ಮಳೆ ಅಬ್ಬರಕ್ಕೆ ಕೆಜಿಎಫ್‌ನಲ್ಲಿ ಕುಸಿದ ಕಟ್ಟಡದ ಗೋಡೆ: 7 ಮಂದಿ ಬದುಕಿದ್ದೇ ಪವಾಡ!
ಕೋಲಾರದ ಕೆಜಿಎಫ್‌ನಲ್ಲಿ ಭಾರಿ ಮಳೆಗೆ ಕಟ್ಟಡವೊಂದರ ಗೋಡೆ ಕುಸಿದಿದ್ದು, 7 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರುಣಾರ್ಬಟಕ್ಕೆ ಜಿಲ್ಲೆಯ ವಿವಿಧೆಡೆ ಹಲವು ಅವಾಂತರಗಳು ನಡೆದಿದ್ದು, ರಾಬರ್ಟ್ ಸನ್ ಪೇಟೆಯಲ್ಲಿ ಬೃಹತ್ ಮರಗಳು ಧರೆಗುರುಳಿದ್ದರೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿ ಕಾರಿದ್ದಾರೆ.
ಕೋಲಾರ, ಮೇ 30: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಸಾಲು ಸಾಲು ಅವಾಂತರಗಳಿಗೆ ಕಾರಣವಾಗಿದ್ದು, ಕೆಜಿಎಫ್ ನಗರದಲ್ಲಿ ವರುಣಾರ್ಭಟಕ್ಕೆ ಕಟ್ಟಡವೊಂದು ಕುಸಿದಿರುವ ಘಟನೆ ನಡೆದಿದೆ. ಈ ವೇಳೆ ಅಲ್ಲೇ ಇದ್ದ 7 ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೆ. ಮಾರಿಕುಪ್ಪಂನ ಕೃಷ್ಣಮೂರ್ತಿ ಎಂಬುವರ ಮನೆ ಕುಸಿದಿದ್ದು, ಮನೆಯ ಒಂದು ಬದಿಯ ಗೋಡೆ ಸಂಪೂರ್ಣವಾಗಿ ನಾಶವಾಗಿದೆ. ಅತ್ತ ರಾಬರ್ಟ್ ಸನ್ ಪೇಟೆಯಲ್ಲಿ ಬೃಹತ್ ಮರಗಳು ಧರೆಗುರುಳಿದ್ದರೂ ತಹಶೀಲ್ದಾರ್ ಹಾಗೂ ನಗರಸಭೆ ಆಯುಕ್ತರು ಸ್ಥಳಗಳಿಗೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದ್ದು, ಅಧಿಕಾರಿಗಳ ನಡೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ

