ದಿನ ಭವಿಷ್ಯ: ಇಂದು ಈ ರಾಶಿಯವರು ತಂತ್ರಗಾರಿಕೆಯಿಂದ ಎಲ್ಲರನ್ನ ವಶಪಡಿಸಿಕೊಳ್ಳುವರು
ಶಾಲಿವಾಹನ ಶಕ ವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶೀ ತಿಥಿಯ ಮಂಗಳವಾರದಂದು ದೊಡ್ಡವರ ಜೊತೆ ಅಂತರ, ಕೌಶಲದಿಂದ ಸಂತೋಷ, ಚರಾಸ್ತಿಯ ಮಾತುಕತೆ, ಆರೋಗ್ಯಕ್ಕೆ ಖರ್ಚು ಮತ್ತು ಆದಾಯದ ಹೂಡಿಕೆ ಇವೆಲ್ಲ ಈ ದಿನದ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಅತಿಗಂಡ, ಕರಣ : ಭದ್ರ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 14 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:14 – 16:44, ಯಮಗಂಡ ಕಾಲ 09:11 – 10:42, ಗುಳಿಕ ಕಾಲ 12:12 – 13:43
ಮೇಷ ರಾಶಿ: ವಾಹನದಿಂದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭವಿರಲಿದೆ. ವೃತ್ತಿಯಲ್ಲಿ ನಿಮಗೆ ಅಸಹಕಾರವನ್ನು ತೋರಿಸುವರು. ನಿಮ್ಮ ಯೋಜನೆಗೆ ಸಹಕಾರ ನೀಡುವವರನ್ನು ನೀವೇ ಆರಿಸಿಕೊಳ್ಳುವಿರಿ. ನೀವು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಮನಸ್ಸು ಪರಿವರ್ತನೆಯಾಗುತ್ತ ಇರುವುದು. ನ್ಯಾಯಾಲಯದಲ್ಲಿ ನಿಮ್ಮ ಬಗ್ಗೆ ವಿರೋಧಿಗಳು ದೂರನ್ನು ಸಲ್ಲಿಸಬಹುದು. ನಿಮ್ಮದೇ ತಪ್ಪಿದ್ದರೂ ವಾದ ಮಾಡಿ ಗೆಲ್ಲುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು.
ವೃಷಭ ರಾಶಿ: ದಿನದ ಆರಂಭದಲ್ಲಿ ಅತಿಯಾದ ಉತ್ಸಾಹವಿರದು. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲೆ ಕಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ನಿಮ್ಮ ಉದ್ಯಮವನ್ನು ಮಾಡಲಿದ್ದೀರಿ. ಆಸ್ತಿಯ ಖರೀದಿಯ ಬಗ್ಗೆ ಖಚಿತ ನಿರ್ಧಾರವನ್ನು ಮಾಡಿಕೊಳ್ಳಿ. ಆಪ್ತರಿಗೆ ಇಷ್ಟವಾಗುವುದನ್ನು ಮಾಡುವಿರಿ. ಇಂದು ನೀವು ಮಾತುಗಳನ್ನು ಯೋಚಿಸಿ ಆಡುವಿರಿ. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳಿ.
ಮಿಥುನ ರಾಶಿ: ಅಂಧಾಭಿಮಾನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿಕೊಳ್ಳಿ. ಮಕ್ಕಳ ತುಂಟಾಟವು ನಿಮಗೆ ಇಷ್ಟವಾಗುವುದು. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿ ಆಗುವುದು.
ಕರ್ಕಾಟಕ ರಾಶಿ: ಪ್ರಶಂಸೆಯ ಕಾರಣದಿಂದ ಖುಷಿಯಾಗಿ ಕೆಲಸ ಮಾಡುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗಲಿದೆ. ಯಂತ್ರಗಳ ದುರಸ್ತಿಯನ್ನು ನೀವೇ ಮಾಡುವಿರಿ. ನೀವು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟಪಡುವಿರಿ. ಸಂಗಾತಿಯ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಷಯವು ಬಹಳಷ್ಟು ಇರಲಿದೆ. ಯಾರಾದರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮಿಂದ ಸಲಹೆಯನ್ನು ಪಡೆಯಬಹುದು. ಕೃಷಿಯು ನಿಮ್ಮ ಇಷ್ಟದ ಸಂಗತಿಯಾಗಲಿದೆ.
ಸಿಂಹ ರಾಶಿ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ಯಥೇಚ್ಛವಾಗಿ ಆದರೂ ಲಾಭವು ಬಹಳ ಕಡಿಮೆ ಇರಲಿದೆ. ಓಡಾಟದಲ್ಲಿ ನಿಮ್ಮ ವಸ್ತವು ಕಳೆದುಹೋಗಬಹುದು. ಅಪರಿಚಿತರು ನಿಮ್ಮಿಂದ ಏನನ್ನಾದರೂ ಬಯಸಿಯಾರು. ಅಧಿಕ ನಿರೀಕ್ಷೆಯನ್ನು ಬಂಧುಗಳ ಕಡೆಯಿಂದ ಮಾಡುವಿರಿ. ತಂದೆಯ ಆರೋಗ್ಯವು ವ್ಯತ್ಯಾಸವಾಗಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ.
ಕನ್ಯಾ ರಾಶಿ: ನಿಮ್ಮಲ್ಲಿ ಸಂತೋಷವಿದ್ದರೆ, ಹೆಚ್ಚು ಕಷ್ಟವಾಗುವುದು. ಇಂದು ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಬಯಸುವಿರಿ. ಹಣಕಾಸಿನ ಕೊರತೆಯು ಸಲ್ಲದ ಕೆಲಸಕ್ಕೆ ನಿಮ್ಮನ್ನು ಜೋಡಿಸುವ ಸಾಧ್ಯತೆ ಇದೆ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ. ಮಕ್ಕಳ ಮೇಲೆ ನಿಮ್ಮ ಕಾಳಜಿಯು ಅತಿಯಾಗಿರಲಿದೆ. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಯಾವುದಾದರೂ ಸ್ಥಳವನ್ನು ಹುಡುಕುವಿರಿ. ಸಂಗಾತಿಗೆ ಬೇಕಾದ ವಸ್ತುವನ್ನು ಕೊಡಿಸಬೇಕಾಗುವುದು.
ತುಲಾ ರಾಶಿ: ಹಳೆಯ ವಸ್ತುಗಳನ್ನೇ ಸರಿ ಮಾಡಿಕೊಳ್ಳುವಿರಿ. ನೆಮ್ಮದಿಗಾಗಿ ಬಹಳ ಹುಡುಕಾಟ ಮಾಡುವಿರಿ. ಒತ್ತಡದಿಂದ ಹೊರಗೆ ಬರುವ ಮಾರ್ಗವನ್ನು ಕಂಡುಕೊಳ್ಳುವಿರಿ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉಂಟಾದ ಪ್ರಗತಿಯಿಂದ ಸಂತೋಷವಾಗಲಿದೆ. ಮಕ್ಕಳ ಜೊತೆ ಅಧಿಕ ಸಮಯವನ್ನು ಕಳೆಯುವಿರಿ. ಸಿಟ್ಟಿನಿಂದ ಇಂದು ಖುಷಿಯ ವಾತಾವರಣದಿಂದ ದೂರವಿರುವಿರಿ. ನಿಮ್ಮ ಮಾತು ಇತರರಿಗೆ ಇಷ್ಟವಾಗದು.
ವೃಶ್ಚಿಕ ರಾಶಿ: ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ಅಧಿಕಾರದಲ್ಲಿರುವವರು ಒತ್ತಡಕ್ಕೆ ಸಿಲುಕಿರುವರು. ಗೆಳೆಯರ ಮಾತಿಗೆ ಹೆಚ್ಚು ಬೆಲೆ ಆದರವನ್ನು ತೋರುವಿರಿ. ನಿಮಗಾಗುವ ಸಣ್ಣ ತೊಂದರೆಯನ್ನೂ ನೀವು ಸಹಿಸಲಾರಿರಿ. ಬಂಧುಗಳು ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರುವರು. ಮನೆಯ ಹಿರಿಯರ ಸೇವೆಯಲ್ಲಿ ಆಸಕ್ತಿ ಬರಬಹುದು. ಸೋಲನ್ನು ಒಪ್ಪಿಕೊಂಡು ಸಂತೋಷದಿಂದ ಮುನ್ನಡೆಯುವಿರಿ. ಒರಟು ತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು.
ಧನು ರಾಶಿ: ನಿಮ್ಮ ಹೊಸ ಉತ್ಸಾಹದಿಂದ ಅಸಂಬದ್ಧವನ್ನು ಮಾಡಿಕೊಳ್ಳಬಹುದು. ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳಿಂದ ಶಾಂತಿ ಇರುವುದು. ಸ್ವಾಭಿಮಾನಕ್ಕೆ ತೊಂದರೆಯಾದರೆ ನಿಮಗೆ ಸಹಿಲಾಗದು. ಓದುವ ಹವ್ಯಾಸವನ್ನು ಹೆಚ್ಚಿಸಿ. ಅಗತ್ಯದ ಖರ್ಚುಗಳಿಗೆ ಮಾತ್ರ ಪ್ರಾಧಾನ್ಯ ನೀಡಿ. ಹೆಚ್ಚು ವೃತ್ತಿಗಳಲ್ಲಿ ನಿಮಗೆ ಆಯ್ಕೆಗೆ ಗೊಂದಲವಾಗಬಹುದು. ವಾಯುವಿಹಾರದಿಂದ ಆರೋಗ್ಯದಲ್ಲಿ ಚೇತರಿಕೆ ಇರುವುದು. ಇಂದು ನಿಮಗೆ ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವ ಅವಕಾಶ.
ಮಕರ ರಾಶಿ: ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನವನ್ನು ಇಟ್ಟಕೊಳ್ಳುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದೆ. ಮನೆಯವರನ್ನು ಕರೆದುಕೊಂಡು ದೂರದ ಪ್ರಯಾಣವನ್ನು ಮಾಡುವಿರಿ. ಆಸ್ತಿಗಾಗಿ ದಾಖಲೆಗಳನ್ನು ಬದಲಿಸುವ ಯೋಚನೆ ಮಾಡುವಿರಿ. ಸತ್ಯವನ್ನು ಮುಚ್ಚಿಡುವುದು ನಿಮ್ಮ ಮಾತಿನಲ್ಲಿ ಗೊತ್ತಾಗಲಿದೆ. ಅತಿಯಾದ ಮೋಹದಿಂದ ದುಃಖವಾಗಲಿದೆ.
ಕುಂಭ ರಾಶಿ: ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಅನಿರೀಕ್ಷಿತ ಘಟನೆಗಳಿಂದ ನೀವು ಬೆಚ್ಚಿಬೀಳುವಿರಿ. ಹೊಸ ವ್ಯಕ್ತಿಯ ಪರಿಚಯದಿಂದ ಸಂತಸವಾಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಉದ್ಯೋಗಸ್ಥರಿಗೆ ಆದಾಯದಲ್ಲಿ ಅಲ್ಪ ಏರಿಕೆ ಇರಲಿದೆ. ಅವಿವಾಹಿತರಿಗೆ ವಿವಾಹಯೋಗವು ಇರಲಿದೆ. ಒಂಟಿತನವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ.
ಮೀನ ರಾಶಿ: ಯಾರದೋ ಮಾತಿನ ಕಾರಣಕ್ಕೆ ಮನಸ್ಸಿನೊಳಗೇ ಸಂಕಟ ಪಡುವಿರಿ. ಶಾಂತ ಚಿತ್ತದಿಂದ ಎದುರಿಸಿದರೆ ಒಳ್ಳೆಯ ಫಲ ದೊರಕಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಆತುರದಲ್ಲಿ ನಿರ್ಧಾರವನ್ನು ಮಾಡಬೇಡಿ. ವ್ಯಾಪಾರದಲ್ಲಿ ಚಾಣಾಕ್ಷತೆ ಇರುವುದು. ಮಕ್ಕಳ ಬಗ್ಗೆ ಹೆಚ್ಚು ಅನುಮಾನ ಬೇಡ. ವಿವಾಹದ ವಿಚಾರದಲ್ಲಿ ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿನ ಮೇಲೆ ನಂಬಿಕೆ ಇರಲಿ. ನಿಮ್ಮನ್ನು ಹೊಗಳಿ ಶೂಲಕ್ಕೆ ಏರಿಸಬಹುದು.
ಲೋಹಿತ್ ಹೆಬ್ಬಾರ್ – 8762924271 (what’s app only)
Published On - 1:07 am, Tue, 22 September 26




