ಒಬ್ಬ ಮಾಜಿ ಪ್ರಧಾನಿಯ ಸಾವು ಬಯಸುವ ಶಿವರಾಮೇಗೌಡ ಸಂಸ್ಕೃತಿಹೀನ ವ್ಯಕ್ತಿ: ನಿಖಿಲ್ ಕುಮಾರಸ್ವಾಮಿ
ಶಿವರಾಮೇಗೌಡರ ಮಾತುಗಳನ್ನು ಕೇಳಿರುವ ಜನಕ್ಕೆ ಎಂಥ ರಾಜಕಾರಣಿ ಅಂತ ಗೊತ್ತಾಗಿದೆ. ವಿಷಯಾಧಾರಿತ ರಾಜಕಾರಣ ಮಾಡಿ ಗೊತ್ತಿರದ ಮತ್ತು ಒಬ್ಬ ಮಾಜಿ ಪ್ರಧಾನಿಯ ಹಾಗೂ ರಾಜ್ಯದ ಹಿರಿಯ ಮುತ್ಸದ್ದಿಯ ಸಾವು ಬಯಸುವ ಅವರೊಬ್ಬ ಸಂಸ್ಕೃತಿಹೀನ ವ್ಯಕ್ತಿ ಎಂದು ನಿಖಿಲ್ ಹೇಳಿದರು.
ಬೆಂಗಳೂರು: ಮಾಜಿ ಸಂಸದ ಮತ್ತು ಹಿರಿಯ ಬಿಜೆಪಿ ನಾಯಕ ಎಲ್ ಆರ್ ಶಿವರಾಮೇಗೌಡ (LR Shivaramegowda) ಮಾತಾಡುವಾಗ ಸಭ್ಯತೆ ಮರೆಯೋದು ಹೊಸದೇನಲ್ಲ. ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ (former PM HD Devegowda) ಕೇಡು ಬಯಸಿ ಆಡಿರುವ ಮಾತಿನ ಆಡಿಯೋ ವೈರಲ್ ಆಗಿದೆ. ಅದರ ಬಗ್ಗೆ ಇಂದು ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಶಿವರಾಮೇಗೌಡರ ಮಾತುಗಳನ್ನು ಕೇಳಿರುವ ಜನಕ್ಕೆ ಎಂಥ ರಾಜಕಾರಣಿ ಅಂತ ಗೊತ್ತಾಗಿದೆ. ವಿಷಯಾಧಾರಿತ ರಾಜಕಾರಣ ಮಾಡಿ ಗೊತ್ತಿರದ ಮತ್ತು ಒಬ್ಬ ಮಾಜಿ ಪ್ರಧಾನಿಯ ಹಾಗೂ ರಾಜ್ಯದ ಹಿರಿಯ ಮುತ್ಸದ್ದಿಯ ಸಾವು ಬಯಸುವ ಅವರೊಬ್ಬ ಸಂಸ್ಕೃತಿಹೀನ ವ್ಯಕ್ತಿ ಎಂದು ನಿಖಿಲ್ ಹೇಳಿದರು. ಹೆಚ್ ಡಿ ಕುಮಾರಸ್ವಾಮಿಯವರಿಗೆ ಕೇವಲ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತ್ರ ಯೋಚನೆ ಇದೆ ಅಂತಲೂ ಅವರು ಹೇಳಿದ್ದಾರೆ ಎಂದ ನಿಖಿಲ್; ಆದರೆ, ತಮ್ಮ ತಂದೆ ಯಾವತ್ತೂ ಹಾಗೆ ಯೋಚಿಸಿಲ್ಲ. ಬೇರೆಯವರ ಹಾಗೆ ಕುಮಾರಸ್ವಾಮಿಯವರು ಹೊಂದಾಣಿಕೆ ರಾಜಕಾರಣ ಮಾಡಿದ್ದರೆ, ತಾನು ಯಾವುದೋ ಉನ್ನತ ಸ್ಥಾನದಲ್ಲಿರುತ್ತಿದ್ದೆ, ರಾಜಕಾರಣದಲ್ಲಿ ಪರಿಶ್ರಮ ವಹಿಸಿ ತನ್ನ ಐಡೆಂಟಿಟಿ ಸೃಷ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವೆನೆಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್: ವಿಡಿಯೋ ನೋಡೋ ಧೈರ್ಯ ಬರಲಿಲ್ಲ, ನಿಖಿಲ್ ಕುಮಾರಸ್ವಾಮಿ