AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lucknow Super Giants

Lucknow Super Giants

Lucknow Super Giants

IPL: ಅತ್ಯಧಿಕ ಬ್ರಾಂಡ್ ಮೌಲ್ಯ ಹೊಂದಿರುವ ತಂಡ ಆರ್​ಸಿಬಿ; ಸಿಎಸ್​ಕೆಗೆ ಯಾವ ಸ್ಥಾನ?

IPL brand valuation 2026: ಹೌಲಿಹಾನ್ ಲೋಕೆ 2026ರ ಐಪಿಎಲ್ ಬ್ರಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಐಪಿಎಲ್ ವ್ಯವಹಾರ ಮೌಲ್ಯ 2 ಲಕ್ಷ ಕೋಟಿ ರೂ. ತಲುಪಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು $312 ಮಿಲಿಯನ್ ಬ್ರಾಂಡ್ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ, $300 ಮಿಲಿಯನ್ ದಾಟಿದ ಮೊದಲ ಐಪಿಎಲ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್, ಕೆಕೆಆರ್, ಮತ್ತು ಸಿಎಸ್​ಕೆ ಕೂಡ ಗಮನಾರ್ಹ ಬ್ರಾಂಡ್ ಮೌಲ್ಯಗಳನ್ನು ಹೊಂದಿವೆ. ಐಪಿಎಲ್ ಜಾಗತಿಕವಾಗಿ ಕ್ರೀಡಾ ಕ್ಷೇತ್ರದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ.

IPL 2027: ಮತ್ತೊಬ್ಬ ಸ್ಟಾರ್ ಆಟಗಾರನನ್ನು ಬಿಟ್ಟುಕೊಡಲು ಮುಂದಾದ ಲಕ್ನೋ

CSK-LSG IPL Player Trade: ಐಪಿಎಲ್ 2027 ರ ಮಿನಿ ಹರಾಜಿಗೂ ಮುನ್ನ, ಸಿಎಸ್‌ಕೆ ಮತ್ತು ಎಲ್‌ಎಸ್‌ಜಿ ನಡುವೆ ಮಹತ್ವದ ಆಟಗಾರರ ವಿನಿಮಯ ನಡೆಯುವ ಸಾಧ್ಯತೆಯಿದೆ. ಎಲ್‌ಎಸ್‌ಜಿ ಯುವ ಬ್ಯಾಟ್ಸ್‌ಮನ್ ಉರ್ವಿಲ್ ಪಟೇಲ್ ಅವರನ್ನು ಪಡೆಯಲು ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಸಿಎಸ್‌ಕೆ ತಂಡಕ್ಕೆ ನೀಡಲು ಸಿದ್ಧವಿದೆ. ಸಿಎಸ್‌ಕೆ ಬೌಲಿಂಗ್ ಬಲಪಡಿಸಲು ಶಮಿ ಅಗತ್ಯವಿದ್ದರೆ, ಎಲ್‌ಎಸ್‌ಜಿ ತಮ್ಮ ಬ್ಯಾಟಿಂಗ್ ಲೈನ್ ಅಪ್ ಬಲಪಡಿಸಲು ನೋಡುತ್ತಿದೆ.

15 ವರ್ಷ, 6 ಟ್ರೋಫಿ; ಟ್ರೋಲಿಗರಿಗೆ ಆಹಾರವಾದ ಸಂಜೀವ್ ಗೋಯೆಂಕಾ

Rishabh Pant: ಲಕ್ನೋ ಸೂಪರ್​ಜೈಂಟ್ಸ್ ತಂಡದಲ್ಲಿ ದಾಖಲೆಯ 27 ಕೋಟಿ ರೂ.ಗೆ ಸೇರಿದ್ದ ರಿಷಭ್ ಪಂತ್, ಕೇವಲ ಎರಡೇ ವರ್ಷಕ್ಕೆ ತಂಡದಿಂದ ಹೊರಬಿದ್ದಿದ್ದಾರೆ. ನಾಯಕನಾಗಿ ಮತ್ತು ಆಟಗಾರನಾಗಿ ವೈಫಲ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. 2025ರ ಮೆಗಾ ಹರಾಜಿನ ಬಳಿಕ ಮಾಲೀಕ ಸಂಜೀವ್ ಗೋಯೆಂಕಾ, ಪಂತ್‌ರನ್ನು ಧೋನಿ-ರೋಹಿತ್‌ಗೆ ಹೋಲಿಸಿ ಭವಿಷ್ಯದ ನಾಯಕ ಎಂದು ಹೊಗಳಿದ್ದರು. ಈಗ ಅವರ ಈ ಯೂ-ಟರ್ನ್ ನೆಟ್ಟಿಗರ ಟ್ರೋಲಿಂಗ್‌ಗೆ ಕಾರಣವಾಗಿದೆ.

ಲಕ್ನೋ ಫ್ರಾಂಚೈಸಿಗೆ ಮೂರೇ ಪದಗಳಲ್ಲಿ ವಿದಾಯ ಹೇಳಿದ ರಿಷಭ್ ಪಂತ್..!

Rishabh Pant IPL: 2026ರ ಐಪಿಎಲ್ ನಂತರ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ. ಈ ಟ್ರೇಡ್‌ನಲ್ಲಿ ಕುಲ್ದೀಪ್ ಯಾದವ್ ಲಕ್ನೋಗೆ ತೆರಳಿದ್ದಾರೆ. ಪಂತ್ ವೇತನ 27 ಕೋಟಿಯಿಂದ 15 ಕೋಟಿಗೆ ಇಳಿದಿದೆ. ನಾಯಕತ್ವ ರಾಜೀನಾಮೆಗೆ ಫ್ರಾಂಚೈಸಿಯೇ ಒತ್ತಡ ಹೇರಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ. ಪಂತ್ ಕೇವಲ ಮೂರು ಪದಗಳಲ್ಲಿ ಲಕ್ನೋ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

IPL 2027: ಮರಳಿ ಡೆಲ್ಲಿಗೆ ರಿಷಭ್ ಪಂತ್, ಲಕ್ನೋ ಸೇರಲಿದ್ದಾರೆ ಕುಲ್ದೀಪ್..!

IPL 2027: 2027ರ ಐಪಿಎಲ್ ಮಾರ್ಚ್ 10ರಿಂದ ಆರಂಭವಾಗಲಿದೆ. ಈ ನಡುವೆ ಇಬ್ಬರು ಸ್ಟಾರ್ ಆಟಗಾರರ ತಂಡ ಬದಲಾವಣೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಲಕ್ನೋ ಸೂಪರ್‌ಜೈಂಟ್ಸ್‌ನ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳುವ ಸಾಧ್ಯತೆ ಇದೆ. ಡೆಲ್ಲಿಯ ಕುಲದೀಪ್ ಯಾದವ್ ಲಕ್ನೋ ಸೇರಬಹುದು. ಕನ್ನಡಿಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗುವ ವದಂತಿಗಳೂ ಇವೆ.

ಭರ್ಜರಿ ಬೌಲಿಂಗ್, ಸಿಡಿಲಬ್ಬರದ ಬ್ಯಾಟಿಂಗ್: ಅರ್ಜುನ್ ತೆಂಡೂಲ್ಕರ್ ಮಿಂಚಿಂಗ್!

Arjun Tendulkar: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 13 ಮ್ಯಾಚ್​ಗಳಲ್ಲಿ ಬೆಂಚ್ ಕಾದಿದ್ದ ಅರ್ಜುನ್ ತೆಂಡೂಲ್ಕರ್ ಇದೀಗ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದು ಕೂಡ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ. ಇದರ ಜೊತೆ ಬೌಲಿಂಗ್​ನಲ್ಲೂ ಪರಾಕ್ರಮ ಮೆರೆದಿದ್ದಾರೆ.

IPL 2026: ರಿಷಭ್ ಪಂತ್ ಜೊತೆಗೆ ಈ 4 ತಂಡಗಳ ನಾಯಕರಿಗೂ ಗೇಟ್​ಪಾಸ್ ಖಚಿತ

IPL 2026 Captaincy Shake-Up: ಐಪಿಎಲ್ 2026 ಮುಗಿಯುವುದಕ್ಕೂ ಮುನ್ನವೇ ಲಕ್ನೋ ನಾಯಕತ್ವದಿಂದ ರಿಷಭ್ ಪಂತ್ ಅವರನ್ನು ತೆಗೆದುಹಾಕಲಾಗಿದೆ. ತಂಡದ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣ. ಪಂತ್ ಜೊತೆಗೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ ಮತ್ತು ರುತುರಾಜ್ ಗಾಯಕ್ವಾಡ್ ಅವರೂ ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇವರೆಲ್ಲರ ವೈಯಕ್ತಿಕ ಮತ್ತು ತಂಡದ ಪ್ರದರ್ಶನ ಕಳಪೆಯಾಗಿದ್ದು, ಮುಂಬರುವ ಆವೃತ್ತಿಗೆ ಹೊಸ ನಾಯಕರ ನೇಮಕವಾಗುವ ಸಾಧ್ಯತೆಗಳಿವೆ.

IPL 2026: 1 ರನ್​​ ಬಾರಿಸಲು ರಿಷಭ್ ಪಂತ್ ಪಡೆದ ಸಂಬಳ ಬರೋಬ್ಬರಿ 9 ಲಕ್ಷ ರೂ..!

Rishabh Pant salary: ಸತತ ಮೂರನೇ ಬಾರಿಗೆ ಪ್ಲೇಆಫ್‌ ತಲುಪುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿಫಲವಾಗಿದೆ. ನಾಯಕ ರಿಷಭ್ ಪಂತ್ ಅವರ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ದೊಡ್ಡ ಹೊಡೆತ ನೀಡಿತು. 28.05 ಕೋಟಿ ರೂ. ವೇತನ ಪಡೆದ ಪಂತ್ ಕೇವಲ 312 ರನ್ ಗಳಿಸಿ, ಪ್ರತಿ ರನ್‌ಗೆ ₹9 ಲಕ್ಷ ವೆಚ್ಚ ಮಾಡಿಸಿದ್ದಾರೆ. ಅವರ ಕಳಪೆ ಪ್ರದರ್ಶನ ಮತ್ತು ನಾಯಕತ್ವದಿಂದ ತಂಡ ಪುನರ್ರಚನೆಯ ನಿರೀಕ್ಷೆಗಳಿವೆ.

ರಿಷಭ್ ಪಂತ್​ಗೆ ಗೇಟ್ ಪಾಸ್​? ಟಾಮ್ ಮೂಡಿ ಬಿಚ್ಚಿಟ್ಟ ಸತ್ಯ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ನೀರಸ ಪ್ರದರ್ಶನ ನೀಡಿದೆ. ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿದ್ದ ಲಕ್ನೋ ಸೂಪರ್ ಜೈಂಟ್ಸ್ ಗೆದ್ದಿರುವುದು ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ. ಈ ನಾಲ್ಕು ಗೆಲುವು ಹಾಗೂ ಎಂಟು ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ.

Rishabh Pant: ಸೋಲಿಗೆ ನಾನೊಬ್ಬನೇ ಜವಾಬ್ದಾರನಲ್ಲ… ಅವರು ಸಹ ಕಾರಣ!

IPL 2026 LSG vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2026) 68ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 196 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಶ್ರೇಯಸ್ ಅಯ್ಯರ್ (101) ಅವರ ಅಜೇಯ ಶತಕದೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 18 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

LSG vs PBKS: ಅರ್ಜುನ್ ತೆಂಡೂಲ್ಕರ್​ಗೆ ಕೊನೆಗೂ ಅವಕಾಶ ನೀಡಿದ ಲಕ್ನೋ

IPL 2026, LSG vs PBKS: ಐಪಿಎಲ್ 2026 ರ 68 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಎದುರಾಗಲಿವೆ. ಪ್ಲೇಆಫ್ ಆಸೆಯಲ್ಲಿರುವ ಪಂಜಾಬ್​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿದ್ದು, ಅರ್ಜುನ್ ತೆಂಡೂಲ್ಕರ್ ಲಕ್ನೋ ಪರ ಪದಾರ್ಪಣೆ ಮಾಡಲಿದ್ದಾರೆ. ಉಭಯ ತಂಡಗಳ ಆಡುವ ಹನ್ನೊಂದರಲ್ಲಿ ಮಹತ್ವದ ಬದಲಾವಣೆಗಳಾಗಿವೆ.

LSG vs PBKS IPL 2026 Highlights: ಸತತ 6 ಸೋಲುಗಳ ನಂತರ ಗೆದ್ದ ಪಂಜಾಬ್

Lucknow Super Giants vs Punjab Kings, IPL 2026 Highlights: ಐಪಿಎಲ್ 2026 ರ 68 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. 19 ನೇ ಸೀಸನ್​ನ ಲೀಗ್ ಹಂತದಲ್ಲಿ ಲಕ್ನೋ ಮತ್ತು ಪಂಜಾಬ್ ತಂಡಗಳ 14 ನೇ ಮತ್ತು ಕೊನೆಯ ಪಂದ್ಯ ಇದಾಗಿದೆ.

ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್
ಚೆನ್ನಮ್ಮ ಸಮಾಧಿ ಮುಂದೆಯೇ ಕುಳಿತು ದೇವೇಗೌಡರ ಕಣ್ಣೀರು
ಚೆನ್ನಮ್ಮ ಸಮಾಧಿ ಮುಂದೆಯೇ ಕುಳಿತು ದೇವೇಗೌಡರ ಕಣ್ಣೀರು
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್
ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು