ಒರಿ ಭೇಟಿ ಆಗಬೇಕಾ? 2500 ರೂಪಾಯಿ ಇದ್ದರೆ ಸಾಕು; ಇಲ್ಲಿದೆ ನೋಡಿ ವಿವರ
2500 ರೂಪಾಯಿಯ ಟಿಕೆಟ್ ಖರೀದಿಸಿ ಪಾರ್ಟಿಗೆ ಬರುವ ಎಲ್ಲರನ್ನೂ ಒರಿ ಭೇಟಿ ಮಾಡಲಿದ್ದಾರೆ. ಎಷ್ಟೇ ಜನರು ಬಂದರೂ ಎಲ್ಲರನ್ನೂ ಮಾತನಾಡಿಸುವುದಾಗಿ ಒರಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಈ ಪಾರ್ಟಿಯು ಏಪ್ರಿಲ್ 15ರಂದು ನಡೆಯಲಿದೆ. ಅದಕ್ಕೆ ಎಷ್ಟು ಜನರು ಹಾಜರಿ ಹಾಕುತ್ತಾರೆ ಎಂಬುದನ್ನು ಕಾದುನೋಡಬೇಕು.
ಡಿಜಿಟಲ್ ಯುಗದಲ್ಲಿ ಯಾರು, ಯಾವಾಗ ಬೇಕಾದರೂ ಫೇಮಸ್ ಆಗುತ್ತಾರೆ. ಬಾಲಿವುಡ್ (Bollywood) ಸೆಲೆಬ್ರಿಟಿಗಳ ವಲಯದಲ್ಲಿ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ (Orhan Awatramani) ಕೂಡ ಇದೇ ರೀತಿ ಫೇಮಸ್ ಆಗಿದ್ದಾರೆ. ರಾತ್ರೋರಾತ್ರಿ ಅವರು ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಒರಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಬಿಗ್ ಬಾಸ್ ಶೋಗೆ ಒರಿ ಗೆಸ್ಟ್ ಆಗಿ ಬಂದಿದ್ದರು. ಈಗ ಒರಿ (Orry) ಅವರನ್ನು ನೀವು ಕೂಡ ಭೇಟಿ ಆಗಬಹುದು. ಅದಕ್ಕಾಗಿ ಅವರ ಕಡೆಯಿಂದ ಒಂದು ಆಫರ್ ನೀಡಲಾಗಿದೆ. ಮುಂಬೈನಲ್ಲಿ ಪಾರ್ಟಿ ಏರ್ಪಡಿಸಲಾಗಿದ್ದು, ಅದಕ್ಕೆ 2500 ರೂಪಾಯಿ ಟಿಕೆಟ್ ಇಡಲಾಗಿದೆ!
ಮುಂಬೈನ ಜುಹೂನಲ್ಲಿ ಇರುವ ‘ದಿ ನೈನ್ಸ್’ ಹೋಟೆಲ್ನಲ್ಲಿ ‘ಒರಿ ಪಾರ್ಟಿ’ ನಡೆಯಲಿದೆ. ಇದರಲ್ಲಿ ಭಾಗಿಯಾಗಬೇಕು ಎಂದರೆ ಟಿಕೆಟ್ ರೂಪದಲ್ಲಿ 2500 ರೂಪಾಯಿ ಬೆಲೆಯ ಟಿ-ಶರ್ಟ್ ಖರೀದಿಸಬೇಕು. ಆ ಟೀ-ಶರ್ಟ್ ಮೇಲೆ ಒರಿ ಫೋಟೋ ಪ್ರಿಂಟ್ ಆಗಿರುತ್ತದೆ. ತಮ್ಮ ಆಪ್ತರಿಗಾಗಿ ಮತ್ತು ಸಹೋದ್ಯೋಗಿಗಳಿಗಾಗಿ ಮಾಡಿಸಿದ್ದ ಟೀ-ಶರ್ಟ್ಗಳನ್ನು ಈಗ ಟಿಕೆಟ್ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ರಿಯಾನಾಗೂ ಇಷ್ಟವಾಯ್ತು ಒರಿ ಅವತಾರ; ಕಿವಿಯೋಲೆಗೆ ಖ್ಯಾತ ಗಾಯಕಿ ಫಿದಾ
2500 ರೂಪಾಯಿಯ ಟಿಕೆಟ್ ಖರೀದಿಸಿ ಪಾರ್ಟಿಗೆ ಬರುವ ಎಲ್ಲರನ್ನೂ ಒರಿ ಭೇಟಿ ಮಾಡಲಿದ್ದಾರೆ. ಎಷ್ಟೇ ಜನರು ಬಂದರೂ ಎಲ್ಲರನ್ನೂ ಸಮಾನವಾಗಿ ಮಾತನಾಡಿಸುವುದಾಗಿ ಒರಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಈ ಪಾರ್ಟಿಯು ಏಪ್ರಿಲ್ 15ರಂದು ನಡೆಯಲಿದೆ. ಅದಕ್ಕೆ ಎಷ್ಟು ಜನರು ಹಾಜರಿ ಹಾಕುತ್ತಾರೆ ಎಂಬುದನ್ನು ಕಾದುನೋಡಬೇಕು. ಒಟ್ಟಿನಲ್ಲಿ ಒರಿ ಅವರು ತಮಗೆ ಸಿಕ್ಕಿರುವ ಜನಪ್ರಿಯತೆಯಿಂದ ಲಾಭ ಪಡೆಯಲು ಈ ಪಾರ್ಟಿ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ.
ಇದನ್ನೂ ಓದಿ: ‘ಸಲಾರ್’ ನಟಿ ಶ್ರುತಿ ಹಾಸನ್ ಗುಟ್ಟಾಗಿ ಮದುವೆ ಆಗಿದ್ದಾರಾ? ಸ್ಪಷ್ಟನೆ ನೀಡಿದ ಕಮಲ್ ಪುತ್ರಿ
ಬಾಲಿವುಡ್ನ ಅನೇಕ ಸ್ಟಾರ್ ಕಿಡ್ಗಳ ಜೊತೆ ಒರಿ ಅವರಿಗೆ ಸ್ನೇಹ ಇದೆ. ಸೆಲೆಬ್ರಿಟಿಗಳ ಅನೇಕ ಪಾರ್ಟಿ, ಸಮಾರಂಭಗಳಲ್ಲಿ ಒರಿ ಕೂಡ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭದಲ್ಲಿ ಒರಿ ಮಿಂಚಿದ್ದರು. ವಿಶ್ವ ವಿಖ್ಯಾತ ಸಿಂಗರ್ ರಿಯಾನಾ ಜೊತೆಯೂ ಒರಿ ಫೋಟೋ ತೆಗೆದುಕೊಂಡು ಸುದ್ದಿಯಾದರು. ಅವರ ಬಗ್ಗೆ ನೆಟ್ಟಿಗರಿಗೆ ಸಖತ್ ಕುತೂಹಲ ಇದೆ. ಅದನ್ನು ಎನ್ಕ್ಯಾಶ್ ಮಾಡಿಕೊಳ್ಳಲು ಒರಿ ಇಂಥದ್ದೊಂದು ಪಾರ್ಟಿ ಆಯೋಜನೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.