AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ 2’ ಸಿನಿಮಾನಲ್ಲಿ ಪರಭಾಷೆ ಹಿರಿಯ ನಟನಿಗೆ ಅವಕಾಶ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಕನ್ನಡದ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ 2’ ನಲ್ಲಿ ದಕ್ಷಿಣ ಭಾರತದ ಜನಪ್ರಿಯ ಪೋಷಕ ನಟರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

‘ಕಾಂತಾರ 2’ ಸಿನಿಮಾನಲ್ಲಿ ಪರಭಾಷೆ ಹಿರಿಯ ನಟನಿಗೆ ಅವಕಾಶ
ಮಂಜುನಾಥ ಸಿ.
|

Updated on: May 30, 2024 | 2:40 PM

Share

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿದ್ದ ‘ಕಾಂತಾರ’ (Kantara) ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು ಊಹಿಸದ ಮಾದರಿಯಲ್ಲಿ ಯಶಸ್ವಿಯಾಗಿದೆ. ಸಿನಿಮಾದ ಈ ಯಶಸ್ಸಿನಿಂದ ಪ್ರೇರಿತಗೊಂಡು ಇದೀಗ ‘ಕಾಂತಾರ 2’ ಸಿನಿಮಾ ಮಾಡುತ್ತಿದ್ದಾರೆ ರಿಷಬ್ ಶೆಟ್ಟಿ. ಸಿನಿಮಾದ ಕತೆ, ಪಾತ್ರವರ್ಗ, ಚಿತ್ರೀಕರಣ ಈ ಯಾವುದೇ ವಿಷಯಗಳ ಬಗ್ಗೆ ಗುಟ್ಟು ಬಿಟ್ಟುಕೊಡದೆ ಗೌಪ್ಯವಾಗಿ ಎಲ್ಲವನ್ನೂ ಮಾಡಲಾಗುತ್ತಿದೆ. ಆದರೆ ಇದೀಗ ಬಂದಿರುವ ಸುದ್ದಿಯಂತೆ ಪರಭಾಷೆಯ ಹಿರಿಯ ಹಾಗೂ ಸ್ಟಾರ್ ನಟರೊಬ್ಬರನ್ನು ರಿಷಬ್ ಶೆಟ್ಟಿ ‘ಕಾಂತಾರ 2’ ಸಿನಿಮಾಕ್ಕೆ ಆಯ್ಕೆ ಮಾಡಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಹಿರಿಯ ನಟ ಜಯರಾಂ ಅವರನ್ನು ‘ಕಾಂತಾರ 2’ ಸಿನಿಮಾದ ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಜಯರಾಂ ಅವರದ್ದು ‘ಕಾಂತಾರ 2’ ಸಿನಿಮಾದಲ್ಲಿ ಪ್ರಮುಖವಾದ ಪೋಷಕ ಪಾತ್ರ ಎನ್ನಲಾಗುತ್ತಿದ್ದು, ಈ ಪಾತ್ರಕ್ಕೆ ನುರಿತ ನಟರೇ ಬೇಕಾಗಿದ್ದ ಕಾರಣ, ಜಯರಾಂ ಅವರನ್ನು ರಿಷಬ್ ಶೆಟ್ಟಿ ಆಯ್ಕೆ ಮಾಡಿದ್ದಾರೆ. ಜಯರಾಂ ಅವರಿಗೆ ಈ ಹಿಂದೆ ಕೆಲವು ಐತಿಹಾಸಿಕ, ಪೌರಾಣಿಕ ಸಿನಿಮಾಗಳಲ್ಲಿ ನಟಿಸಿರುವ ಅನುಭವವಿದೆ ಹಾಗಾಗಿ ಅವರು ‘ಕಾಂತಾರ 2’ ಸಿನಿಮಾದ ಪಾತ್ರ ಅವರಿಗೆ ಚೆನ್ನಾಗಿ ಒಪ್ಪಲಿದೆ ಎನ್ನಬಹುದು.

ಜಯರಾಂ ಅವರಿಗೆ ಕನ್ನಡ ಸಿನಿಮಾ ಹೊಸತಲ್ಲ. ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿದ್ದ ‘ಘೋಸ್ಟ್’ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಜೊತೆಗೆ ಜಯರಾಂ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ ಜಯರಾಂ ಕನ್ನಡಕ್ಕೆ ಬರುತ್ತಿದ್ದಾರೆ. ಜಯರಾಂ ಅವರು ಮಲಯಾಳಂ ಚಿತ್ರರಂಗದವರಾದರೂ ಹಲವಾರು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್’ ಪೌರಾಣಿಕ ಸಿನಿಮಾದಲ್ಲಿ ಜಯರಾಂ ಅದ್ಭುತವಾದ ಪಾತ್ರ ನಿರ್ವಹಿಸಿದ್ದರು. ಅದೇ ಪಾತ್ರದ ಕಾರಣಕ್ಕೆ ಈಗ ‘ಕಾಂತಾರ 2’ ಸಿನಿಮಾನಲ್ಲಿ ಅವರಿಗೆ ಅವಕಾಶ ದೊರೆತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಕಾಂತಾರಾ ಪ್ರೀಕ್ವೆಲ್​ನಲ್ಲಿ ನಾನಿರಲ್ಲ, ನನ್ನ ಜಾಗಕ್ಕೆ ಬೇರೆಯವರು ಬಂದಿದ್ದಾರೆ’; ಸಪ್ತಮಿ ಗೌಡ

ಜಯರಾಂ ಪ್ರಸ್ತುತ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’, ತಮಿಳಿನ ಧನುಶ್ ನಿರ್ದೇಶನ ಮಾಡಿ ನಟಿಸುತ್ತಿರುವ ‘ರಾಯನ್’, ದಳಪತಿ ವಿಜಯ್ ನಟಿಸುತ್ತಿರುವ ‘ಗೋಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಅತ್ಯಂತ ಬೇಡಿಕೆಯ ಪೋಷಕ ನಟರಲ್ಲಿ ಜಯರಾಂ ಸಹ ಒಬ್ಬರು.

ಇನ್ನು ‘ಕಾಂತಾರ 2’ ಸಿನಿಮಾವನ್ನು ಅದ್ಧೂರಿಯಾಗಿ ತೆರೆಗೆ ತರುವ ಯೋಜನೆಯಲ್ಲಿ ರಿಷಬ್ ಶೆಟ್ಟಿ ಇದ್ದಾರೆ. ಸಿನಿಮಾಕ್ಕಾಗಿ ಅಳೆದು ತೂಗಿ ನಟ-ನಟಿಯರನ್ನು ಆಯ್ಕೆ ಮಾಡುತ್ತಿದ್ದಾರೆ. ‘ಕಾಂತಾರ 2’ ಸಿನಿಮಾವು ‘ಕಾಂತಾರ’ ಸಿನಿಮಾದ ಕತೆ ನಡೆದ ಕಾಲಕ್ಕಿಂತಲೂ ಸುಮಾರು 200 ವರ್ಷಗಳ ಹಿಂದೆ ನಡೆಯುವ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದ ಸಣ್ಣ ಟೀಸರ್ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ರಿಷಬ್ ಶೆಟ್ಟಿ ಪರಶುರಾಮ ನೆನಪಿಸುವ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ