ಮಿಶ್ರ ಪ್ರತಿಕ್ರಿಯೆಗಳ ನಡುವೆ ‘ಓಂ’ ಸಿನಿಮಾ ಗಳಿಸಿದ್ದೆಷ್ಟು?
‘ಪುಷ್ಪ’ ರೀತಿಯೇ ರಕ್ತ ಚಂದನ ಕುರಿತಾದ ಕತೆಯುಳ್ಳ ‘ಓಂ’ ಸಿನಿಮಾ ಬಗ್ಗೆ ರಿಲೀಸ್ಗೆ ಮುಂಚೆಯೇ ಭಾರಿ ನಿರೀಕ್ಷೆಗಳಿದ್ದವು. ಅದರಂತೆ ಸಿನಿಮಾ ರಿಲೀಸ್ ಆದ ದಿನ ಒಳ್ಳೆಯ ಗಳಿಕೆ ಮಾಡಿತ್ತು. ಆದರೆ ಶನಿವಾರದ ಗಳಿಕೆ ತುಸು ಇಳಿಕೆಯಾಗಿತ್ತು. ಆದರೆ ಭಾನುವಾರ ಗಳಿಕೆ ಹೆಚ್ಚಿದ್ದು, ಮೂರೇ ದಿನದಲ್ಲಿ ಈ ಸಿನಿಮಾ 50 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದೆ.

ಮುಖ್ಯಾಂಶಗಳು
- ಧನುಷ್ ನಟನೆಯ ‘ಓಂ’ ಸಿನಿಮಾ ಕಲೆಕ್ಷನ್
- ಕಳೆದ ಶುಕ್ರವಾರ ರಿಲೀಸ್ ಆಗಿದ್ದ ಸಿನಿಮಾ
- ಮೂರು ದಿನಕ್ಕೆ ಸಿನಿಮಾ ಗಳಿಸಿದ್ದೆಷ್ಟು?
ಮಮ್ಮೂಟ್ಟಿ, ಧನುಷ್, ಸಾಯಿ ಪಲ್ಲವಿ, ಶ್ರೀಲೀಲಾ ನಟನೆಯ ‘ಓಂ’ ಸಿನಿಮಾ ಕಳೆದ ವಾರವಷ್ಟೆ ರಿಲೀಸ್ ಆಗಿದೆ. ‘ಪುಷ್ಪ’ ರೀತಿಯೇ ರಕ್ತ ಚಂದನ ಕುರಿತಾದ ಕತೆಯುಳ್ಳ ಈ ಸಿನಿಮಾ ಬಗ್ಗೆ ರಿಲೀಸ್ಗೆ ಮುಂಚೆಯೇ ಭಾರಿ ನಿರೀಕ್ಷೆಗಳಿದ್ದವು. ಅದರಂತೆ ಸಿನಿಮಾ ರಿಲೀಸ್ ಆದ ದಿನ ಒಳ್ಳೆಯ ಗಳಿಕೆ ಮಾಡಿತ್ತು. ಆದರೆ ಶನಿವಾರದ ಗಳಿಕೆ ತುಸು ಇಳಿಕೆಯಾಗಿತ್ತು. ಆದರೆ ಭಾನುವಾರ ಗಳಿಕೆ ಹೆಚ್ಚಿದ್ದು, ಮೂರೇ ದಿನದಲ್ಲಿ ಈ ಸಿನಿಮಾ 50 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಸ್ಪೈ ಚಿತ್ರ ‘ಓಂ: ಆಪರೇಷನ್ ಮೋಲ್’ ತನ್ನ ಮೊದಲ ವೀಕೆಂಡ್‌ನಲ್ಲಿ ಭಾರತದಲ್ಲಿ ಮಾತ್ರ 50 ಕೋಟಿ ರೂ. ಗಡಿ ದಾಟಿ ಗಳಿಕೆ ಮಾಡಿದೆ. ಈ ಸ್ಪೈ ಥ್ರಿಲ್ಲರ್ ಚಿತ್ರವು ಧನುಷ್ ಅವರ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ದಾಖಲಿಸುವ ಮೂಲಕ ಭರ್ಜರಿ ಆರಂಭ ಪಡೆದಿತ್ತು. ಶನಿವಾರ ಸ್ವಲ್ಪ ಇಳಿಕೆ ಕಂಡಿತು. ಆದರೆ ಮಮ್ಮುಟ್ಟಿ ಮತ್ತು ಸಾಯಿ ಪಲ್ಲವಿ ಸಹ ನಟಿಸಿರುವ ಈ ಚಿತ್ರ ಭಾನುವಾರವೂ ತನ್ನ ವೇಗವನ್ನು ಕಾಯ್ದುಕೊಂಡು, ಮೂರು ದಿನಗಳ ಕಲೆಕ್ಷನ್ ಅನ್ನು 50 ಕೋಟಿ ರೂ. ದಾಟುವಂತೆ ಮಾಡಿತು.
‘ಓಂ’ ಸಿನಿಮಾವು ಭಾನುವಾರ 15.90 ಕೋಟಿ ರೂ. ಗಳಿಕೆ ಮಾಡಿದ್ದು, ಆ ಮೂಲಕ ಭಾರತದ ಬಾಕ್ಸ್ ಆಫೀಸ್ ಗಳಿಕೆ 50.25 ಕೋಟಿ ಆದಂತಾಗಿದೆ. ಸಿನಿಮಾ ಮೊದಲ ದಿನ 18.10 ಕೋಟಿ ರೂ. ಗಳಿಕೆ ಕಂಡಿತ್ತು. ಇದು ಧನುಷ್ ಅವರ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಆಗಿತ್ತು. ಆದರೆ ಶನಿವಾರ ಶೇ. 10.2ರಷ್ಟು ಇಳಿಕೆ ಕಂಡು 16.25 ಕೋಟಿ ರೂ. ಗಳಿಸಿತು. ಆದರೆ ಭಾನುವಾರ ಈ ಸಿನಿಮಾ 15.90 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇದನ್ನೂ ಓದಿ:ಸದ್ಯಕ್ಕೆ ರಾಜಕೀಯಕ್ಕೆ ಬರಲ್ಲ ಧನುಷ್; ನಾಲ್ಕು ವರ್ಷ ಸಖತ್ ಬ್ಯುಸಿ
ಧನುಷ್ ಅವರ ಈ ಹಿಂದಿನ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ವಿಶ್ಲೇಷಿಸುವುದಾದರೆ, ಅವರ ‘ಕಾರ’ ಮಿಶ್ರ ಪ್ರತಿಕ್ರಿಯೆಗಳ ನಡುವೆ ಮೂರು ದಿನಗಳಲ್ಲಿ 18.35 ಕೋಟಿ ರೂ. ಗಳಿಸಿತ್ತು. ಅವರ ಹಿಂದಿ ಚಿತ್ರ ‘ತೇರೆ ಇಷ್ಕ್ ಮೇ’ ಮೂರು ದಿನಗಳಲ್ಲಿ 52 ಕೋಟಿ ರೂ. ಸಂಗ್ರಹಿಸಿತ್ತು. ಉತ್ತಮ ಪ್ರತಿಕ್ರಿಯೆ ಪಡೆಯದ ‘ಇಡ್ಲಿ ಕಡೈ’ 26.35 ಕೋಟಿ ರೂ. ಗಳಿಸಿದರೆ, ಉತ್ತಮ ವಿಮರ್ಶೆ ಪಡೆದ ‘ಕುಬೇರ’ ಮೂರು ದಿನಗಳಲ್ಲಿ 48.60 ಕೋಟಿ ರೂ. ಗಳಿಸಿತ್ತು.
‘ಓಂ’ ಸಿನಿಮಾವು ರಕ್ತ ಚಂದನ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಧನುಷ್ ಗೂಢಚಾರಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ನಟಿ ಸಾಯಿ ಪಲ್ಲವಿ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಶ್ರೀಲೀಲಾ, ಧನುಷ್ ಪತ್ನಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಮಲಯಾಳಂ ಸ್ಟಾರ್ ನಟ ಮಮ್ಮೂಟ್ಟಿ ಅವರು ಈ ಸಿನಿಮಾನಲ್ಲಿ ಮಾಫಿಯಾ ವ್ಯಕ್ತಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




