ಅಡಿಕೆ ಬೆಳೆಗಾರರಿಗೆ ಶುಭಸುದ್ದಿ: ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆ ಇನ್ನು ಮುಂದೆ ಕಸವಲ್ಲ, ಬದಲಿಗೆ ಬೆಳೆಗಾರರಿಗೆ ಗಟ್ಟಿ ಆದಾಯ ತಂದುಕೊಡುವ ಬಂಗಾರದ ಹಾಳೆಯಾಗಲಿದೆ. ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿಯಾಗಿದ್ದು, ಕೃಷಿ ತ್ಯಾಜ್ಯದಿಂದ 2ಜಿ ಜೈವಿಕ ಇಂಧನ ತಯಾರಿಕೆಯು ದೇಶದ ಇಂಧನ ಕೊರತೆಗೆ ದಾರಿದೀಪವಾಗಲಿದೆ. ಇದು ಲಕ್ಷಾಂತರ ಅಡಿಕೆ ಬೆಳೆಗಾರರಿಗೆ ಉಪ ಆದಾಯದ ಹೊಸ ಭರವಸೆ ಮೂಡಿಸಿದೆ.
ಇಷ್ಟು ದಿನ ಕೃಷಿ ತ್ಯಾಜ್ಯವೆಂದು ಮೂಲೆಗುಂಪಾಗಿದ್ದ ಅಡಿಕೆ ಹಾಳೆ ಇನ್ಮುಂದೆ ಅಡಿಕೆ ಬೆಳೆಗಾರರಿಗೆ ಬಂಗಾರದ ಆದಾಯದ ಮೂಲವಾಗಲಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಇಂಧನ ಅಭಾವಕ್ಕೆ ಪರಿಹಾರವಾಗಿ ಅಡಿಕೆ ಹಾಳೆಯಿಂದ ಪರ್ಯಾಯ ಇಂಧನವಾದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿಯಾಗಿದೆ. ಪ್ರಯೋಗಾಲಯಗಳಲ್ಲಿ ಈ ಸಂಶೋಧನೆ ಯಶಸ್ವಿಯಾಗಿದ್ದು, ಕರ್ನಾಟಕದ ಲಕ್ಷಾಂತರ ಅಡಿಕೆ ಬೆಳೆಗಾರರ ಪಾಲಿಗೆ ಹೊಸ ಉಪ ಆದಾಯದ ಭರವಸೆ ಮೂಡಿಸಿದೆ. ಅಡಿಕೆ ಹಾಳೆಯಲ್ಲಿರುವ ಸೆಲ್ಯುಲೋಸ್ ಅಂಶವನ್ನು ಬಳಸಿ, ಒಂದು ಸಂಕೀರ್ಣ ವೈಜ್ಞಾನಿಕ ಪ್ರಕ್ರಿಯೆಯ ಮೂಲಕ ಎಥೆನಾಲ್ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯು ಹಾಳೆಗಳ ಸಂಗ್ರಹ, ಶುದ್ಧೀಕರಣ, ಪ್ರೀ-ಟ್ರೀಟ್‌ಮೆಂಟ್, ಕಿಣ್ವಗಳ ಬಳಕೆ, ಫರ್ಮೆಂಟೇಷನ್ ಮತ್ತು ಬಟ್ಟಿ ಇಳಿಸುವಿಕೆ ಹಂತಗಳನ್ನು ಒಳಗೊಂಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

