‘ಸಿನಿಮಾ ಮಾಡೋದನ್ನು ನಿಲ್ಲಿಸಿದ್ದೇನೆ, ನಾನು ಫುಲ್​ಟೈಮ್ ರಾಜಕಾರಣಿ’; ಚಿತ್ರರಂಗಕ್ಕೆ ನಿಖಿಲ್ ಗುಡ್​ಬೈ

‘ಸಿನಿಮಾ ಮಾಡೋದನ್ನು ನಿಲ್ಲಿಸಿದ್ದೇನೆ, ನಾನು ಫುಲ್​ಟೈಮ್ ರಾಜಕಾರಣಿ’; ಚಿತ್ರರಂಗಕ್ಕೆ ನಿಖಿಲ್ ಗುಡ್​ಬೈ

ಪ್ರಶಾಂತ್​ ಬಿ.
| Updated By: ರಾಜೇಶ್ ದುಗ್ಗುಮನೆ

Updated on:Jun 07, 2024 | 12:37 PM

ಮಂಡ್ಯದಲ್ಲಿ ನಿಖಿಲ್ ಅವರು ಪ್ರಮುಖ ಸುದ್ದಿಗೋಷ್ಠಿ ನಡೆಸಿದ್ದಾರೆ. 24x7 ನಾನು ರಾಜಕೀಯದಲ್ಲಿ ಆ್ಯಕ್ಟೀವ್ ಆಗುತ್ತೇನೆ.ಈ ಮೂಲಕ ಅವರು ಸಿನಿಮಾ ರಂಗ ತೊರಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿದೆ. 

ನಿಖಿಲ್ ಕುಮಾರಸ್ವಾಮಿ (Nikhil Kumar) ಅವರು ಇಷ್ಟುವರ್ಷಗಳ ಕಾಲ ಸಿನಿಮಾ ರಂಗ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಕೊಂಡಿದ್ದರು. ಇತ್ತೀಚೆಗೆ ಅವರು ರಾಜಕೀಯದಲ್ಲಿ ಹೆಚ್ಚು ಒಲವು ತೋರಿಸಿದ್ದರು. ಈಗ ಸಿನಿಮಾಗೆ ನಿಖಿಲ್​ ಕುಮಾರಸ್ವಾಮಿ ಗುಡ್​ಬೈ ಹೇಳಿದರೇ ಎನ್ನುವ ಅನುಮಾನ ಮೂಡಿದೆ. ಮಂಡ್ಯದಲ್ಲಿ ನಿಖಿಲ್ ಅವರು ಪ್ರಮುಖ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಚಿತ್ರರಂಗ ತೊರೆಯೋ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ‘‘ಸಿನಿಮಾ ಮಾಡೋದನ್ನು ನಿಲ್ಲಿಸಿದ್ದೇನೆ. ಪಕ್ಷ ಕಟ್ಟುವ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ.  ನಾನು‌ ಇನ್ಮುಂದೆ ಪಕ್ಷ ಕಟ್ಟುವ ಕಡೆ ಗಮನ ಕೊಡುತ್ತೇನೆ.  ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡ್ತೇನೆ. ನಾನು ಫುಲ್‌ ಟೈಮ್ ರಾಜಕಾರಣಿ’ ಎಂದು ಅವರು ಘೋಷಿಸಿದ್ದಾರೆ. ಈ ಮೂಲಕ ಅವರು ಸಿನಿಮಾ ರಂಗ ತೊರಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ‘ಜಾಗ್ವಾರ್’ ನಿಖಿಲ್ ಮೊದಲ ಸಿನಿಮಾ. ‘ಸೀತಾರಾಮ ಕಲ್ಯಾಣ’, ‘ಕುರುಕ್ಷೇತ್ರ’, ‘ರೈಡರ್​’ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 07, 2024 12:31 PM