Horoscope Today 18 August : ಇಂದು ಈ ರಾಶಿಯವರು ದುರ್ಬಲರ ಮೇಲೆ ಪ್ರಹಾರ ಮಾಡಬಹುದು…
ನಿತ್ಯ ಭವಿಷ್ಯ: ಇಂದು ಆಗಸ್ಟ್ 18ರ ನಿತ್ಯ ಭವಿಷ್ಯವು 12 ರಾಶಿಗಳ ಫಲವನ್ನು ನೀಡುತ್ತದೆ. ಶಾಲಿವಾಹನ ಶಕ 1949, ಶ್ರಾವಣ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಮಂಗಳವಾರದ ವಿಶೇಷಗಳನ್ನು ವಿವರಿಸುತ್ತದೆ. ಮೇಷದಿಂದ ಮೀನದವರೆಗಿನ ರಾಶಿಗಳಿಗೆ ಹಣಕಾಸು, ಆರೋಗ್ಯ, ಸಂಬಂಧಗಳು ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ಮಾರ್ಗದರ್ಶನವಿದೆ. ಈ ಭವಿಷ್ಯವು ದಿನದ ಶುಭ-ಅಶುಭ ಕಾಲಗಳನ್ನು ಸಹ ಒಳಗೊಂಡಿದೆ, ನಿಮಗೆ ದಿನವನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುತ್ತದೆ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯ ಮಂಗಳವಾರದಂದು ವಿಶೇಷ ಭೋಜನ, ದೇಹದಂಡನೆ, ದೂರ ಪ್ರಯಾಣ, ಹೊಣೆಗಾರಿಕೆ ಮುಕ್ತಾಯ, ಋಣಮುಕ್ತಿಯ ಸಂತಸ, ಸ್ವಚಿಂತನೆಯಿಂದ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಸ್ವಾತೀ, ಯೋಗ : ಶುಭ, ಕರಣ : ಭದ್ರ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:04, ಯಮಗಂಡ ಕಾಲ 09:16 – 10:50, ಗುಳಿಕ ಕಾಲ 12:23 – 13:57
ಮೇಷ ರಾಶಿ :
ಸಿಗುವ ಸೌಕರ್ಯಗಳಿಂದ ಜಾಡ್ಯವು ಬರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ವಿಶ್ವಾಸದ ದುರುಪಯೋಗ ಮಾಡಿಕೊಳ್ಳಬಾರದು. ಬಂಧುಗಳ ಜೊತೆ ವ್ಯವಹಾರ ಮಾಡುವಾಗ ಪಾರದರ್ಶಕತೆ ಬೇಕಾದೀತು. ಎಲ್ಲರಿಂದಲೂ ಒಂದೇ ವಿಚಾರವನ್ನು ಕೇಳಿ ಮನಸ್ಸಿಗೆ ಭಾರವಾಗುವುದು. ಇಷ್ಟು ವರ್ಷ ನಡೆಸಿದ ಉದ್ಯಮವು ನಿಮಗೆ ಸಾಕೆನಿಸಬಹುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಶುಭ ಸಮಾರಂಭಗಳಿಗೆ ಆಹ್ವಾನ ಬರಲಿದೆ.
ವೃಷಭ ರಾಶಿ :
ಪ್ರಯಾಣಕ್ಕಾಗಿ ಹಾಗೂ ಅನಾರೋಗ್ಯವನ್ನು ಸರಿಮಾಡಿಕೊಳ್ಳಲೂ ಖರ್ಚು ಮಾಡಬೇಕಾಗಬಹುದು. ಅವಿವಾಹಿತರು ಯೋಗ್ಯ ಸಂಬಂಧವನ್ನು ನಿರೀಕ್ಷಿಸಬಹುದು. ಮಂಗಳ ಕಾರ್ಯದಿಂದ ಮನಸ್ಸು ಅರಳುವುದು. ಬದಲಾವಣೆಗಾಗಿ ನೀವು ಹಾಕಿಕೊಂಡ ಮಾರ್ಗ ಪರಿಶೀಲಿಸಿ. ಹುಡುಗಾಟ ಬುದ್ಧಿಯನ್ನು ಕಡಿಮೆ ಮಾಡುವುದು ಒಳ್ಳೆಯದು. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ.
ಮಿಥುನ ರಾಶಿ :
ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಅಪವಾದದಿಂದ ದೂರವಿರಬೇಕು ಎಂದರೂ ಏನಾದರೂ ಬಂದು ಸುತ್ತಿಕೊಳ್ಳುವುದು. ನಿರುದ್ಯೋಗಿಗಳು ಸ್ನೇಹಿತರ ಜೊತೆ ಚರ್ಚಿಸಿ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವರು. ಸಂಗಾತಿಯ ಜೊತೆ ಭವಿಷ್ಯವನ್ನು ಚಿಂತಿಸುವಿರಿ. ವಚನ ಭ್ರಷ್ಟರಾಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ಮಕ್ಕಳಿಗೆ ನೀವು ನಿರ್ಬಂಧವನ್ನು ಹಾಕಿ ಪ್ರಯೋಜನವಾಗದು.
ಕರ್ಕಾಟಕ ರಾಶಿ :
ತಂದೆಯಿಂದ ನಿಮಗೆ ಹಿತಕರವಾಗದ ಮಾತುಗಳನ್ನು ಕೇಳಬೇಕಾದೀತು. ನಿಮ್ಮ ಕೋಪವನ್ನು ಆದಷ್ಟು ಕಡಿಮೆಮಾಡಿಕೊಳ್ಳುವುದು ಉತ್ತಮ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವ್ಯವಹಾರವು ಮುಕ್ತಾಯವಾಗಬಹುದು. ಬೇಡದ ಮಾತಿಗಳನ್ನಾಡಿ ಕಲಹ ಮಾಡಿಕೊಳ್ಳುವಿರಿ. ಅವಕಾಶಗಳಿಗೆ ಕಾಯುತ್ತ ಕಾಲಹಣವಾಗುವುದು. ನಿಮ್ಮಿಂದ ಇನ್ನೊಬ್ಬರಿಗೆ ಅನಿವಾರ್ಯತೆ ಸೃಷ್ಟಿಯಾಗುವಂತೆ ಮಾಡುವಿರಿ.
ಸಿಂಹ ರಾಶಿ :
ನಿಮ್ಮ ಕೆಲಸವನ್ನು ಬೇರೆಯವರ ಮುಇಲಕ ಮಾಡಿಸಿಕೊಳ್ಳುವಿರಿ. ಇಂದಿನ ದಿನವು ಸುತ್ತಾಟದಲ್ಲಿ ಕಳೆಯಬಹುದು. ವಿವಾಹಕ್ಕೆ ಕಾದು ಕುಳಿತ ವ್ಯಕ್ತಿಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗುವುದು. ಸಮಯಕ್ಕೆ ಸರಿಯಾಗಿ ಹೋಗದೇ ಮನೆಯಲ್ಲಿ ಆತಂಕ. ಹಿರಿಯರ ಸಹಕಾರದಿಂದ ದೈಹಿಕಬಲ, ಮನೋಬಲವು ಆರ್ಥಿಕಬಲ ಹೆಚ್ಚಾಗಬಹುದು. ಧಾರ್ಮಿಕ ಉತ್ಸವಗಳಲ್ಲಿ ಭಾಗಿಯಾಗುವಿರಿ. ನಿಮಗೆ ಕೊಟ್ಟ ಹುದ್ದೆಯನ್ನು ನಿರ್ವಹಿಸುವಾಗ ಅದರ ಭಾರವೆಷ್ಟು ಎಂದು ಅರಿಯಿರಿ.
ಕನ್ಯಾ ರಾಶಿ :
ನೀವು ಹೂಡಿಕೆಯನ್ನು ಗೌಪ್ಯವಾಗಿ ಇಡಲಾಗದು. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ನಿಮ್ಮನ್ನು ಹುಡುಕಿಕೊಂಡು ಬರುವ ಖರ್ಚುಗಳು ಭಯಭೀತರನ್ನಾಗಿ ಮಾಡೀತು. ನಿಮ್ಮ ಧ್ವನಿಯನ್ನು ಅರ್ಥಮಾಡಿಕೊಳ್ಳುವವನು ನಿಮ್ಮ ಜೊತೆಗಿರಬೇಕು. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು. ಇಂದು ನೀವು ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕಂಡಿದ್ದನ್ನು ಮಾತ್ರ ಸತ್ಯವೆಂದು ನಂಬಬೇಡಿ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು.
ತುಲಾ ರಾಶಿ :
ಆಗಬೇಕಾದ ಸೂಚನೆಯನ್ನು ಕಾಲಕಾಲಕ್ಕೆ ಕೊಟ್ಟರೆ ಸಾಕು. ನಿಮ್ಮ ಸಂತೋಷವನ್ನು ಕಹಿಯಾದ ಮಾತುಗಳು ಇಂದು ಕಸಿದುಕೊಳ್ಳಬಹುದು. ನೀವು ಇಂದು ಇತರರ ದೃಷ್ಟಿಯಲ್ಲಿ ಸಣ್ಣ ಮನಸ್ಸಿನವರಂತೆ ಕಾಣಿಸುವಿರಿ. ಸಹೋದ್ಯೋಗಿಗಳ ಸಹವಾಸದಿಂದ ದುಶ್ಚಟಕ್ಕೆ ಬೀಳುವವರಿದ್ದೀರಿ. ಎಲ್ಲ ಆಟವನ್ನು ಗೆಲ್ಲಬೇಕು ಎನ್ನುವುದು ಸರಿಯಾದರೂ, ಗೆಲ್ಲಲಾಗದೂ ಎಂಬುದೂ ಸತ್ಯ. ಹಾಗಾಗಿ ನಿಮ್ಮ ವರ್ತನೆಯು ಭಾಗವಹಿಸುವುದಕ್ಕೆ ಇರಲಿ. ಆಸ್ತಿಯ ಆಧಾರದ ಮೇಲೆ ನೀವು ಸಾಲ ಪಡೆಯುವಿರಿ.
ವೃಶ್ಚಿಕ ರಾಶಿ :
ಸಂಗಾತಿಯ ಕಾರಣದಿಂದ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಉದ್ಯೋದಲ್ಲಿ ಉಂಟಾದ ರಾಜಕೀಯ ಉನ್ನತಿಗೆ ಆಪ್ತರಿಂದ ಪ್ರಶಂಸೆ ಸಿಗಬಹುದು. ಸ್ತ್ರೀಯರು ನಿಮ್ಮನ್ನು ಮುಚ್ಚಿಕೊಳ್ಳಬಹುದು. ನಿಮ್ಮ ಗುರಿಯು ಅಸ್ಪಷ್ಟವಾಗಿ ತೋರಬಹುದು. ಹಳೆಯ ನೋವು ಪುನಃ ಬರಬಹುದು. ಹಿತಶತ್ರುಗಳ ಭಯದಿಂದ ಮುಕ್ತರಾಗುವಿರಿ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಕಾಳಜಿ ನಿಮಗೆ ಅಪರೂಪವೆನಿಸುವಂತೆ ಆಗುವುದು.
ಧನು ರಾಶಿ :
ವ್ಯಾಪಾರದಲ್ಲಿ ಪ್ರಮಾಣಿಕತೆ ಇದ್ದರೆ ಆದಾಯವು ತಾನಾಗಿಯೇ ಹೆಚ್ಚುವುದು. ನಿಮಗೆ ಉಂಟಾದ ನೋವಿಗೆ ಸರ್ಕಾರ ಪರಿಹಾರವನ್ನೂ ಕೊಡಬಹುದು. ಸಂಗಾತಿಯು ನಿಮ್ಮ ಎಲ್ಲ ವಿಷಯಕ್ಕೂ ತಗಾದೆ ತೆಗೆಯಬಹುದು. ನಿಮ್ಮ ಬಗ್ಗೆ ತಿಳಿಯದೇ ಮನೆಯಲ್ಲಿ ಆತಂಕ ಸೃಷ್ಟಿಯಾಗಬಹುದು. ದುಡುಕಿನಿಂದ ನಿಮ್ಮ ವ್ಯಕ್ತಿತ್ವವು ಬೇರೆ ರೀತಿ ಕಾಣಿಸುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು.
ಮಕರ ರಾಶಿ :
ಇಂದಿನ ನಿಮ್ಮ ಪ್ರಯಾಣವು ಆಕಸ್ಮಿಕವಾಗಬಹುದು. ಹೆಚ್ಚಿ ವಿದ್ಯಾಭ್ಯಾಸಕ್ಕೆ ಬೇರೆಡೆಗೆ ತೆರಳುವ ಮನಸ್ಸು ಬರುವುದು. ಕೆಟ್ಟ ಮಾರ್ಗದಿಂದ ಬರುವ ಹಣವನ್ನು ನೀವು ನಿರಾಕರಿಸುವಿರಿ. ಸಾಲವನ್ನು ಹಂತಹಂತವಾಗಿ ತೀರಿಸಲು ನೀವು ಯೋಜನೆ ರೂಪಿಸಿಕೊಳ್ಳುವಿರಿ. ಮಧ್ಯಮವರ್ಗದವರಿಗೆ ಇಂದಿನ ಖರ್ಚನ್ನು ಸಹಿಸಲಾಗದು. ಧನಸಂಗ್ರಹದ ತುರ್ತು ಸ್ಥಿತಿ ನಿಮಗೆ ಬರಬಹುದು. ಎಂದೂ ನಂಬದವರ ಮಾತನ್ನು ನೀವು ಇಂದು ನಂಬಬೇಕಾಗುವುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು.
ಕುಂಭ ರಾಶಿ :
ಹಳೆಯ ಸಂಪತ್ತನ್ನು ನೀವು ಬಳಸಬೇಕಾಗುವುದು. ಬೌದ್ಧಿಕ ಕಸರತ್ತನ್ನು ಮಾಡಲು ಹೋಗಿ ತಲೆಕೆಡಿಸಿಕೊಳ್ಳುವಿರಿ. ಬೆಳಗಿನಿಂದಲೇ ನೀವು ಮೋಜಿನ ಮಾನಸಿಕತೆಯನ್ನು ಬೆಳೆಸಿಕೊಂಡಿರುವಿರಿ. ನಿಮ್ಮ ಅಧ್ಯಯನ ಬಗ್ಗೆ ನಿಮಗೇ ಅನುಮಾನ ಬರಬಹುದು. ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ವಾತಾವರಣವು ಇರುವುದು. ಅವರ ಮಾತನ್ನು ಧಿಕ್ಕರಿಸಬೇಡಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ.
ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ
ಮೀನ ರಾಶಿ :
ಒತ್ತಡದ ಕಾರಣದಿಂದ ಕಲಹ, ಮನಸ್ತಾಪಗಳು ಕಾಣಿಸುವುದು. ಆಕಸ್ಮಿಕವಾಗಿ ನೀವು ಆಪ್ತರ ಅಗಲುವಿಕೆಯ ವಾರ್ತೆಯನ್ನು ಕೇಳುವಿರಿ. ವಿದೇಶಕ್ಕೆ ತೆರಳುವ ಆಲೋಚನೆಯನ್ನು ಮಾಡುವಿರಿ. ಉಡುಗೊರೆಗೆ ಪ್ರತಿಯಾಗಿ ಏನನ್ನಾದರೂ ಕೊಡಬೇಕಾದೀತು. ಸಹೋದರಿಯ ಜೊತೆ ಹೆಚ್ಚಿನ ವಿಚಾರವನ್ನು ಹಂಚಿಕೊಳ್ಳುವಿರಿ. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ.
-ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




