ದರ್ಶನ್, ಸುದೀಪ್, ಯಶ್ ಯಾರೇ ಆಗ್ಲಿ, ಸಿನಿಮಾ ಇಂಡಸ್ಟ್ರಿನ ಮೇಲಕ್ಕೆ ತರಬೇಕು; ಸ್ಟಾರ್ ನಟನ ಹೇಳಿಕೆ
ಯಶ್, ದರ್ಶನ್ ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡೋಕೆ ಆಗಲ್ಲ. ಹಾಗೆ ಮಾಡಿದ್ರೆ ಅವರು ಮನೆಗೆ ಹೋಗಬೇಕಾಗುತ್ತದೆ’ ಎಂದಿದ್ದರು ರವಿಚಂದ್ರನ್. ಈ ಹೇಳಿಕೆ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಅವರಿಗೆ ಪ್ರಶ್ನೆ ಎದುರಾಗಿದೆ. ಅವರು ನೇರವಾಗಿ ಉತ್ತರಿಸಿದ್ದಾರೆ.
ಕನ್ನಡದಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಬರ್ತಿಲ್ಲ ಎನ್ನುವ ಬೇಸರ ಅನೇಕರಲ್ಲಿದೆ. ದರ್ಶನ್ ನಟನೆಯ ‘ಕಾಟೇರ’ ಬಳಿಕ ಯಾವುದೇ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಹಾಗಂತ ಸ್ಟಾರ್ಗಳು ಮನಸೋ ಇಚ್ಛೆ ಸಿನಿಮಾಗಳನ್ನು ಮಾಡೋಕೆ ಸಾಧ್ಯವಿಲ್ಲ. ಈ ಬಗ್ಗೆ ರವಿಚಂದ್ರನ್ (Ravichandran) ಅವರು ಮಾತನಾಡಿದ್ದಾರೆ. ಮೇ 30 ಅವರ ಜನ್ಮದಿನ ಇತ್ತು. ಈ ವೇಳೆ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ರವಿಚಂದ್ರನ್ ಅವರು ಈ ವಿಚಾರ ಪ್ರಸ್ತಾಪಿಸಿದ್ದರು. ‘ಯಶ್, ದರ್ಶನ್ ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡೋಕೆ ಆಗಲ್ಲ. ಹಾಗೆ ಮಾಡಿದ್ರೆ ಅವರು ಮನೆಗೆ ಹೋಗಬೇಕಾಗುತ್ತದೆ’ ಎಂದಿದ್ದರು ರವಿಚಂದ್ರನ್. ಈ ಹೇಳಿಕೆ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಅವರಿಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಯಾವ ಹೀರೋ ಮನೆಯಲ್ಲಿ ಇರೋಕೆ ಇಷ್ಟಪಡ್ತಾರೆ ಹೇಳಿ? ಯಶ್ಗೆ ಒಂದು ಬ್ರ್ಯಾಂಡ್ ಕ್ರಿಯೇಟ್ ಆಗಿದೆ. ತಿಂಗಳಿಗೆ ಒಂದು ಸಿನಿಮಾ ಮಾಡೋಕೆ ಆಗಲ್ಲ. ಕೆಜಿಎಫ್ಗೆ ಕಾಂಪಿಟ್ ಮಾಡುವಂಥ ಸಿನಿಮಾ ಮಾಡಬೇಕು. ಜನರು ಕೂಡ ಅದನ್ನೇ ನಿರೀಕ್ಷೆ ಮಾಡುತ್ತಾರೆ. ಹೀಗಿರುವಾಗ ನಾಳೆಯೇ ಸಿನಿಮಾನ ಸ್ಟಾರ್ಟ್ ಮಾಡೋಕೆ ಆಗಲ್ಲ. ಅದಕ್ಕೆ ಸಮಯ ಬೇಕು. ಈಗ ಒಂದು ಸಿನಿಮಾ ಆರಂಭ ಮಾಡಿದ್ದಾರಲ್ಲ’ ಎಂದರು ರವಿಚಂದ್ರನ್.
ಇದನ್ನೂ ಓದಿ: ದರ್ಶನ್-ಯಶ್ ಮನೆಗೆ ಹೋಗ್ಬೇಕಾಗುತ್ತೆ ಅಷ್ಟೆ: ರವಿಚಂದ್ರನ್ ಗರಂ
‘ದರ್ಶನ್ ಆಗಲೀ, ಸುದೀಪ್ ಆಗಲಿ, ಯಶ್ ಆಗಲಿ, ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಮೇಲಕ್ಕೆ ಎತ್ತಿಕೊಂಡು ಹೋಗುತ್ತಾ ಇರಬೇಕು’ ಎಂದಿದ್ದಾರೆ ರವಿಚಂದ್ರನ್. ‘ಸ್ಟಾರ್ ಹೀರೋಗಳು ವರ್ಷಕ್ಕೆ 2-3 ಸಿನಿಮಾ ಮಾಡಬೇಕು. ಆಗ ಮಾತ್ರ ಕನ್ನಡ ಇಂಡಸ್ಟ್ರಿ ಉಳಿಯುತ್ತದೆ’ ಎಂದು ಅನೇಕರು ಮಾತನಾಡಿಕೊಂಡಿದ್ದು ಇದೆ. ‘ಅದು ಸರಿ ಅಲ್ಲ. ನಿಜ ವಿಚಾರವನ್ನು ಮಾತನಾಡಬೇಕು. ಇಂಡಸ್ಟ್ರಿ ಎಂಬುದು ಬಂದಾಗ ಅದರ ಪರ ಮಾತನಾಡಬೇಕು. ನಾನು 10 ಸಿನಿಮಾ ಮಾಡೋಕೆ ರೆಡಿ ಇದೀನಿ. ಆದರೆ, ಮಾರುಕಟ್ಟೆ ಇಲ್ಲ ಎನ್ನುತ್ತಾರೆ’ ಎಂದಿದ್ದಾರೆ ರವಿಚಂದ್ರನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.