AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ, ಬಿಗ್ ಬಾಸ್’: ಸೌಂದರ್ಯಾಗೆ ಎಚ್ಚರಿಕೆ ನೀಡಿದ ಆಸಿಯಾ

ಬೇರೆ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಅನುಭವ ಇದ್ದರೂ ಕೂಡ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವುದು ಅಷ್ಟು ಸುಲಭ ಅಲ್ಲ. ಅದೇ ಮಾತನ್ನು ಆಸಿಯಾ ಅವರು ನೆನಪಿಸಿದ್ದಾರೆ. ಸೌಂದರ್ಯಾ ಶೆಟ್ಟಿ ಜೊತೆ ಜಗಳ ಆಡುವಾಗ ‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ’ ಎಂದು ಅವರು ಖಡಕ್ ಆಗಿಯೇ ಹೇಳಿದ್ದಾರೆ.

‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ, ಬಿಗ್ ಬಾಸ್’: ಸೌಂದರ್ಯಾಗೆ ಎಚ್ಚರಿಕೆ ನೀಡಿದ ಆಸಿಯಾ
Soundarya, AsiyaImage Credit source: Colors Kannada
ಮದನ್​ ಕುಮಾರ್​
|

Updated on: Sep 22, 2026 | 10:42 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಜೋರಾಗಿದೆ. ಅದರಲ್ಲೂ ಮಹಿಳಾ ಸ್ಪರ್ಧಿಗಳ ಪೈಕಿ ಆಸಿಯಾ ಮತ್ತು ಸೌಂದರ್ಯಾ ಶೆಟ್ಟಿ ಅವರು ಆಗಾಗ ಜಗಳ ಮಾಡಿಕೊಳ್ಳುತ್ತಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಅದರಿಂದ ಬಚಾವ್ ಆಗಲು ಎಲ್ಲ ಸ್ಪರ್ಧಿಗಳು ಕಷ್ಟಪಡುತ್ತಿದ್ದಾರೆ. ಟಾಸ್ಕ್ ನಡೆಯುವ ವೇಳೆ ಆಸಿಯಾ ಹಾಗೂ ಸೌಂದರ್ಯಾ ಶೆಟ್ಟಿ ನಡುವೆ ಜಗಳ ಆಗಿದೆ. ಈ ವೇಳೆ ಆಸಿಯಾ ಅವರು ‘ಸ್ಪ್ಲಿಟ್ಸ್‌ವಿಲ್ಲಾ’ ರಿಯಾಲಿಟಿ ಶೋನ ಹೆಸರು ಪ್ರಸ್ತಾಪಿಸಿದ್ದಾರೆ.

ಎಂಟಿವಿ ವಾಹಿನಿಯ ‘ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16’ ರಿಯಾಲಿಟಿ ಶೋನಲ್ಲಿ ಸೌಂದರ್ಯಾ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿ ಅವರು ಸಿಕ್ಕಾಪಟ್ಟೆ ಅಬ್ಬರಿಸಿದ್ದರು. ಘಟಾನುಘಟಿ ಸ್ಪರ್ಧಿಗಳನ್ನು ಅವರು ಎದುರಿಸಿದ್ದರು. ಅವರ ಅಬ್ಬರ ಕಂಡು ವೀಕ್ಷಕರು ಅಚ್ಚರಿಪಟ್ಟಿದ್ದರು. ಅಲ್ಲದೇ, ಆ ಶೋನಲ್ಲಿ ಅವರು 3ನೇ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದರು.

ಸೌಂದರ್ಯಾ ಶೆಟ್ಟಿ ಅವರು ‘ಸ್ಪ್ಲಿಟ್ಸ್‌ವಿಲ್ಲಾ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು ಎಂಬುದು ಆಸಿಯಾಗೆ ತಿಳಿದಿದೆ. ಅದೇ ವಿಷಯವನ್ನು ಆಸಿಯಾ ಪ್ರಸ್ತಾಪಿಸಿದ್ದಾರೆ. ಬೇರೆ ರಿಯಾಲಿಟಿ ಶೋನಲ್ಲಿ ಅಬ್ಬರಿಸಿದ್ದರೂ ಕೂಡ ಬಿಗ್ ಬಾಸ್ ಶೋನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಅದೇ ಕಾರಣದಿಂದ ಸೌಂದರ್ಯಾಗೆ ಆಸಿಯಾ ಖಡಕ್ ತಿರುಗೇಟು ನೀಡಿದ್ದಾರೆ.

ಪದೇ ಪದೇ ಜಗಳ ನಡೆಯುವಾಗ ಆಸಿಯಾ ಅವರು ‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ, ಬಿಗ್ ಬಾಸ್’ ಎಂದು ಮಾತಿನ ಚಾಟಿ ಏಟು ನೀಡಿದರು. ಅದರಿಂದ ಕೆರಳಿದ ಸೌಂದರ್ಯಾ ಅವರು ‘ಇದು ನಿನ್ನ ಮನೆ ಅಲ್ಲ’ ಎಂದು ಪ್ರತಿವಾದ ಮಾಡಿದರು. ಮುಂದಿನ ದಿನಗಳಲ್ಲಿ ಅವರಿಬ್ಬರ ನಡುವೆ ಇನ್ನಷ್ಟು ಜಗಳ ಹೆಚ್ಚಾಗಲಿದೆ. ಇಬ್ಬರೂ ಕೂಡ ಪರಸ್ಪರ ಖಡಕ್ ಪೈಪೋಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಅತಿಯಾಗಿ ಮಾತಾಡಿದ ಮಂಜನಿಗೆ ಬುದ್ಧಿ ಕಲಿಸಿದ ಮನೆ ಮಂದಿ

ಅದೇ ರೀತಿ ಈ ಸಂಚಿಕೆಯಲ್ಲಿ ಅವಿನಾಶ್ ಮತ್ತು ತಾಂಡವ್ ರಾಮ್ ನಡುವೆ ಕೂಡ ಮಾತಿನ ಚಕಮಕಿ ಆಗಿದೆ. ಟಾಸ್ಕ್ ವಿಚಾರದಲ್ಲಿ ಅವರು ಜಗಳ ಮಾಡಿಕೊಂಡಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್​ನಿಂದ ಪಾರಾಗಬೇಕು ಎಂಬುದು ಎಲ್ಲರ ಗುರಿ ಆಗಿದೆ. ಆ ಟೆನ್ಷನ್ ಹೆಚ್ಚಿದ್ದರಿಂದಲೇ ಸ್ಪರ್ಧಿಗಳು ಈ ಪರಿ ಜಗಳ ಆಡಿಕೊಳ್ಳುವ ಪರಿಸ್ಥಿತಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ