AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ

ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ

ಅಕ್ಷತಾ ವರ್ಕಾಡಿ
|

Updated on: Sep 22, 2026 | 5:01 PM

Share

ಧಾರವಾಡದ ಭಾರತೀಯ ವಿದ್ಯಾ ಕೇಂದ್ರದ ಸರ್ಕಾರಿ ಅನುದಾನಿತ ಬಾಲಕಿಯರ ಶಾಲೆಯ ತರಗತಿ ಕೊಠಡಿಯೊಂದನ್ನು ರಾತ್ರೋರಾತ್ರಿ ಧ್ವಂಸಗೊಳಿಸಲಾಗಿದೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಿದ, ಬಹುತೇಕ ದಲಿತ ಮತ್ತು ವಲಸೆ ಕಾರ್ಮಿಕರ ಮಕ್ಕಳಿರುವ ಈ ಶಾಲೆಯ ವಿದ್ಯಾರ್ಥಿಗಳು ಈಗ ರಸ್ತೆ ಗದ್ದಲದ ನಡುವೆ ಪೆಂಡಾಲ್ ಅಡಿ ಪಾಠ ಕೇಳುತ್ತಿದ್ದಾರೆ. ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಧಾರವಾಡದ ಭಾರತೀಯ ವಿದ್ಯಾ ಕೇಂದ್ರದ ಅನುದಾನಿತ ಬಾಲಕಿಯರ ಶಾಲೆಯ ತರಗತಿ ಕೊಠಡಿಯೊಂದನ್ನು ರಾತ್ರೋರಾತ್ರಿ ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 1966ರಲ್ಲಿ ಆರಂಭಗೊಂಡ ಈ ಹಳೆಯ ಶಾಲೆಯಲ್ಲಿ ಐದರಿಂದ ಹತ್ತನೇ ತರಗತಿಯ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯ ಮನವಿ ಮೀರಿ, ಹೊಸ ಜಾಗದ ಮಾಲೀಕರ ಕಡೆಯವರು ಜೆಸಿಬಿ ಬಳಸಿ ಕೊಠಡಿಯನ್ನು ತೆರವುಗೊಳಿಸಿದ್ದಾರೆ. ಧ್ವಂಸಗೊಂಡ ತರಗತಿಯ ಡೆಸ್ಕ್‌ಗಳನ್ನು ಹೊರಗೆ ಹಾಕಲಾಗಿದ್ದು, ವಿದ್ಯಾರ್ಥಿಗಳು ಆಟದ ಮೈದಾನದಲ್ಲೇ ಟೆಂಟ್ (ಪೆಂಡಾಲ್) ಹಾಕಿಸಿ ಪಾಠ ಕೇಳುವ ದುಸ್ಥಿತಿ ಎದುರಾಗಿದೆ. ಶಾಲೆಯ ಶೇಕಡ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದಲಿತ ಮತ್ತು ವಲಸೆ ಕಾರ್ಮಿಕರ ಮಕ್ಕಳಾಗಿದ್ದು, ಉತ್ತಮ ಶೈಕ್ಷಣಿಕ ದಾಖಲೆಗಳನ್ನು ಹೊಂದಿದ್ದಾರೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಈ ಶಾಲೆಗೆ ಶಿಕ್ಷಕರ ಕೊರತೆ ಇದ್ದರೂ, ಸಂಸ್ಥೆಯೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಣ ನೀಡುತ್ತಿದೆ. ಈ ಘಟನೆ ಶಿಕ್ಷಣದ ಹಕ್ಕಿಗೆ ಧಕ್ಕೆ ತಂದಿದ್ದು, ಉಪನಗರ ಠಾಣೆ, ಡಿಡಿಪಿ ಮತ್ತು ಬಿಇಒಗೆ ದೂರು ದಾಖಲಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us