AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ದಾಖಲೆ… ಪೊಲಾರ್ಡ್​ಗೆ​ 652 ಇನಿಂಗ್ಸ್, ವೈಭವ್​ಗೆ ಜಸ್ಟ್​ 33 ಇನಿಂಗ್ಸ್​!

Vaibhav Sooryavanshi Records: ದಾಖಲೆಗಳ ಸರದಾರರ ದಾಖಲೆಗಳನ್ನೇ ಬೆನತ್ತುತ್ತಿರುವ ವೈಭವ್ ಸೂರ್ಯವಂಶಿ ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ. ಈ ವಿಶ್ವ ದಾಖಲೆ ಸರಿಗಟ್ಟಲು ವೈಭವ್ ಸೂರ್ಯವಂಶಿ ತೆಗೆದುಕೊಂಡಿರುವುದು ಕೇವಲ 33 ಇನಿಂಗ್ಸ್​ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: May 29, 2026 | 8:50 AM

Share
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಕೀರನ್ ಪೊಲಾರ್ಡ್ 652 ಇನಿಂಗ್ಸ್​ಗಳ ಮೂಲಕ ಮಾಡಿದ್ದನ್ನು ಕೇವಲ 33 ಇನಿಂಗ್ಸ್​ಗಳಲ್ಲಿ ಸಾಧಿಸಿ ತೋರಿಸುವ ಮೂಲಕ ಎಂಬುದು ವಿಶೇಷ. (PC: IPL)

1 / 5
ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ 5 ಫೋರ್​ಗಳೊಂದಿಗೆ 97 ರನ್ ಚಚ್ಚಿದ್ದರು. ಅಂದರೆ ಬರೋಬ್ಬರಿ  334.48 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟ್ ಬೀಸಿದ್ದರು. ಈ ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ವೈಭವ್ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ. (PC: IPL)

2 / 5
ಅಂದರೆ ಟಿ20 ಕ್ರಿಕೆಟ್​ ಇತಿಹಾಸದಲ್ಲೇ 300+ ಸ್ಟ್ರೈಕ್ ರೇಟ್​ನೊಂದಿಗೆ ಅತ್ಯಧಿಕ 50+ ಸ್ಕೋರ್​ಗಳಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕೀರನ್ ಪೊಲಾರ್ಡ್​. (PC: IPL)

3 / 5
ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 652 ಇನಿಂಗ್ಸ್ ಆಡಿದ್ದಾರೆ. ಈ ವೇಳೆ  300+ ಸ್ಟ್ರೈಕ್ ರೇಟ್​ನಲ್ಲಿ 4 ಬಾರಿ 50+ ಸ್ಕೋರ್​ಗಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 300+ ಸ್ಟ್ರೈಕ್ ರೇಟ್​ನಲ್ಲಿ 4 ಬಾರಿ ಅರ್ಧಶತಕಕ್ಕಿಂತ ಅಧಿಕ ರನ್​ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. (PC: IPL)

4 / 5
ಇದೀಗ 15 ವರ್ಷದ ವೈಭವ್ ಸೂರ್ಯವಂಶಿ ಈ ಭರ್ಜರಿ ದಾಖಲೆಯನ್ನು ಸರಿಗಟ್ಟಿದ್ದಾರೆ.  ಅದು ಕೂಡ ಕೇವಲ 33 ಇನಿಂಗ್ಸ್​ಗಳಲ್ಲಿ. ಅಂದರೆ ವೈಭವ್ ಸೂರ್ಯವಂಶಿ ಈವರೆಗೆ ಆಡಿದ 33 ಟಿ20 ಇನಿಂಗ್ಸ್​ಗಳಲ್ಲಿ 4 ಬಾರಿ 300+ ಸ್ಟ್ರೈಕ್ ರೇಟ್​ನಲ್ಲಿ ಅರ್ಧಶತಕಕ್ಕಿಂತ ಅಧಿಕ ರನ್​ಗಳಿಸಿದ್ದಾರೆ. ಈ ಮೂಲಕ 652 ಇನಿಂಗ್ಸ್​ಗಳ ಮೂಲಕ ಕೀರನ್ ಪೊಲಾರ್ಡ್ ನಿರ್ಮಿಸಿದ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಕೇವಲ 33 ಇನಿಂಗ್ಸ್​ಗಳಲ್ಲಿ ಸರಿಗಟ್ಟಿದ್ದಾರೆ. (PC: IPL)

5 / 5
Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ

ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ

ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ

ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ

ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ

ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ

ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?

ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ

ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು