AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲಯಾಳಂನಲ್ಲಿ ರಾಜ್ ಶೆಟ್ಟಿ ಪವರ್​ಫುಲ್ ಮ್ಯಾನ್; ಗಮನ ಸೆಳೆದ ಮಮ್ಮೂಟಿ ನಟನೆಯ ‘ಟರ್ಬೋ’ ಟ್ರೇಲರ್

133 ಸೆಕೆಂಡ್​ಗಳ ಟ್ರೇಲರ್​ನಲ್ಲಿ ಆರಂಭದಲ್ಲಿ ಜೋಸ್​ನ​ (ಮಮ್ಮೂಟಿ) ಪರಿಚಯ ಮಾಡಿಕೊಡುವ ಪ್ರಯತ್ನ ನಡೆದಿದೆ. ಆತ ಕೇವಲ ಜೋಸ್ ಅಲ್ಲ ಟರ್ಬೋ ಜೋಸ್. ಟ್ರೇಲರ್​ನಲ್ಲಿ ಭರ್ಜರಿ ಆ್ಯಕ್ಷನ್ ತೋರಿಸಲಾಗಿದೆ. ಇದರ ಜೊತೆಗೆ ಕಾಮಿಡಿ ಕೂಡ ಇದೆ. ಟ್ರೇಲರ್​ನಲ್ಲಿ ರಾಜ್ ಬಿ ಶೆಟ್ಟಿ ಅವರು ಕೂಡ ಕಾಣಿಸುತ್ತಾರೆ.

ಮಲಯಾಳಂನಲ್ಲಿ ರಾಜ್ ಶೆಟ್ಟಿ ಪವರ್​ಫುಲ್ ಮ್ಯಾನ್; ಗಮನ ಸೆಳೆದ ಮಮ್ಮೂಟಿ ನಟನೆಯ ‘ಟರ್ಬೋ’ ಟ್ರೇಲರ್
ಮಮ್ಮೂಟಿ-ರಾಜ್
ರಾಜೇಶ್ ದುಗ್ಗುಮನೆ
|

Updated on: May 13, 2024 | 9:11 AM

Share

ರಾಜ್ ಬಿ. ಶೆಟ್ಟಿ (Raj B Shetty) ಅವರು ಕನ್ನಡದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಈಗ ಪರಭಾಷೆಯಿಂದ ಬೇಡಿಕೆ ಸೃಷ್ಟಿ ಆಗಿದೆ. ರಾಜ್ ಬಿ ಶೆಟ್ಟಿ ಅವರು ಮಮ್ಮೂಟಿ ನಟನೆಯ ‘ಟರ್ಬೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಗಮನ ಸೆಳೆದಿದೆ. ರಾಜ್ ಅವರು ಪವರ್​ಫುಲ್ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಟ್ರೇಲರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಮೇ 23ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

133 ಸೆಕೆಂಡ್​ಗಳ ಟ್ರೇಲರ್​ನಲ್ಲಿ ಆರಂಭದಲ್ಲಿ ಜೋಸ್​ನ​ (ಮಮ್ಮೂಟಿ) ಪರಿಚಯ ಮಾಡಿಕೊಡುವ ಪ್ರಯತ್ನ ನಡೆದಿದೆ. ಆತ ಕೇವಲ ಜೋಸ್ ಅಲ್ಲ ಟರ್ಬೋ ಜೋಸ್. ಟ್ರೇಲರ್​ನಲ್ಲಿ ಭರ್ಜರಿ ಆ್ಯಕ್ಷನ್ ತೋರಿಸಲಾಗಿದೆ. ಇದರ ಜೊತೆಗೆ ಕಾಮಿಡಿ ಕೂಡ ಇದೆ. ಟ್ರೇಲರ್​ನಲ್ಲಿ ರಾಜ್ ಬಿ ಶೆಟ್ಟಿ ಅವರು ಕೂಡ ಕಾಣಿಸುತ್ತಾರೆ. ರಾಜ್​ ಬಿ ಶೆಟ್ಟಿ ಓರ್ವ ಪವರ್​ಫುಲ್ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸಖತ್ ಆಗಿದೆ. ರಾಜ್​ ಹಾಗೂ ಮಮ್ಮೂಟಿ ನಡುವಿನ ಮುಖಾಮುಖಿ ಗಮನ ಸೆಳೆದಿದೆ. ಮಲಯಾಳಂನಲ್ಲೂ ಅವರೇ ಡಬ್ ಮಾಡಿದ್ದಾರೆ ಅನ್ನೋದು ವಿಶೇಷ.

‘ಟರ್ಬೋ’ ಚಿತ್ರವನ್ನು ‘ಪುಲಿಮುರುಗನ್’ ಖ್ಯಾತಿಯ ವಿಶಾಕ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ‘ಅಬ್ರಾಮ್ ಓಜ್ಲರ್’ ನಿರ್ದೇಶಕ ಮುಥುನ್ ಮ್ಯಾನ್ಯುಯೆಲ್ ಅವರು ಕಥೆ ಬರೆದಿದ್ದಾರೆ. ಈ ಚಿತ್ರವನ್ನು ಸ್ವತಃ ಮಮ್ಮೂಟಿ ಅವರು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ದುಲ್ಕರ್ ಸಲ್ಮಾನ್​ಗೆ ಆಕ್ಷನ್ ಕಟ್ ಹೇಳಲಿದ್ದಾರೆ ರಾಜ್ ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ ಜೊತೆ ತೆಲುಗು ನಟ ಸುನಿಲ್​ ಕೂಡ ಇದ್ದಾರೆ. ಇಬ್ಬರಿಗೂ ಇದು ಮಲಯಾಳಂನಲ್ಲಿ ಮೊದಲ ಸಿನಿಮಾ. ಅಂಜನಾಜಯ ಪ್ರಕಾಶ್, ಕಬಿರ್ ದುಹಾನ್ ಸಿಂಗ್, ಸಿದ್ದಿಕಿ ಮೊದಲಾದವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಒಂದು ಹಂತ ಮೇಲಕ್ಕೆ ಹೋದ ಯಶ್ ಫ್ಯಾನ್ಸ್; ಮೆಟ್ರೋದಲ್ಲೂ ಮಿಂಚಿದ ರಾಕಿ ಭಾಯ್
ಒಂದು ಹಂತ ಮೇಲಕ್ಕೆ ಹೋದ ಯಶ್ ಫ್ಯಾನ್ಸ್; ಮೆಟ್ರೋದಲ್ಲೂ ಮಿಂಚಿದ ರಾಕಿ ಭಾಯ್