ಹಾಟ್ಸ್ಟಾರ್ನಲ್ಲಿ ‘ಮಂಜುಮ್ಮೇಲ್ ಬಾಯ್ಸ್’; ಅಧಿಕೃತ ಮಾಹಿತಿ ಕೊಟ್ಟ ಒಟಿಟಿ ಸಂಸ್ಥೆ
‘ಮಂಜುಮ್ಮೇಲ್ ಬಾಯ್ಸ್’ ಮಲಯಾಳಂ ಸಿನಿಮಾ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ಇತ್ತು. ಹೀಗಾಗಿ ಎಲ್ಲರಿಗೂ ಸಿನಿಮಾ ನೋಡೋಕೆ ಸಾಧ್ಯವಾಗಿಲ್ಲ. ಈಗ ಥಿಯೇಟರ್ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು.
ಮಲಯಾಳಂ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ (Manjummel Boys) ಸೂಪರ್ ಹಿಟ್ ಎನಿಸಿಕೊಂಡಿದೆ. 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರೋ ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಲು ಫ್ಯಾನ್ಸ್ ಕಾದಿದ್ದಾರೆ. ಕೊನೆಗೂ ಇದಕ್ಕೆ ಮುಹೂರ್ತ ಕೂಡ ಬಂದಿದೆ. ಈ ಬಗ್ಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಕಡೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದೆ. ಈ ಸಿನಿಮಾ ಶೀಘ್ರವೇ ಒಟಿಟಿಗೆ ಬರಲಿದೆ ಎಂದು ತಿಳಿಸಲಾಗಿದೆ. ಈ ವಿಚಾರ ಸಿನಿಪ್ರಿಯರ ಖುಷಿ ಹೆಚ್ಚಿಸಿದೆ.
‘ಮಂಜುಮ್ಮೇಲ್ ಬಾಯ್ಸ್’ ಮಲಯಾಳಂ ಸಿನಿಮಾ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ಇತ್ತು. ಹೀಗಾಗಿ ಎಲ್ಲರಿಗೂ ಸಿನಿಮಾ ನೋಡೋಕೆ ಸಾಧ್ಯವಾಗಿಲ್ಲ. ಈಗ ಥಿಯೇಟರ್ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮಲಯಾಳಂ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೂ ಪ್ರಸಾರ ಆಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಮೂಲಕ ಎಲ್ಲಾ ಭಾರತದ ಎಲ್ಲಾ ಪ್ರಮುಖ ಭಾಷಿಗರಿಗೆ ಸಿನಿಮಾ ತಲುಪಲಿದೆ.
Mollywood Top 10 WorldWide Grossers 2024 ;
1 #ManjummelBoys – ₹235 CR* 2 #Premalu – ₹136.25 CR 3 #Aadujeevitham – ₹134.6 CR* 4 #Bramayugam – ₹58.8 CR 5 #Aavesham – ₹43 CR** 6 #AbrahamOzler – ₹40.85 CR 7 #VarshangalkkuShesham – ₹38 CR** 8 #Malaikottaivaaliban – ₹30 CR 9… pic.twitter.com/QqdoAdYC9R
— South Indian BoxOffice (@BOSouthIndian) April 15, 2024
ಮೇ 3?
ಕೆಲವು ವರದಿಗಳ ಪ್ರಕಾರ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮೇ 3ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆಯಂತೆ. ಈ ಚಿತ್ರವನ್ನು ಚಿದಂಬರಂ ಅವರು ನಿರ್ದೇಶನ ಮಾಡಿದ್ದಾರೆ. ಸೌಬಿನ್ ಶಬೀರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಪೊಡುವಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸೌಬಿನ್ ಶಬೀರ್ ಅವರು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ತೆಲುಗಿನಲ್ಲಿ ಮ್ಯಾಜಿಕ್ ಮಾಡುತ್ತಾ ‘ಮಂಜುಮ್ಮೇಲ್ ಬಾಯ್ಸ್’? ಕನ್ನಡದಲ್ಲಿ ಯಾವಾಗ?
ಏನು ಕಥೆ?
ಕೊಡೆಕೆನಲ್ನಲ್ಲಿರುವ ‘ಗುಣ ಕೇವ್’ಗೆ ಮಂಜುಮ್ಮೇಲ್ ಊರಿನ ಕೆಲವರು ಟ್ರಿಪ್ ತೆರಳಿದ್ದರು. ಇದರಲ್ಲಿ ಓರ್ವ ವ್ಯಕ್ತಿ ಗುಹೆ ಒಳಗೆ ಬಿದ್ದು ಹೋಗುತ್ತಾನೆ. ಆತನ ರಕ್ಷಿಸೋ ಕಥೆಯನ್ನು ಈ ಸಿನಿಮಾ ಹೊಂದಿದೆ. 2006ರಲ್ಲಿ ನಡೆದ ಈ ಘಟನೆ ಸಿನಿಮಾ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:46 am, Wed, 24 April 24