AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗಿನಲ್ಲಿ ಮ್ಯಾಜಿಕ್ ಮಾಡುತ್ತಾ ‘ಮಂಜುಮ್ಮೇಲ್ ಬಾಯ್ಸ್’? ಕನ್ನಡದಲ್ಲಿ ಯಾವಾಗ?

ಈ ವರ್ಷ ಮಲಯಾಳಂ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆದವು. ಈ ಸಾಲಿನಲ್ಲಿ ‘ಭ್ರಮಾಯುಗಂ’, ‘ಪ್ರೇಮಲು’, ‘ಮಂಜುಮ್ಮೇಲ್ ಬಾಯ್ಸ್’ ಹಾಗೂ ‘ಆಡುಜೀವಿತಂ’ ಸಿನಿಮಾ ಇದೆ. ಈ ಪೈಕಿ ಕೆಲವನ್ನು ತೆಲುಗಿಗೆ ಡಬ್ ಮಾಡುವ ಸಾಹಸ ನಡೆದಿದೆ.

ತೆಲುಗಿನಲ್ಲಿ ಮ್ಯಾಜಿಕ್ ಮಾಡುತ್ತಾ ‘ಮಂಜುಮ್ಮೇಲ್ ಬಾಯ್ಸ್’? ಕನ್ನಡದಲ್ಲಿ ಯಾವಾಗ?
ಮಂಜುಮ್ಮೇಲ್ ಬಾಯ್ಸ್
ರಾಜೇಶ್ ದುಗ್ಗುಮನೆ
|

Updated on: Apr 04, 2024 | 6:52 AM

Share

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ (Manjummel Boys Movie) ಮಲಯಾಳಂ ಬಾಕ್ಸ್ ಆಫೀಸ್​ನಲ್ಲಿ 225 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹಣ ಗಳಿಸಿದ ಮೊದಲ ಮಲಯಾಳಂ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಈ ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡೋಕೆ ‘ಮೈತ್ರಿ ಮೂವೀ ಮೇಕರ್ಸ್’ ರೆಡಿ ಆಗಿದೆ. ಏಪ್ರಿಲ್ 6ರಿಂದ ಸಿನಿಮಾ ತೆಲುಗಿನಲ್ಲಿ ಪ್ರಸಾರ ಕಾಣಲಿದೆ. ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದ ‘ಟಿಲ್ಲು ಸ್ಕ್ವೇರ್’ ಸಿನಿಮಾ ಜೊತೆ ಇದು ಸ್ಪರ್ಧಿಸಲಿದೆ.

ಈ ವರ್ಷ ಮಲಯಾಳಂ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆದವು. ಈ ಸಾಲಿನಲ್ಲಿ ‘ಭ್ರಮಾಯುಗಂ’, ‘ಪ್ರೇಮಲು’, ‘ಮಂಜುಮ್ಮೇಲ್ ಬಾಯ್ಸ್’ ಹಾಗೂ ‘ಆಡುಜೀವಿತಂ’ ಸಿನಿಮಾ ಇದೆ. ಈ ಪೈಕಿ ಕೆಲವನ್ನು ತೆಲುಗಿಗೆ ಡಬ್ ಮಾಡುವ ಸಾಹಸ ನಡೆದಿದೆ. ಸಿತಾರಾ ಎಂಟರ್​ಟೇನ್​ಮೆಂಟ್ ‘ಭ್ರಮಾಯುಗಂ’ ಚಿತ್ರವನ್ನು ತೆಲುಗಿಗೆ ಡಬ್ ಮಾಡುವ ಪ್ರಯತ್ನ ಮಾಡಿತ್ತು. ಆದರೆ, ಸಿನಿಮಾ ಅಂದುಕೊಂಡಷ್ಟು ಕಮಾಲ್ ಮಾಡಿಲ್ಲ. ‘ಆಡು ಜೀವಿತಂ’ ಚಿತ್ರಕ್ಕೆ ಮಲಯಾಳಂನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ತೆಲುಗು ಭಾಗದಲ್ಲಿ ಅಂದುಕೊಂಡಷ್ಟು ಬಿಸ್ನೆಸ್ ಮಾಡಿಲ್ಲ. ಎಸ್​ಎಸ್​ ರಾಜಮೌಳಿ ಮಗ ಕಾರ್ತಿಕೇಯ ಅವರು ‘ಪ್ರೇಮಲು’ ಸಿನಿಮಾನ ತೆಲುಗಿಗೆ ಡಬ್ ಮಾಡಿ ಗೆಲುವು ಕಂಡಿದ್ದಾರೆ.

ಈಗ ‘ಮಂಜುಮ್ಮೇಲ್ ಬಾಯ್ಸ್’ ತೆಲುಗಿಗೆ ಡಬ್ ಆಗೊದೆ. ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಈ ಸಾಹಸಕ್ಕೆ ಮುಂದಾಗಿದೆ. ಈ ಸಿನಿಮಾ ತೆಲುಗಿನಲ್ಲಿ ಗೆಲುವು ಕಾಣುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಕನ್ನಡದಲ್ಲಿ ಈ ಸಿನಿಮಾ ರಿಲೀಸ್ ಆಗೋದು ಅನುಮಾನ ಎನ್ನಲಾಗುತ್ತಿದೆ. ಯಾರೊಬ್ಬರೂ ಇದರ ಡಬ್ಬಿಂಗ್ ಹಕ್ಕು ಪಡೆಯೋ ಸಾಹಸಕ್ಕೆ ಮುಂದಾಗಿಲ್ಲ ಎನ್ನಲಾಗಿದೆ. ಹೀಗಾಗಿ ಕನ್ನಡಕ್ಕೆ ಡಬ್ ಆದ ವರ್ಷನ್​ನ ಒಟಿಟಿಯಲ್ಲೇ ನೋಡಬೇಕಿದೆ.

ಇದನ್ನೂ ಓದಿ: ಒಟಿಟಿಗೆ ಬರೋಕೆ ರೆಡಿ ಆದ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ನೈಜ ಘಟನೆ ಆಧರಿಸಿದೆ. ಕೊಡೈಕೆನಲ್​ನಲ್ಲಿರುವ ‘ಗುಣ ಕೇವ್​’ನಲ್ಲಿ ನಡೆದ ಘಟನೆ ಆಧರಿಸಿ ಈ ಸಿನಿಮಾ ಇದೆ. ಅಡ್ವೆಂಚರ್ ಥ್ರಿಲ್ಲಿಂಗ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಸಿನಿಮಾ ಯಾವಾಗ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ ಅನ್ನೋ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ
ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ
ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ
ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ