ನಾಲ್ಕೇ ತಿಂಗಳಲ್ಲಿ 1000 ಕೋಟಿ ರೂ. ಬಿಸ್ನೆಸ್ ಮಾಡಿದ ಮಲಯಾಳಂ ಇಂಡಸ್ಟ್ರಿ; ನಮ್ಮಲ್ಲೇಕೆ ಸಾಧ್ಯವಾಗಿಲ್ಲ?
ಫೆಬ್ರವರಿ 22ರಂದು ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲೇ ಅತಿ ಹೆಚ್ಚು ಬಿಸ್ನೆಸ್ ಮಾಡಿದ ಸಿನಿಮಾ ಇದಾಗಿದೆ. ಏಪ್ರಿಲ್ 11ರಂದು ಬಿಡುಗಡೆ ಆದ ‘ಆವೇಶಂ’ ಸಿನಿಮಾ ಕೂಡ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.
ಮಲಯಾಳಂ ಚಿತ್ರರಂಗಕ್ಕೆ 2024ರಲ್ಲಿ ಬಂಪರ್ ಲಾಟರಿ ತಾಗಿದೆ. ಈ ವರ್ಷದ ಆರಂಭದಲ್ಲೇ ಒಂದಾದಮೇಲೆ ಒಂದರಂತೆ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಾಣುತ್ತಿವೆ. ಕಳೆದ ನಾಲ್ಕು ತಿಂಗಳಲ್ಲಿ ಮಲಯಾಳಂನ ಎಂಟು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದು, ಒಟ್ಟೂ 985 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಮೇ 23ರಂದು ಮಮ್ಮೂಟಿ ನಟನೆಯ ‘ಟರ್ಬೋ’ (Turbo Movie) ರಿಲೀಸ್ ಆಗಲಿದ್ದು ಗೆಲುವು ಕಾಣುವ ಸೂಚನೆ ಸಿಕ್ಕಿದೆ.
ಫೆಬ್ರವರಿ 22ರಂದು ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲೇ ಅತಿ ಹೆಚ್ಚು ಬಿಸ್ನೆಸ್ ಮಾಡಿದ ಸಿನಿಮಾ ಇದಾಗಿದೆ. ಏಪ್ರಿಲ್ 11ರಂದು ಬಿಡುಗಡೆ ಆದ ‘ಆವೇಶಂ’ ಸಿನಿಮಾ ಕೂಡ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಅವರು ರಂಗ ಹೆಸರಿನ ರೌಡಿ ಪಾತ್ರ ಮಾಡಿದ್ದರು. ಈ ಚಿತ್ರ 151.95 ಕೋಟಿ ರೂಪಾಯಿ ಬಿಸ್ನೆಸ್ ಆಗಿದೆ. ಇದೆರಡೇ ಚಿತ್ರದಿಂದ 400 ಕೋಟಿ ರೂಪಾಯಿ ಬಿಸ್ನೆಸ್ ಆಗಿದೆ.
ಮಾರ್ಚ್ 28ರಂದು ಮಲಯಾಳಂನ ‘ಆಡು ಜೀವಿತಂ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ಜನರು ಸಖತ್ ಇಷ್ಟಪಟ್ಟರು. ಈ ಚಿತ್ರ 155 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ‘ಪ್ರೇಮಲು’ ಚಿತ್ರ ಫೆಬ್ರವರಿ 9ರಂದು ಬಿಡುಗಡೆ ಆಗಿ 136 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಮ್ಮೂಟಿ ನಟನೆಯ ‘ಬ್ರಮಯುಗಂ’ 58.96 ಕೋಟಿ ರೂಪಾಯಿ, ‘ವರ್ಶಂಗಳಕ್ಕು ಶೇಶಂ’ 81 ಕೋಟಿ ರೂಪಾಯಿ, ‘ಅನ್ವೇಶಿಪ್ಪಿನ್ ಕಂಡೆದುಮ್’ ಸಿನಿಮಾ 40 ಕೋಟಿ ರೂಪಾಯಿ, ‘ಅಬ್ರಾಮ್ ಓಜ್ಲರ್’ 40.53 ಕೋಟಿ ರೂಪಾಯಿ ಕಲೆ ಹಾಕಿದೆ. ಉಳಿದ ಸಿನಿಮಾಗಳ ಗಳಿಕೆ ಸೇರಿದರೆ ಚಿತ್ರದ ಬಿಸ್ನೆಸ್ 985 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ಮಲಯಾಳಂನಲ್ಲಿ ರಾಜ್ ಶೆಟ್ಟಿ ಪವರ್ಫುಲ್ ಮ್ಯಾನ್; ಗಮನ ಸೆಳೆದ ಮಮ್ಮೂಟಿ ನಟನೆಯ ‘ಟರ್ಬೋ’ ಟ್ರೇಲರ್
ನಮ್ಮಲ್ಲೇಕೆ ಇದು ಸಾಧ್ಯವಾಗಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದಿದೆ. ಇದಕ್ಕೆ ಕಾರಣ ಆಗಿದ್ದು ದೊಡ್ಡ ಸಿನಿಮಾಗಳು, ನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗದೆ ಇರುವುದು. ‘ಕೆಜಿಎಫ್ 2’ ಒಂದೇ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1250 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಕಾಂತಾರ’ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ರೀತಿಯ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಮಲಯಾಳಂ ಸಿನಿಮಾಗಳು ಇಷ್ಟು ದೊಡ್ಡ ಮಟ್ಟದ ಬಿಸ್ನೆಸ್ನ ಈವರೆಗೆ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.