AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ’ ಪ್ಯಾನ್ ಇಂಡಿಯಾ ಮಾಡುವಂತೆ ರಿಷಬ್​ಗೆ ಮೊದಲು ಹೇಳಿದ್ಯಾರು? ಯಾರಾದರೂ ಊಹಿಸ್ತೀರಾ?

ಸದ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸದಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಇದ್ದಾರೆ. ಈಗಾಗಲೇ ಒಂದು ಹಂತದ ಶೂಟ್ ನಡೆದಿದೆ. ಈ ಚಿತ್ರಕ್ಕಾಗಿ ಕುಂದಾಪುರದಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿ ಅಲ್ಲಿಯೇ ಸೆಟ್​ ಕೂಡ ಹಾಕಲಾಗಿದೆ. ಈ ಕಾರಣಕ್ಕಾಗಿ ರಿಷಬ್ ಅವರು ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ

‘ಕಾಂತಾರ’ ಪ್ಯಾನ್ ಇಂಡಿಯಾ ಮಾಡುವಂತೆ ರಿಷಬ್​ಗೆ ಮೊದಲು ಹೇಳಿದ್ಯಾರು? ಯಾರಾದರೂ ಊಹಿಸ್ತೀರಾ?
ರಿಷಬ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 07, 2024 | 9:34 AM

Share

ರಿಷಬ್ ಶೆಟ್ಟಿ (Rishab Shetty) ನಟನೆಯ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ರಿಲೀಸ್ ಆಗಿ ಒಂದೂವರೆ ವರ್ಷ ಕಳೆದರೂ ಆ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಮಾತ್ರ ನಿಂತಿಲ್ಲ. ಈಗ ಈ ಚಿತ್ರಕ್ಕೆ ಪ್ರೀಕ್ವೆಲ್ ಬರುತ್ತಿದೆ. ಇದರ ಸಿದ್ಧತೆಯಲ್ಲಿ ರಿಷಬ್ ಇದ್ದಾರೆ. ಈಗಾಗಲೇ ಕುಂದಾಪುರದಲ್ಲಿ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಈಗ ರಿಷಬ್ ಅವರು ‘ಕಾಂತಾರ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಬಗ್ಗೆ ಫಿಲ್ಮ್​ ಕಂಪ್ಯಾನಿಯನ್​ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ಐಡಿಯಾ ಮೊದಲು ಬಂದಿದ್ದು ಯಾರಿಗೆ ಎಂಬುದನ್ನು ಕೂಡ ಹೇಳಿದ್ದಾರೆ.

‘ಕಾಂತಾರ’ ರಿಲೀಸ್ ಆಗಿದ್ದು 2022ರ ಸೆಪ್ಟೆಂಬರ್ 30ರಂದು. ಅಂದು ಸಂಜೆಯೇ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂಬುದು ಗೊತ್ತಾಯಿತು. ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ. ‘ನಾವು ಸಿನಿಮಾಗೆ ದೊಡ್ಡ ಪ್ರಚಾರ ನೀಡಿರಲಿಲ್ಲ. ಸಿಂಗಾರ ಸಿರಿಯೇ ಹಾಗೂ ಟ್ರೇಲರ್ ದೊಡ್ಡ ಮಟ್ಟದ ವೀಕ್ಷಣೆ ಕಂಡಿತ್ತು. ನಾವು ಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ. ನನಗೆ ಈ ಸಿನಿಮಾ ರಾಜಕುಮಾರ ರೀತಿ ಫೀಲ್ ಆಗುತ್ತಿದೆ ಎಂದು ವಿಜಯ್ ಕಿರಗಂದೂರು ಹೇಳಿದ್ದರು. ಪ್ರೀಮಿಯರ್ ಮಾಡಿದಾಗ ರಕ್ಷಿತ್ ಜಿಗಿದು ಬಂದು ನನ್ನ ಹಗ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಸಿನಿಮಾದಲ್ಲಿ ಏನಿದೆ ಎನ್ನುವ ಕುತೂಹಲ ಮೂಡಿತು’ ಎಂದಿದ್ದಾರೆ ರಿಷಬ್.

‘ಈ ಚಿತ್ರವನ್ನು ನಾನು ಪುನೀತ್ ರಾಜ್​ಕುಮಾರ್​​ಗಾಗಿ ಮಾಡಿದ್ದರು. ಆದರೆ, ಡೇಟ್ ಹೊಂದಾಣಿಕೆ ಆಗುತ್ತಿರಲಿಲ್ಲ. ಈ ಚಿತ್ರವನ್ನು ನಾನೇ ಮಾಡಬೇಕು ಎಂದು ಪ್ರಗತಿ ಬಯಸಿದ್ದರು. ನಾನೇ ಮಾಡಬೇಕಾಯಿತು. ಈ ಚಿತ್ರದ ಟೀಸರ್ ನೋಡಿದ ಅವಳು ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡುವಂತೆ ಮೊದಲು ಹೇಳಿದ್ದೂ ಅವಳೇ’ ಎಂದಿದ್ದಾರೆ ರಿಷಬ್.

‘ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂದರ್ಶನ ನೀಡುವಾಗ ಸಾಕಷ್ಟು ಕಷ್ಟ ಆಯಿತು. ನನಗೆ ಇಂಗ್ಲಿಷ್ ಬರಲ್ಲ. ಹಿಂದಿ ಕೂಡ ಸರಿಯಾಗಿ ಬರುತ್ತಿರಲಿಲ್ಲ. ಯೋಚನೆ ಕನ್ನಡದಲ್ಲಿ ಇರುತ್ತದೆ. ಅದನ್ನು ಟ್ರಾನ್ಸ್​ಲೇಟ್ ಮಾಡಿ ಆ ಭಾಷೆಯಲ್ಲಿ ಹೇಳಬೇಕಿತ್ತು’ ಎಂದಿದ್ದಾರೆ ರಿಷಬ್.

ಇದನ್ನೂ ಓದಿ: ‘ಕಾಂತಾರ 2’ ಸಿನಿಮಾನಲ್ಲಿ ಪರಭಾಷೆ ಹಿರಿಯ ನಟನಿಗೆ ಅವಕಾಶ

ಸದ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸದಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಇದ್ದಾರೆ. ಈಗಾಗಲೇ ಒಂದು ಹಂತದ ಶೂಟ್ ನಡೆದಿದೆ. ಈ ಚಿತ್ರಕ್ಕಾಗಿ ಕುಂದಾಪುರದಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿ ಅಲ್ಲಿಯೇ ಸೆಟ್​ ಕೂಡ ಹಾಕಲಾಗಿದೆ. ಈ ಕಾರಣಕ್ಕಾಗಿ ರಿಷಬ್ ಅವರು ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ. ಈ ವರ್ಷ ಸಿನಿಮಾ ಶೂಟಿಂಗ್ ಮುಗಿಯಲಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್