AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಕೋಪ-ತಾಪ... ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ

VIDEO: ಕೋಪ-ತಾಪ… ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ

ಝಾಹಿರ್ ಯೂಸುಫ್
|

Updated on: Feb 02, 2026 | 2:09 PM

Share

India U19 vs Pakistan U19: ಅಲಿ ಹಸನ್ ಬಲೂಚ್​ನನ್ನು ಗುರಿಯಾಗಿಸಿ ವಾಗ್ದಾಳಿ ಆರಂಭಿಸಿದ್ದ ವೈಭವ್​ನನ್ನು ಸಹ ಆಟಗಾರರು ಬಂದು ತಡೆದಿದ್ದಾರೆ. ಈ ಮೂಲಕ ಇಬ್ಬರ ನಡುವಣ ವಾಕ್ಸಮರವನ್ನು ತಡೆದಿದ್ದಾರೆ. ಇದೀಗ ವೈಭವ್ ಸೂರ್ಯವಂಶಿಯ ಕೋಪ-ತಾಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂಡರ್-19 ವಿಶ್ವಕಪ್​ನ 12ನೇ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ ಕಲೆಹಾಕಿದ್ದು 252 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 35 ಓವರ್​ಗಳಲ್ಲಿ 168 ರನ್ ಕಲೆಹಾಕಿದ್ದರು.

ಇದರ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಅದರಲ್ಲೂ ವಿಹಾನ್ ಮಲ್ಹೋತ್ರ ಎಸೆದ 37ನೇ ಓವರ್​ನ ಕೊನೆಯ ಎಸೆತದಲ್ಲಿ ಅಲಿ ಹಸನ್ ಬಲೂಚ್ ವಿಕೆಟ್ ಒಪ್ಪಿಸಿದ್ದರು. ಅತ್ತ ಅಲಿ ಹಸನ್ ಔಟಾಗುತ್ತಿದ್ದಂತೆ ವೈಭವ್ ಸೂರ್ಯವಂಶಿ ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದಿದ್ದಾರೆ.

ಅಲಿ ಹಸನ್ ಬಲೂಚ್​ನನ್ನು ಗುರಿಯಾಗಿಸಿ ವಾಗ್ದಾಳಿ ಆರಂಭಿಸಿದ್ದ ವೈಭವ್​ನನ್ನು ಸಹ ಆಟಗಾರರು ಬಂದು ತಡೆದಿದ್ದಾರೆ. ಈ ಮೂಲಕ ಇಬ್ಬರ ನಡುವಣ ವಾಕ್ಸಮರವನ್ನು ತಡೆದಿದ್ದಾರೆ. ಇದೀಗ ವೈಭವ್ ಸೂರ್ಯವಂಶಿಯ ಕೋಪ-ತಾಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 253 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ 46.2 ಓವರ್​ಗಳಲ್ಲಿ 194 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ 58 ರನ್​ಗಳ ಜಯದೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸಿದೆ.