AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಲುಗೆ ಎನರ್ಜಿ ಕಡಿಮೆ ಆಗಿದೆ, ಹಳೆಯ ಭಾಯ್ ಬೇಕು ಎಂದವರಿಗೆ ಸಲ್ಮಾನ್ ಉತ್ತರ

ತಮ್ಮ ಇತ್ತೀಚಿನ ಸಿನಿಮಾಗಳಲ್ಲಿ ಎನರ್ಜಿ ಕಡಿಮೆಯಾಗಿದೆ ಎಂಬ ಅಭಿಮಾನಿಗಳ ಮಾತಿಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಶರ್ಟ್ ಬಿಚ್ಚಿದ ಕಾರಣ, ಸೋಶಿಯಲ್ ಮೀಡಿಯಾ ನೆಗೆಟಿವಿಟಿ ಹಾಗೂ ಮುಂಬರುವ 'ಮಾತೃಭೂಮಿ' ಸಿನಿಮಾದ ಟ್ರೇಲರ್ ಮೇಲಿನ ಟೀಕೆಗಳ ಬಗ್ಗೆ ಸಲ್ಲು ಮನಬಿಚ್ಚಿ ಮಾತನಾಡಿದ್ದಾರೆ.

ಸಲ್ಲುಗೆ ಎನರ್ಜಿ ಕಡಿಮೆ ಆಗಿದೆ, ಹಳೆಯ ಭಾಯ್ ಬೇಕು ಎಂದವರಿಗೆ ಸಲ್ಮಾನ್ ಉತ್ತರ
ಸಲ್ಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 23, 2026 | 1:21 PM

Share

ಮುಖ್ಯಾಂಶಗಳು

  • ‘ಮತ್ತೆ ಹಳೆಯ ಭಾಯ್ ಬೇಕು’ ಎಂದ ಅಭಿಮಾನಿಗಳಿಗೆ ಸಲ್ಲು ಉತ್ತರವೇನು?
  • ದಿನಕ್ಕೆ ಕೇವಲ ಒಂದು ಚಮಚ ಅನ್ನ ತಿನ್ನುತ್ತಾರಂತೆ ಸಲ್ಮಾನ್ ಖಾನ್
  • ಯಾವುದೇ ಕಟ್ ಇಲ್ಲದೆ ಸೆನ್ಸಾರ್ ಪಾಸ್ ಆದ ‘ಮಾತೃಭೂಮಿ’ ಸಿನಿಮಾ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ ‘ಮಾತೃಭೂಮಿ’ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಸೀಸನ್ 20ರ ನಿರೂಪಣೆಯಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ಸಲ್ಮಾನ್ ಅವರ ಎನರ್ಜಿ ಕಡಿಮೆಯಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್ ಮತ್ತು ತಮ್ಮ ಸರಳ ಜೀವನದ ಬಗ್ಗೆಯೂ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಹಣಕಾಸಿನ ಗುರಿ ಮತ್ತು ಆಹಾರ ಪದ್ಧತಿಯ ಬಗ್ಗೆ ಸಲ್ಮಾನ್ ಕುತೂಹಲಕಾರಿ ವಿಷಯ ಹಂಚಿಕೊಂಡಿದ್ದಾರೆ. ಯೌವನದಲ್ಲಿ ತನಗೆ 10 ಲಕ್ಷ ರೂಪಾಯಿ ದುಡಿಯುವ ಆಸೆಯಿತ್ತು. ಅದನ್ನು ಬ್ಯಾಂಕಿನಲ್ಲಿ ಇಟ್ಟು ಬರುವ 2,000 ರೂಪಾಯಿ ಬಡ್ಡಿಯಲ್ಲಿ ಜೀವನ ನಡೆಸುವ ಸರಳ ಸಿದ್ಧಾಂತ ತನ್ನದಾಗಿತ್ತು ಎಂದಿದ್ದಾರೆ. ಇನ್ನು ಬಿಗ್ ಬಾಸ್ ಸ್ಪರ್ಧಿಗಳು ಒಂದು ದಿನಕ್ಕೆ ತಿನ್ನುವಷ್ಟು ಆಹಾರವನ್ನು ತಾನು ಒಂದು ವಾರಕ್ಕೆ ತಿನ್ನುತ್ತೇನೆ. ಕೇವಲ ಒಂದು ಚಮಚ ಅನ್ನ ಮತ್ತು ಸ್ವಲ್ಪ ತರಕಾರಿ ಅಥವಾ ಚಿಕನ್ ಮಾತ್ರ ಸೇವಿಸುವುದಾಗಿ ಸಲ್ಮಾನ್ ತಿಳಿಸಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಶರ್ಟ್ ಬಿಚ್ಚಿ ಟ್ರೋಲಿಗರಿಗೆ ಸಲ್ಮಾನ್ ತಿರುಗೇಟು ನೀಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ಅದು ಆ ಕ್ಷಣದ ನಿರ್ಧಾರವಾಗಿತ್ತು ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಸಿಟಿವ್ ವಿಚಾರಗಳಿಗಿಂತ ನೆಗೆಟಿವಿಟಿಯೇ ಹೆಚ್ಚು ಪ್ರಚಾರ ಪಡೆಯುತ್ತಿದೆ. ಹಣಕ್ಕಾಗಿ ಅಥವಾ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ನೆಗೆಟಿವ್ ಕಾಮೆಂಟ್ ಮಾಡುವುದು ಸರಿಯಲ್ಲ. ಒಳಗಿನಿಂದ ನೆಗೆಟಿವ್ ಇರುವವರು ಮಾತ್ರ ಹೀಗೆ ಮಾಡಲು ಸಾಧ್ಯ ಎಂದು ಸಲ್ಮಾನ್ ಕಿಡಿಕಾರಿದ್ದಾರೆ.

ಕಳೆದ 5-6 ಸಿನಿಮಾಗಳಲ್ಲಿ ಭಾಯ್ ಎನರ್ಜಿ ಕಡಿಮೆಯಾಗಿದೆ ಎಂಬ ಅಭಿಮಾನಿಗಳ ಮಾತನ್ನು ಸಲ್ಮಾನ್ ಒಪ್ಪಿಕೊಂಡಿದ್ದಾರೆ. ‘ನನ್ನ ತಂಡ ಈ ವಿಚಾರವನ್ನು ನನಗೆ ತಿಳಿಸಿದೆ. ಹಳೆಯ ಭಾಯ್ ಮತ್ತೆ ಬರಬೇಕು ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಸಲ್ಮಾನ್ ಗೆಳೆಯರ ಮಾತು ಕೇಳಬಾರದು ಎಂದೆಲ್ಲಾ ಚರ್ಚಿಸುತ್ತಿದ್ದಾರೆ. ಮಾತೃಭೂಮಿ ಟ್ರೇಲರ್ ನೋಡಿದ ಮೇಲೆ ಈ ಸಿನಿಮಾದಲ್ಲೂ ಹಳೆಯ ಭಾಯ್ ಕಾಣಿಸುತ್ತಿಲ್ಲ ಎನ್ನುತ್ತಿದ್ದಾರೆ. ಮುಂದಿನ ಸಿನಿಮಾದಲ್ಲಿ ನನ್ನ ಹಳೆಯ ಖದರ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ’ ಎಂದು ಸಲ್ಮಾನ್ ನಗುತ್ತಲೇ ಉತ್ತರಿಸಿದ್ದಾರೆ.

ಇದನ್ನೂ ಓದಿ: ‘ದಬಂಗ್’ ಸೀಕ್ವೆಲ್ ಖಚಿತ, ಆದರೆ ‘ಬಜರಂಗಿ ಭಾಯಿಜಾನ್ 2’ ಸಾಧ್ಯವಿಲ್ಲ: ಸಲ್ಮಾನ್ ಖಾನ್

ಸಲ್ಮಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಡಿಸೆಂಬರ್ 4ರಂದು ತೆರೆಗೆ ಬರಲಿದೆ. ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರಕ್ಕೆ ಚಿತ್ರಾಂಗದಾ ಸಿಂಗ್ ನಾಯಕಿಯಾಗಿದ್ದಾರೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೆ ‘ಯುಎ 16’ ಪ್ರಮಾಣಪತ್ರ ನೀಡಿದೆ. ಚಿತ್ರದ ಟ್ರೇಲರ್‌ನಲ್ಲಿರುವ ವಿಎಫ್ಎಕ್ಸ್ ಬಗ್ಗೆ ಟೀಕೆಗಳು ಕೇಳಿಬಂದಿವೆ. ಆದರೆ ತಾಂತ್ರಿಕ ಅಂಶಗಳಿಗಿಂತ ಸೈನಿಕರು ಮತ್ತು ಅವರ ಕುಟುಂಬದ ಭಾವನಾತ್ಮಕ ಕಥೆಗೆ ಹೆಚ್ಚು ಒತ್ತು ನೀಡಿ ಎಂದು ಸಲ್ಮಾನ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More