ‘ಆವೇಶಂ 2’ ಮಾಡಲು ಒಪ್ಪುತ್ತಾರಂತೆ ಫಹಾದ್ ಫಾಸಿಲ್
ಮಲಯಾಳಂನ ‘ಆವೇಶಂ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಸಿನಿಮಾದ ಹೀರೋ ಫಹಾದ್ ನಟನೆಗೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಸ್ವತಃ ಫಹಾದ್ ಫಾಸಿಲ್ ‘ಆವೇಶಂ 2’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಒಂದು ಕಾರಣಕ್ಕಾಗಿ ಮಾತ್ರ ಅವರು ‘ಆವೇಶಂ 2’ ಸಿನಿಮಾದಲ್ಲಿ ನಟಿಸುತ್ತಾರಂತೆ.
‘ಆವೇಶಂ’ (Avesham) ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿದೆ. ಬೆಂಗಳೂರಿನ ಚಿತ್ರಮಂದಿರಗಳಲ್ಲಿಯೂ ಸಹ ‘ಆವೇಶಂ’ ಹೌಸ್ ಫುಲ್ ಆಗಿತ್ತು. ಸಿನಿಮಾ ಒಟಿಟಿಗೆ ಬಂದ ಮೇಲಂತೂ ಬ್ಲಾಕ್ ಬಸ್ಟರ್ ಆಗಿದೆ. ಬೆಂಗಳೂರಿನಲ್ಲೇ ನಡೆಯುವ ಕತೆ ಹೊಂದಿರುವ ಈ ಸಿನಿಮಾದಲ್ಲಿ ರೌಡಿ ರಂಗನಾಗಿ ಫಹಾದ್ ಫಾಸಿಲ್ ಮಿಂಚಿ ಮೀರಿಹೋಗಿದ್ದಾರೆ. ಸಿನಿಮಾದ ಹಾಡುಗಳು, ಡೈಲಾಗ್ಗಳು, ಫೈಟ್ಗಳು ಟ್ರೆಂಡಿಂಗ್ನಲ್ಲಿವೆ. ಇದೆಲ್ಲದರ ನಡುವೆ ‘ಆವೇಶಂ 2’ ಬಗ್ಗೆ ಚರ್ಚೆ ಎದ್ದಿದೆ. ಸ್ವತಃ ಫಹಾದ್ ಫಾಸಿಲ್ ‘ಆವೇಶಂ 2’ ಬಗ್ಗೆ ಮಾತನಾಡಿದ್ದಾರೆ.
ಭಿನ್ನ, ಅದ್ಭುತ ವ್ಯಕ್ತಿತ್ವದ ರೌಡಿ ರಂಗನ ಕುರಿತಾದ ‘ಆವೇಶಂ’ ನ ಸೀಕ್ವೆಲ್ ಬರಬೇಕು ಎಂಬುದು ಅಭಿಮಾನಿಗಳ ಒತ್ತಾಯವಾಗಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಆದರೆ ಫಹಾದ್ ಫಾಸಿಲ್ ಸಂದರ್ಶನವೊಂದರಲ್ಲಿ ‘ಆವೇಶಂ’ ಸಿನಿಮಾದ ಸೀಕ್ವೆಲ್ ಬಗ್ಗೆ ಮಾತನಾಡಿದ್ದಾರೆ. ತಾನು ಒಂದೇ ಒಂದು ಕಾರಣಕ್ಕಾಗಿ ‘ಆವೇಶಂ 2’ನಲ್ಲಿ ನಟಿಸಲು ಸಿದ್ಧವಾಗುತ್ತೀನಿ ಎಂದು ಆ ಕಾರಣವನ್ನೂ ಸಹ ವಿವರಿಸಿದ್ದಾರೆ.
‘ಆವೇಶಂ’ ಸಿನಿಮಾನಲ್ಲಿ ರೌಡು ರಂಗನ ಬಲಗೈ ಭಂಟ ಅನ್ಬನ್ ಪಾತ್ರವೂ ಸಹ ಸಖತ್ ಹಿಟ್ ಆಗಿದೆ. ಅನ್ಬನ್ ಮಾತನಾಡುವ ಶೈಲಿ, ಅವನ ಹಾವ ಭಾವ, ಮುಗ್ಧತೆ, ಫೈಟ್ ಎಲ್ಲವೂ ಪ್ರೇಕ್ಷಕರಿಗೆ ಹಿಡಿಸಿದೆ. ರಂಗನ ಇಷ್ಟ ಪಟ್ಟಿರುವ ಮಂದಿ ಅನ್ಬನ್ ಬಗ್ಗೆ ಮೆಚ್ಚದೇ ಇರಲಾರರು ಅಷ್ಟು ಅದ್ಭುತವಾದ ಕೆಮಿಸ್ಟ್ರಿ ಈ ಎರಡು ಪಾತ್ರ ಮತ್ತು ನಟರುಗಳ ಮಧ್ಯೆ ಸಿನಿಮಾದಲ್ಲಿದೆ. ಇದೀಗ ಇದೇ ಕಾರಣಕ್ಕೆ ಫಹಾದ್ ಫಾಸಿಲ್ ‘ಆವೇಶಂ 2’ನಲ್ಲಿ ನಟಿಸಬೇಕಂತೆ.
ಇದನ್ನೂ ಓದಿ:ಫಹಾದ್ ಫಾಸಿಲ್ ಹಿಂದಿ ಸಿನಿಮಾಗಳಿಂದ ದೂರ ಇರೋದೇಕೆ? ಕಾರಣ ಕೊಟ್ಟ ನಟ
‘ಅನ್ಬನ್’ ಪಾತ್ರ ನನಗೆ ಬಹಳ ಹಿಡಿಸಿತು. ಆ ಪಾತ್ರದಲ್ಲಿ ಸಜಿನ್ ಗೋಪು ನಟಿಸಿದ್ದಾರೆ. ನಾವಿಬ್ಬರು ಒಂದು ದಿನವೂ ಸಹ ಹೇಗೆ ನಟಿಸಬೇಕು, ಪರಸ್ಪರ ಹೇಗೆ ಪ್ರತಿಕ್ರಿಯಿಸಬೇಕು ಎಂದು ಮಾತನಾಡಿಕೊಂಡಿಲ್ಲ. ಆದರೆ ಯಾವುದೇ ದೃಶ್ಯವಾಗಲಿ ಸಜಿನ್ ರೆಡಿ ಇರುತ್ತಿದ್ದ, ಅವನಿಗೆ ನಾನು, ನನಗೆ ಅವನು ಹೊಂದಿಕೊಂಡು ನಟಿಸಿದೆವು. ಆತನೊಟ್ಟಿಗೆ ಕೆಲಸ ಮಾಡಿದ್ದು ನನಗಂತೂ ಬಹಳ ಕಂಪರ್ಟ್ ಎನ್ನಿಸಿತು ಮತ್ತು ಬಹಳ ಖುಷಿ ಸಹ ಆಯ್ತು. ಆತನೊಟ್ಟಿಗೆ ಇನ್ನು ಕೆಲಸ ಮಾಡುವ ಆಸೆಯಿಂದ, ಆತನೊಟ್ಟಿಗೆ ಇನ್ನೂ ಕೆಲವು ದೃಶ್ಯಗಳಲ್ಲಿ ನಟಿಸಬೇಕೆಂಬ ಆಸೆಯಿರುವ ಕಾರಣಕ್ಕಷ್ಟೆ ನಾನು ‘ಆವೇಶಂ 2’ನಲ್ಲಿ ನಟಿಸಬಹುದೇನೋ’ ಎಂದಿದ್ದಾರೆ ಫಹಾದ್.
‘ಆವೇಶಂ’ ಸಿನಿಮಾ ಬೆಂಗಳೂರಿನ ರೌಡಿ ಎಂಬ ಪಾತ್ರದ ಕತೆ. ಮೂವರು ವಿದ್ಯಾರ್ಥಿಗಳು ರಂಗನ ಗೆಳೆಯರಾಗುವುದು ಅದಾದ ಬಳಿಕ ಆ ವಿದ್ಯಾರ್ಥಿಗಳೇ ರಂಗನ ಕೊಲ್ಲಲು ಯತ್ನಿಸುವುದು ಈ ಕತೆಯನ್ನು ತಮಾಷೆಯಾಗಿ ನಿರ್ದೇಶಕ ಜೀತು ಮಾಧವನ್ ಹೇಳಿದ್ದಾರೆ. ಈ ಹಿಂದೆ ‘ರೋಮಾಂಚನಂ’ ಸಿನಿಮಾವನ್ನು ನಿರ್ದೇಶಿಸಿದ್ದರು. ಅದೂ ಸಹ ಬೆಂಗಳೂರಿನಲ್ಲಿ ನಡೆಯುವ ಕತೆಯಾಗಿತ್ತು. 30 ಕೋಟಿ ಬಜೆಟ್ನಲ್ಲಿ ಮಾಡಿದ ‘ಆವೇಶಂ’ ಸಿನಿಮಾ 155 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ