‘ಆ ಹಾಡು ನನ್ನದು’; ‘ಮಂಜುಮೇಲ್ ಬಾಯ್ಸ್’ ವಿರುದ್ಧ ಕಾನೂನು ಸಮರ ಸಾರಿದ ಇಳಯರಾಜ
‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ..’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ಜನರು ಸಖತ್ ಇಷ್ಟಪ್ಟರು. ಈ ಹಾಡು ‘ಮಂಜುಮ್ಮೇಲ್ ಬಾಯ್ಸ್’ನಲ್ಲಿ ಬಳಕೆ ಆಗಿದೆ. ಇದರಿಂದ ತಂಡ ತೊಂದರೆ ಅನುಭವಿಸಿದೆ.
ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಮಂಜುಮೇಲ್ ಬಾಯ್ಸ್’ ದೊಡ್ಡ ಮಟ್ಟದಲ್ಲಿ ಬಿಸ್ನೆಸ್ ಮಾಡಿತ್ತು. ಈ ಚಿತ್ರವನ್ನು ಕಟ್ಟಿಕೊಟ್ಟ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಚಿತ್ರದಲ್ಲಿ ‘ಕಣ್ಮಣಿ..’ ಹಾಡು ಮುಖ್ಯ ಪಾತ್ರವಹಿಸಿದೆ. ‘ಗುಣ’ ಸಿನಿಮಾದ (Guna Movie) ಹಾಡನ್ನು ಈ ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಹಾಡನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ‘ಗುಣ’ ಚಿತ್ರದ ಸಂಗೀತ ಸಂಯೋಜಕ ಇಳಯರಾಜ ಅವರು ಆರೋಪ ಮಾಡಿದ್ದಾರೆ.
‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ..’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ಜನರು ಸಖತ್ ಇಷ್ಟಪ್ಟರು. ಈ ಹಾಡು ‘ಮಂಜುಮ್ಮೇಲ್ ಬಾಯ್ಸ್’ನಲ್ಲಿ ಬಳಕೆ ಆಗಿದೆ. ಆದರೆ, ಇದನ್ನು ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ.
‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಣ ಮಾಡಿದ್ದ ಸೌಬಿನ್ ಶಾಹಿರ್ ಅವರಿಗೆ ಇಳಯರಾಜ ಕಡೆಯಿಂದ ನೋಟಿಸ್ ಹೋಗಿದೆ. ‘ಕಣ್ಮಣಿ ಅನ್ಬೋದು ಕಾದಲನ್..’ ಹಾಡಿನ ಹಕ್ಕು ನಮ್ಮದು ಎಂದು ಅವರು ಹೇಳಿದ್ದಾರೆ. ‘ಕಣ್ಮಣಿ ಹಾಡನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ. ಇಳಯರಾಜ ಅವರು ಈ ಹಾಡಿನ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ’ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ಈ ರೀತಿ ಹಾಡುಗಳನ್ನು ಬಳಕೆ ಮಾಡಿಕೊಳ್ಳುವ ಮೊದಲು ಸಿನಿಮಾ ನಿರ್ಮಾಪಕರು ಹಾಡಿನ ಹಕ್ಕನ್ನು ಪಡೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಗೀತ ನಿರ್ದೇಶಕರು ಅಥವಾ ಆ ಹಾಡಿನ ಹಕ್ಕು ಹೊಂದಿರುವ ಸಂಸ್ಥೆ ಕೇಸ್ ದಾಖಲು ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ವಿವಾದ ಭುಗಿಲೇಳುತ್ತದೆ.
ಇದನ್ನೂ ಓದಿ: ನಾಲ್ಕೇ ತಿಂಗಳಲ್ಲಿ 1000 ಕೋಟಿ ರೂ. ಬಿಸ್ನೆಸ್ ಮಾಡಿದ ಮಲಯಾಳಂ ಇಂಡಸ್ಟ್ರಿ; ನಮ್ಮಲ್ಲೇಕೆ ಸಾಧ್ಯವಾಗಿಲ್ಲ?
ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಆವೇಶಂ’ ಚಿತ್ರದಲ್ಲಿ ಮ್ಯೂಸಿಕ್ ಆಲ್ಬಂ ಸಾಂಗ್ ‘ಕರಿಕಾಳಿ..’ ಹಾಡನ್ನು ಬಳಕೆ ಮಾಡಲಾಗಿದೆ. ಇದರ ಹಕ್ಕನ್ನು ತಂಡ ಮೊದಲೇ ಪಡೆದುಕೊಂಡಿತ್ತು. ಹೀಗಾಗಿ, ಸಿನಿಮಾಗೆ ಯಾವುದೇ ಸಮಸ್ಯೆ ಆಗಿಲ್ಲ. ಈ ಹಾಡು ಕೂಡ ಹಿಟ್ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.