Darshan Thoogudeepa: ನಟ ದರ್ಶನ್​ಗೆ ಅರ್ಜುನನ ಮೇಲೆ ವಿಶೇಷ ಪ್ರೀತಿಯೇಕೆ? ಇಲ್ಲಿದೆ ವಿವರ

ಸರ್ಕಾರ ಅರ್ಜುನನಿಗೆ ಸ್ಮಾರಕ ಕಟ್ಟಿಸಲಿ ಬಿಡಲಿ, ದರ್ಶನ್ ಮಾತ್ರ ಆ ವಿಚಾರವನ್ನು ಮರೆತಿಲ್ಲ. ಮಳೆಗಾಲ ಸಮೀಪಿಸಿದೆ ಎನ್ನುವ ಕಾರಣಕ್ಕೆ ಅವರು ಈ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಅನೇಕ ಪ್ರಾಣಿಗಳನ್ನು ಅವರು ಸಾಕಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: May 23, 2024 | 12:41 PM

ಕಾಡಾನೆ ರಕ್ಷಣೆ ವೇಳೆ ನಟ ಅರ್ಜುನ ಆನೆ ನಿಧನ ಹೊಂದಿತ್ತು. ಇದಕ್ಕೆ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದರು. ಆನೆ ಸತ್ತ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು. ನಟ ದರ್ಶನ್ ಅವರು ಅರ್ಜುನನ ನಿಧನಕ್ಕೆ ಮರುಗಿದ್ದರು. ಅವರಿಗೆ ಅರ್ಜುನ ಆನೆ ಬಗ್ಗೆ ವಿಶೇಷ ಪ್ರೀತಿ ಇದೆ.

1 / 6
ಒಮ್ಮೆ ಆನೆ ಮೃತಪಟ್ಟು, ಅದನ್ನು ಮಣ್ಣು ಮಾಡಿದ ಬಳಿಕ ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ದರ್ಶನ್ ಹಾಗಲ್ಲ. ಆನೆಗೆ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಾಣ ಮಾಡಲು ಕಲ್ಲುಗಳನ್ನು ಕಳುಹಿಸಿದ್ದಾರೆ. ಆನೆಯ ಅಂತಿಮ ಸಂಸ್ಕಾರ ನಡೆದ ಜಾಗ ಸಕಲೇಶಪುರದ ಯಸಳೂರು ಸಮೀಪದ ದಬ್ಬಳ್ಳಿ ಕಟ್ಟೆ ನೆಡುತೋಪಿಗೆ ಕಲ್ಲುಗಳು ತಲುಪಿವೆ.

2 / 6
ದರ್ಶನ್ ಅವರಿಗೆ ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಅವರು ನಟನಾ ತರಬೇತಿ ಪಡೆದು ಬಂದ ನಂತರ ಕೆಲ ವರ್ಷ ಮೈಸೂರಿನಲ್ಲೇ ಇದ್ದರು. ಆಗ ಅವರು ದನಗಳನ್ನು ಸಾಕಿದ್ದರು. ಹಾಲು ಕರೆದು ಅವರು ಜೀವನ ನಡೆಸಿದ್ದರು. ಅವರು ಹೀರೋ ಆದ ಬಳಿಕವೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರಿತಿಯನ್ನು ಅವರು ಇಟ್ಟುಕೊಂಡಿದ್ದಾರೆ.

3 / 6
ದರ್ಶನ್ ಪ್ರಾಣಿ ಪ್ರಿಯರು. ಈ ಕಾರಣಕ್ಕೆ ಅರ್ಜುನ ಆನೆ ಮೇಲೆ ಅವರಿಗೆ ವಿಶೇಷ ಪ್ರೀತಿ ಇದೆ. ಅರ್ಜುನ ಆನೆ ಜೊತೆ ಅವರು ಫೋಟೋ ಕೂಡ ತೆಗೆಸಿಕೊಂಡಿದ್ದರು. ದರ್ಶನ್ ಮೈಸೂರಿನವರು. ದಸರಾ ಆಚರಣೆಯ ಜೊತೆ ಅವರು ವಿಶೇಷ ನಂಟು ಹೊಂದಿದ್ದಾರೆ. ಅರ್ಜುನ ಅಂಬಾರಿ ಹೊತ್ತಿದ್ದಾನೆ. ಈ ಕಾರಣಕ್ಕೂ ಅರ್ಜುನ ಎಂದರೆ ದರ್ಶನ್​ಗೆ ವಿಶೇಷ ಪ್ರೀತಿ.

4 / 6
ಸರ್ಕಾರ ಅರ್ಜುನನಿಗೆ ಸ್ಮಾರಕ ಕಟ್ಟಿಸಲಿ ಬಿಡಲಿ, ದರ್ಶನ್ ಮಾತ್ರ ಆ ವಿಚಾರವನ್ನು ಮರೆತಿಲ್ಲ. ಮಳೆಗಾಲ ಸಮೀಪಿಸಿದೆ ಎನ್ನುವ ಕಾರಣಕ್ಕೆ ಅವರು ಈ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಅನೇಕ ಪ್ರಾಣಿಗಳನ್ನು ಅವರು ಸಾಕಿದ್ದಾರೆ.

ಸರ್ಕಾರ ಅರ್ಜುನನಿಗೆ ಸ್ಮಾರಕ ಕಟ್ಟಿಸಲಿ ಬಿಡಲಿ, ದರ್ಶನ್ ಮಾತ್ರ ಆ ವಿಚಾರವನ್ನು ಮರೆತಿಲ್ಲ. ಮಳೆಗಾಲ ಸಮೀಪಿಸಿದೆ ಎನ್ನುವ ಕಾರಣಕ್ಕೆ ಅವರು ಈ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಅನೇಕ ಪ್ರಾಣಿಗಳನ್ನು ಅವರು ಸಾಕಿದ್ದಾರೆ.

5 / 6
ದರ್ಶನ್ ಅವರಿಗೆ ಇತರ ಪ್ರಾಣಿಗಳ ಬಗ್ಗೆಯೂ ಪ್ರೀತಿ ಇದೆ. ಅವರು ಮೈಸೂರು ಮೃಗಾಲಯದಲ್ಲಿ ಹುಲಿ ಹಾಗೂ ಇತರ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಕೊವಿಡ್ ಸಮಯದಲ್ಲಿ ಅವರು ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆ ನೀಡಿದ್ದರು. ಅವರ ಅಭಿಮಾನಿಗಳು ಮುಂದೆ ಬಂದು ಪ್ರಾಣಿಗಳನ್ನು ದತ್ತು ಪಡೆದಿದ್ದರು.

6 / 6
Follow us