AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಮಾ ನದಿ ತೀರದಲ್ಲಿ ಮತ್ತೆ ರಕ್ತಚರಿತ್ರೆ: 6 ಜನರ ಭೀಕರ ಕೊಲೆ ಮಾಡಿದ ಸ್ಥಳ ಹೇಗಿದೆ ನೋಡಿ

ಭೀಮಾ ನದಿ ತೀರದಲ್ಲಿ ಮತ್ತೆ ರಕ್ತಚರಿತ್ರೆ: 6 ಜನರ ಭೀಕರ ಕೊಲೆ ಮಾಡಿದ ಸ್ಥಳ ಹೇಗಿದೆ ನೋಡಿ

ಅಕ್ಷಯ್​ ಪಲ್ಲಮಜಲು​​
|

Updated on:May 30, 2026 | 2:24 PM

Share

ವಿಜಯಪುರ ಜಿಲ್ಲೆಯ ಚಡಚನ ತಾಲೂಕಿನ ಗೋವಿಂದಪುರ ಬಳಿ ಭೀಮಾ ನದಿ ತಟದಲ್ಲಿ 24 ಎಕರೆ ಜಮೀನಿಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ನಿರಾಳೆ ಕುಟುಂಬದ ಐವರು ಸೇರಿದಂತೆ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಳೆಯ ಪ್ರೇಮ ಪ್ರಕರಣದಿಂದ ಆರಂಭವಾದ ದ್ವೇಷ ಇದೀಗ ಜಮೀನು ವ್ಯಾಜ್ಯಕ್ಕೆ ತಿರುಗಿ, ಸಂಬಂಧವಿಲ್ಲದ ಕುಟುಂಬಕ್ಕೆ ದುರಂತ ತಂದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯಪುರ, ಮೇ,30: ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಬಳಿಯ ಭೀಮಾ ನದಿ ತಟದಲ್ಲಿ ನೆನ್ನೆ (ಮೇ.29) ಭೀಕರ ಕೊಲೆ ನಡೆದಿದೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಹಾಗೂ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರು ದಾರುಣವಾಗಿ ಹತ್ಯೆ ಮಾಡಲಾಗಿದೆ. ನಿರಾಳೆ ಕುಟುಂಬದ ದುಂಡಪ್ಪ ಶಿವಪುತ್ರ, ಚಂದ್ರಕಾಂತ್, ರಾಹುಲ್, ಸಮರ್ಥ್ ಹಾಗೂ ಅವರ ಜೊತೆಗಿದ್ದ ಶಬ್ಬೀರ್ ಅತ್ತಾರ್ ಎಂಬುವರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಈ ಹತ್ಯೆ ನಡೆದ ಸ್ಥಳ ಹೇಗಿದೆ ಎಂಬುದನ್ನು ಟಿವಿ9 ಪ್ರತ್ಯಕ್ಷ ವರದಿ ಮಾಡಿದೆ. ಘಟನೆ ನಡೆದ ಜಮೀನನ್ನು ನಿರಾಳೆ ಕುಟುಂಬದವರು ಇತ್ತೀಚೆಗೆ ಖರೀದಿಸಿದ್ದರು. 15ರಿಂದ 20 ಮಂದಿ ಯುವಕರ ತಂಡ ಬೈಕ್‌ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು ಹಾರಿಸಿ ಹತ್ಯೆ ನಡೆಸಿದೆ. ಈ ಘಟನೆಯಿಂದ ವಿಜಯಪುರ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ. ಚಡಚನ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 30, 2026 01:10 PM
Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More