- Kannada News Photo gallery Cricket photos IPL 2026: Rishabh Pant Removed as LSG Captain; 4 More Leaders Face Ax!
IPL 2026: ರಿಷಭ್ ಪಂತ್ ಜೊತೆಗೆ ಈ 4 ತಂಡಗಳ ನಾಯಕರಿಗೂ ಗೇಟ್ಪಾಸ್ ಖಚಿತ
IPL 2026 Captaincy Shake-Up: ಐಪಿಎಲ್ 2026 ಮುಗಿಯುವುದಕ್ಕೂ ಮುನ್ನವೇ ಲಕ್ನೋ ನಾಯಕತ್ವದಿಂದ ರಿಷಭ್ ಪಂತ್ ಅವರನ್ನು ತೆಗೆದುಹಾಕಲಾಗಿದೆ. ತಂಡದ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣ. ಪಂತ್ ಜೊತೆಗೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ ಮತ್ತು ರುತುರಾಜ್ ಗಾಯಕ್ವಾಡ್ ಅವರೂ ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇವರೆಲ್ಲರ ವೈಯಕ್ತಿಕ ಮತ್ತು ತಂಡದ ಪ್ರದರ್ಶನ ಕಳಪೆಯಾಗಿದ್ದು, ಮುಂಬರುವ ಆವೃತ್ತಿಗೆ ಹೊಸ ನಾಯಕರ ನೇಮಕವಾಗುವ ಸಾಧ್ಯತೆಗಳಿವೆ.
Updated on: May 29, 2026 | 6:50 PM

2026 ರ ಐಪಿಎಲ್ ಮುಗಿಯುವುದಕ್ಕೂ ಮುನ್ನವೇ ಈ ಮೊದಲೇ ನಿರೀಕ್ಷಿಸಿದಂತೆ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕತ್ವದಿಂದ ರಿಷಭ್ ಪಂತ್ ಅವರನ್ನು ತೆಗೆದುಹಾಕಲಾಗಿದೆ. ಈ ಆವೃತ್ತಿಯಲ್ಲಿ ಲಕ್ನೋ ತಂಡ ಅಂಕಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕೊನೆಗೊಂಡಿತು. ಅದರ ಪರಿಣಾಮವಾಗಿ ರಿಷಭ್ ಪಂತ್ ತಮ್ಮ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಪಂತ್ ಜೊತೆಗೆ ಇನ್ನೂ ನಾಲ್ಕು ಆಟಗಾರರು ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ (PC- PTI).

ಪಂತ್ ಜೊತೆಗೆ, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ. ಇವರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್, ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕೂಡ ರುತುರಾಜ್ ಗಾಯಕ್ವಾಡ್ ಅವರನ್ನು ಕೂಡ ನಾಯಕತ್ವದಿಂದ ತೆಗೆದು ಹಾಕುವ ಸಾಧ್ಯತೆಗಳಿವೆ (PC- PTI).

ರಿಷಭ್ ಪಂತ್ ಈ ಆವೃತ್ತಿಯಲ್ಲಿ ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್‌ಮನ್ ಆಗಿಯೂ ವಿಫಲರಾದರು. ಐಪಿಎಲ್ 2026 ರಲ್ಲಿ ಆಡಿದ 14 ಪಂದ್ಯಗಳಲ್ಲಿ ಪಂತ್ 28.3 ಸರಾಸರಿ ಮತ್ತು 140 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ನಲ್ಲಿ ಕೇವಲ 312 ರನ್ ಗಳಿಸಿದರು. ಇದರಲ್ಲಿ ಕೇವಲ ಒಂದೇ ಒಂದು ಅರ್ಧಶತಕ ಮಾತ್ರ ಸೇರಿತ್ತು (PC- PTI).

ಹಾರ್ದಿಕ್ ಪಾಂಡ್ಯ ಕೂಡ ಮುಂಬೈ ಇಂಡಿಯ ನಾಯಕತ್ವ ತ್ಯಜಿಸುವುದಾಗಿ ಹೇಳಿದ್ದು ತಂಡವನ್ನು ಸಹ ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಪಾಂಡ್ಯ, ಫ್ರಾಂಚೈಸಿಯ ಬಳಿ ಈ ಬಗ್ಗೆ ಮಾತನಾಡಿದ್ದು, ಫ್ರಾಂಚೈಸಿ ಕೂಡ ಅವರ ನಿರ್ಧಾರವನ್ನು ಅಂಗೀಕರಿಸಿದೆ ಎಂದು ವರದಿಯಾಗಿದೆ. ಪಾಂಡ್ಯ ನಿರ್ಗಮನಕ್ಕೆ ಮಾನಸಿಕ ಆಯಾಸ ಮತ್ತು ಗಾಯ ಕಾರಣ ಎಂದು ಹೇಳಲಾಗುತ್ತಿದೆ (PC- PTI).

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಕೂಡ ನಾಯಕತ್ವದಿಂದ ಕೆಳಗಿಳಯುವ ಸಾಧ್ಯತೆ ಇದೆ. ಅಕ್ಷರ್ ತಮ್ಮ ನಾಯಕತ್ವದಲ್ಲಿ ತಂಡವನ್ನು ಪ್ಲೇಆಫ್‌ಗೆ ತಲುಪಿಸುವಲು ವಿಫಲರಾದರು. ಮಾತ್ರವಲ್ಲದೆ ಅಕ್ಷರ್ ಆಟಗಾರನಾಗಿ 19.22 ರ ಸರಾಸರಿಯಲ್ಲಿ ಕೇವಲ 173 ರನ್ ಮತ್ತು 11 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಹೀಗಾಗಿ ಅವರ ಸ್ಥಾನಕ್ಕೂ ಕುತ್ತು ಬರುವುದು ಖಚಿತ (PC- PTI).

ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಕೂಡ ತಮ್ಮ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುವಲ್ಲಿ ವಿಫಲರಾದರು. ರಹಾನೆ 14 ಪಂದ್ಯಗಳಲ್ಲಿ 25.76 ಸರಾಸರಿಯಲ್ಲಿ 335 ರನ್ ಮಾತ್ರ ಕಲೆಹಾಕಿದರು. ರಹಾನೆ ಅವರ ವಯಸ್ಸನ್ನು ಗಮನಿಸಿದರೆ, ಮುಂದಿನ ಆವೃತ್ತಿಯಲ್ಲಿ ಕೆಕೆಆರ್ ಹೊಸ ನಾಯಕನನ್ನು ನೇಮಿಸುವ ಸಾಧ್ಯತೆ ಇದೆ (PC- PTI).

ಸಿಎಸ್ಕೆ ನಾಯಕನಾಗಿ ರುತುರಾಜ್ ಗಾಯಕ್ವಾಡ್ ಅವರ ಪ್ರದರ್ಶನವೂ ಕಳಪೆಯಾಗಿತ್ತು. ರುತುರಾಜ್ ನಾಯಕತ್ವದಲ್ಲಿ ಸಿಎಸ್ಕೆ ತಂಡ ಪ್ಲೇಆಫ್ ತಲುಪುವಲ್ಲಿ ವಿಫಲವಾಯಿತು. ಇದರ ಜೊತೆಗೆ ಗಾಯಕ್ವಾಡ್ ಅವರು ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಲಿಲ್ಲ. ಗಾಯಕ್ವಾಡ್ ಆಡಿದ 14 ಪಂದ್ಯಗಳಲ್ಲಿ 28.08 ಸರಾಸರಿಯಲ್ಲಿ 337 ರನ್ ಮಾತ್ರ ಕಲೆಹಾಕಿದರು (PC- PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More




